Top SitesHome - Mobiletime.in

Machine Readiness

Stored receipt and evidence

Overall

20

Readable

65

Callable

0

Commerce

0

Payment

0

Machine Access

Inspect the site's MCP endpoint

Open MCP explorer

DialtoneApp can scan the stored discovery files for this domain, try the MCP initialize handshake, and show the raw protocol transcript.

Purchase boundary

read only

Control boundary

unknown

Payment rails

None

Payment providers

None

Payment methods

None

Payment protocols

None

Payment assets

None

Payment networks

None

Capabilities

None

Verified payment surface

No

Crypto only

No

Readable docs

robots, llms

Products

0

Variants

0

Priced variants

0

Currencies

0

Offers

0

Priced offers

0

Priced actions

0

Samples

Offer samples

No stored offer samples.

Samples

Action samples

No stored action samples.

Samples

Product samples

No stored product samples.

Document

robots.txt

Open robots.txt
User-agent: *
Disallow: /wp-content/uploads/wc-logs/
Disallow: /wp-content/uploads/woocommerce_transient_files/
Disallow: /wp-content/uploads/woocommerce_uploads/
Disallow: /*?add-to-cart=
Disallow: /*?*add-to-cart=
Disallow: /wp-admin/
Allow: /wp-admin/admin-ajax.php

# START YOAST BLOCK
# ---------------------------
User-agent: *
Disallow:

Sitemap: https://mobiletime.in/sitemap_index.xml
# ---------------------------
# END YOAST BLOCK

Document

llms.txt

Open llms.txt
# Mobiletime.in

> Mobile Media Network LLP


## Posts

- [ಜೈಲಿಗೆ ಹೋದರೂ ಸಾಲ ಕೊಡಲ್ಲ!](https://mobiletime.in/2026/02/even-if-you-go-to-jail-you-wont-be-able-to-give-a-loan/): ಭಟ್ಕಳದ ಮೊಹಿದ್ಧೀನ್ ಮುಲ್ಲಾ ಅವರು ಅಬ್ದುಲ್ ಸೆಮಿ ಮುಕ್ತೇಸರ್ ಅವರಿಗೆ 13 ಲಕ್ಷ ರೂ ಹಣ ನೀಡಿದ್ದು, ಆ ಹಣ ಮರಳಿಸದ ಕಾರಣ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇದೀಗ `ಜೈಲಿಗೆ ಹೋಗಿ ಬಂದ ಕಾರಣ ಹಣ ಕೊಡುವುದಿಲ್ಲ’ ಎಂದು ಅಬ್ದುಲ್ ಸೆಮಿ ಮುಕ್ತೇಸರ್ ಅವರು ಹೇಳುತ್ತಿದ್ದಾರೆ! ಭಟ್ಕಳದ ಮೂಸಾ ನಗರದಲ್ಲಿ ಮೊಹಿದ್ಧೀನ್ ಈರ್ಷಾದ್ ಮುಲ್ಲಾ ಅವರು ವಾಸವಾಗಿದ್ದಾರೆ. ಖಾಸಗಿ ಉದ್ಯೋಗಿಯಾಗಿರುವ ಅವರು ಮುಗ್ದಂ ಕಾಲೋನಿಯ ಅಬ್ದುಲ್ ಸೆಮಿ ಮುಕ್ತೇಸರ್ ಅವರಿಗೆ 13 ಲಕ್ಷ ರೂ ಆರ್ಥಿಕ ನೆರವು ನೀಡಿದ್ದರು. ಆ ಪೈಕಿ 2 ಲಕ್ಷ ರೂ ಹಣವನ್ನು ಅಬ್ದುಲ್ ಸೆಮಿ ಮುಕ್ತೇಸರ್ ಅವರು ಮೊಹಿದ್ಧೀನ್ ಮುಲ್ಲಾ ಅವರಿಗೆ ಮರಳಿಸಿದ್ದರು. ಜೊತೆಗೆ ಉಳಿದ ಹಣದ ಭದ್ರತೆಗಾಗಿ ಚೆಕ್’ನ್ನು ನೀಡಿದ್ದರು. ಸಾಕಷ್ಟು ಸಮಯ ಕಳೆದರೂ ನೀಡಿದ ಹಣ ಬಾರದ ಕಾರಣ ಮೊಹಿದ್ಧೀನ್ ಮುಲ್ಲಾ ಅವರು ಚೆಕನ್ನು ಬ್ಯಾಂಕಿಗೆ ಹಾಕಿದ್ದರು. ಆದರೆ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್‌ಬೌನ್ಸ್ ಆಗಿತ್ತು. ಈ ಬಗ್ಗೆ ಮೊಹಿದ್ಧೀನ್ ಮುಲ್ಲಾ
- [ಅನಂತ ಹೆಗಡೆ ಜೊತೆ ಕಾಗೇರಿ ದೋಸ್ತಿ!](https://mobiletime.in/2026/02/kageri-dosti-with-anantha-hegde/): `ಅನಂತಕುಮಾರ ಹೆಗಡೆ ಅವರು ಎಂದಿಗೂ ಬಿಜೆಪಿ ಬಿಟ್ಟು ಹೋಗಿಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. ಒಂದೆರಡು ಬಾರಿ ಅನಂತಕುಮಾರ ಹೆಗಡೆ ಅವರ ವಿರುದ್ಧ ಪರೋಕ್ಷ ಅಸಮಧಾನವ್ಯಕ್ತಪಡಿಸಿದ್ದ ಕಾಗೇರಿ ಅವರು ಇದೀಗ ಅವರ ಬಗ್ಗೆ ಶಾಂತವಾಗಿ ಮಾತನಾಡಿದ್ದಾರೆ. ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ಅನಂತಕುಮಾರ ಹೆಗಡೆ ಅವರು ಸದಾ ಬಿಜೆಪಿಯಲ್ಲಿಯೇ ಇದ್ದಾರೆ. ಅವರು ಎಂದಿಗೂ ಪಕ್ಷದಿಂದ ದೂರವಾಗಿಲ್ಲ. ಪಕ್ಷದ ಒಳಗೆ ಯಾವುದೇ ಗೊಂದಲಗಳಿಲ್ಲ’ ಎಂದು ಸ್ಪಷ್ಠಪಡಿಸಿದ್ದಾರೆ. ಅದಾದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವೇಶ್ವರ ಹೆಗಡೆ ಕಾಗೇರಿ `ನಾವು ರಾಜ್ಯಬಾರ ನಡೆಸಲು ಸಿದ್ಧ’ ಎಂಬ ಸಂದೇಶ ರವಾನಿಸಿದ್ದಾರೆ. `ರಾಜ್ಯದ ಜನರು ಐದು ವರ್ಷಗಳ ಆಡಳಿತಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದರು. ಆದರೆ ಕೇವಲ ಎರಡುವರೆ ವರ್ಷಗಳಲ್ಲೇ ಜನರ ವಿಶ್ವಾಸ ಗಳಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಅವರು ಹೇಳಿದ್ದಾರೆ. `ರಾಜ್ಯದ ಅಭಿವೃದ್ಧಿಗಾಗಿ ವಿವಿಧ
- [ಪ್ರವೇಶವಿಲ್ಲದ ಗರ್ಭಗುಡಿಗೆ ಕಳ್ಳರ ಪ್ರವೇಶ!](https://mobiletime.in/2026/02/thieves-enter-the-sanctum-sanctorum-which-is-inaccessible/): ಕಾರವಾರದ ಶೇಜವಾಡ ಬಳಿಯ ದೇವಾಲಯಕ್ಕೆ ಕಳ್ಳರು ನುಗ್ಗಿದ್ದಾರೆ. ಕೆಳಗಿನ ಮುಖೇರಿ ದೇಗುಲಕ್ಕೆ ನುಗ್ಗಿದ ನೀಚರು ದೇವಿ ಕೊರಳಿನಲ್ಲಿದ್ದ ಆಭರಣ ಕದ್ದು ಪರಾರಿಯಾಗಿದ್ದಾರೆ. ಕಾರವಾರದ ಕೆಳಗಿನ ಮುಖೇರಿಯಲ್ಲಿ ನವದುರ್ಗಾ ಗಿಂಡಿ ದೇವಾಲಯವಿದೆ. ಊರಿನವರ ಜೊತೆ ಬೇರೆ ಬೇರೆ ಭಾಗದ ಜನರು ಈ ದೇವಿಗೆ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಜನ ಶ್ರದ್ಧಾ-ಭಕ್ತಿಯಿಂದ ಇಲ್ಲಿ ಪೂಜೆ ಸಲ್ಲಿಸುತ್ತಿದ್ದು, ನಂಬಿದ ಎಲ್ಲರಿಗೂ ದೇವಿ ಒಳಿತು ಮಾಡುತ್ತದೆ ಎಂಬ ಮಾತಿದೆ. ಹೀಗಿರುವಾಗ ಫೆಬ್ರವರಿ 24ರ ರಾತ್ರಿ ಈ ದೇಗುಲದಲ್ಲಿ ಕಳ್ಳತನ ನಡೆದಿದೆ. ಜನ ಭಕ್ತಿಯಿಂದ ಪೂಜಿಸುವ ದೇವಿಯ ಕೊರಳಿನಲ್ಲಿದ್ದ ಮಾಂಗಲ್ಯವನ್ನೇ ಕಳ್ಳರು ದೋಚಿದ್ದಾರೆ. ಫೆ 24ರ ಸಂಜೆ ದೇವಾಲಯಕ್ಕೆ ಬಾಗಿಲು ಹಾಕಲಾಗಿತ್ತು. ಆ ದಿನ ರಾತ್ರಿ ಮುಂದಿನ ಬಾಗಿಲಿನ ಚಿಲಕ ಒಡೆದ ಕಳ್ಳರು ಒಳಗೆ ಪ್ರವೇಶಿಸಿದ್ದು, ಗರ್ಭಗುಡಿಯ ಬಾಗಿಲನ್ನು ಸಹ ಒಡೆದಿದ್ದಾರೆ. ಅದಾದ ನಂತರ ದೇವಿ ಕೊರಳಿನಲ್ಲಿದ್ದ 10 ಗ್ರಾಂ ತೂಕದ ಬೆಳ್ಳಿ ಸರ ಕದ್ದಿದ್ದಾರೆ. 1 ಗ್ರಾಂ ಬಂಗಾರದ ಲಾಕೇಟ್ ಜೊತೆಯಿದ್ದ ಎರಡು ಬೆಳ್ಳಿ ಕರಿಮಣಿ ಸರವನ್ನು ಸಹ
- [ಆಮಂತ್ರಣ ಇಲ್ಲದ ಮನೆಗೆ ಕಾಲಿಡದ ಸ್ನೇಹಿತ: ಥಳಿತ!](https://mobiletime.in/2026/02/a-friend-who-doesnt-enter-a-house-without-an-invitation-beaten/): ಮುಂಡಗೋಡ ರಾಮಾಪುರದ ಸಂತೋಷ ಕಾರಗಿ ಅವರು ಸ್ನೇಹಿತ ಮನೆಯ ಕಾರ್ಯಕ್ರಮಕ್ಕೆ ಹೋಗದ ಕಾರಣ ಹೊಡತ ತಿಂದಿದ್ದಾರೆ. ಸಂಬAಧಿಯೂ ಆಗಿರುವ ಸ್ನೇಹಿತ ವಿಜಯಕುಮಾರ ಕಾರಗಿ ಅವರ ಮನೆ ನೋಡಲು ಹುಡುಗಿ ಕಡೆಯುವರು ಆಗಮಿಸಿದ್ದು, ಆ ದಿನ ಆಮಂತ್ರಣ ಇಲ್ಲದ ಕಾರಣ ಸಂತೋಷ ಕಾರಗಿ ಅವರು ಹೋಗಿರಲಿಲ್ಲ. ಇದೇ ವಿಷಯಕ್ಕೆ ಸಿಟ್ಟಾದ ಬಸವರಾಜ ಕಾರಗಿ, ವಿನಾಯಕ ಕಾರಗಿ ಹಾಗೂ ಪ್ರದೀದ ಕಲವತ್ತಿ ಸೇರಿ ಸಂತೋಷ ಕಾರಗಿ ಅವರ ಮೇಲೆ ಕೈ ಮಾಡಿದ್ದಾರೆ. ಮುಂಡಗೋಡಿನ ರಾಮಾಪುರದಲ್ಲಿ ಸಂತೋಷ ಸಿದ್ದಲಿಂಗಪ್ಪ ಕಾರಗಿ ಅವರು ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ಫೆಬ್ರವರಿ 19ರಂದು ಅವರು ಬೈಕಿನ ಮೇಲೆ ಹೊರಟಾಗ ರಾಮಾಪುರದ ಬಸವರಾಜ ಕಾರಗಿ ಹಾಗೂ ವಿನಾಯಕ ಕಾರಗಿ ಅವರು ಬೈಕಿಗೆ ಅಡ್ಡಲಾಗಿ ಕೈ ಮಾಡಿದ್ದಾರೆ. ಆಗ, ಸಂತೋಷ ಕಾರಗಿ ಅವರು ಬೈಕ್ ನಿಲ್ಲಿಸಿದ್ದು, `ವಿಜಯಕುಮಾರ ಕಾರಗಿ ಅವರ ಮನೆ ನೋಡಲು ಹೆಣ್ಣಿನ ಕಡೆಯವರು ಬಂದಾಗ ನೀ ಏಕೆ ಬರಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಆಗ, `ವಿಜಯಕುಮಾರ ನನಗೆ ಆಮಂತ್ರಣ ನೀಡಿಲ್ಲ’ ಎಂದು
- [ಜನೌಷಧಿ ಕೇಂದ್ರ: ಜನರ ದೂರಿಗೆ ಸ್ಪಂದಿಸಿದ ಸಂಸದ](https://mobiletime.in/2026/02/janaushadhi-kendra-mp-responds-to-peoples-complaints/): `ಕಡಿಮೆ ದರದಲ್ಲಿ ಉನ್ನತ ಗುಣಮಟ್ಟದ ಔಷಧಿ ಸಿಗಲಿ’ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಎಲ್ಲಡೆ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ, `ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಔಷಧಿಗಳೇ ಸಿಗುತ್ತಿಲ್ಲ’ ಎಂಬ ಆಕ್ಷೇಪವ್ಯಕ್ತವಾಗಿದೆ. ಇದೇ ವಿಷಯವಾಗಿ ಶುಕ್ರವಾರ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿದ್ದು, `ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಜನೌಷಧಿ ಕೇಂದ್ರದಲ್ಲಿ ಔಷಧಿ ಸಿಗಬೇಕು’ ಎಂದು ತಾಕೀತು ಮಾಡಿದ್ದಾರೆ. `ಜನೌಷಧಿ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಹೆಚ್ಚು ಬೇಡಿಕೆ ಇರುವ ಔಷಧಗಳ ಸಿಗುತ್ತಿಲ್ಲ ಎಂಬ ದೂರುಗಳಿವೆ. ಸಾರ್ವಜನಿಕರಿಗೆ ದುಬಾರಿ ಬೆಲೆಯ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ನೀಡುವ ಉದ್ದೇಶದಿಂದಲೇ ಜನೌಷಧಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಯಾವುದೇ ಔಷಧಗಳ ಕೊರತೆ ಆಗದಂತೆ ಎಚ್ಚರಿಕೆವಹಿಸಬೇಕು’ ಎಂದವರು ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದ್ದಾರೆ. ಇದರೊಂದಿಗೆ ಅಗತ್ಯವಿರುವ ಕಡೆ ಹೊಸ ಜನೌಷಧಿ ಕೇಂದ್ರಗಳನ್ನು ತೆರೆಯಲು ಅಗತ್ಯ ಅನುಮತಿ ಕೊಡಬೇಕು’ ಎಂದು ಸೂಚಿಸಿದ್ದಾರೆ. `ಆರೋಗ್ಯ ಇಲಾಖೆಯ ಹೊಸ ಕಟ್ಟಡಗಳು ನಿರ್ಮಾಣವಾದ ನಂತರ ಹಳೆಯ ಕಟ್ಟಡಗಳನ್ನು
- [ಸಚಿವರ ಮೌನ ಪ್ರಶ್ನಿಸಿದ ಸಾಮಾಜಿಕ ಹೋರಾಟಗಾರ](https://mobiletime.in/2026/02/social-activist-questions-ministers-silence/): ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಸ್ವಕ್ಷೇತ್ರ ಭಟ್ಕಳದಲ್ಲಿ ಅನಾಹುತಗಳ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಅಚ್ಚರಿವ್ಯಕ್ತಪಡಿಸಿದ್ದಾರೆ. ಶಾಂತಿಪ್ರಿಯರ ಜಿಲ್ಲೆ ಎಂದೇ ಹೆಸರುಪಡೆದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತರೇ ಕೈಯಲ್ಲಿ ಆಯುಧಹಿಡಿದ ಬಗ್ಗೆ ಅವರು ಆತಂಕವ್ಯಕ್ತಪಡಿಸಿದ್ದಾರೆ. `ಈಚೆಗೆ ಭಟ್ಕಳ ಮತ್ತು ಮುರುಡೇಶ್ವರದ ಆಸುಪಾಸಿನಲ್ಲಿ ಸರಣಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ಬೈಲೂರಿನಲ್ಲಿ ಅಪ್ರಾಪ್ತ ಮುಸ್ಲಿಮರು ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅದಾಗಿಯೂ, ಅದನ್ನು ಆಕಸ್ಮಿಕ ಎಂಬAತೆ ಬಿಂಬಿಸಲಾಗಿದೆ. ಇದೊಂದು ವ್ಯವಸ್ಥಿತ ಸಂಚಾಗಿದ್ದು, ಆಡಳಿತ ಯಂತ್ರದ ವೈಫಲ್ಯಕ್ಕೆ ಹಿಡಿದ ಕನ್ನಡಿ’ ಎಂದವರು ಅವಲೋಕಿಸಿದ್ದಾರೆ. `ಮಂಕಾಳು ವೈದ್ಯರ ಕ್ಷೇತ್ರದಲ್ಲಿಯೇ ಇಂಥ ಘಟನೆ ನಡೆದರೂ ಅವರು ಮೌನವಾಗಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಇಂತ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದಾರೆಯೇ?’ ಎಂದು ಅನಂತಮೂರ್ತಿ ಹೆಗಡೆ ಅವರು ಪ್ರಶ್ನಿಸಿದ್ದಾರೆ. `ಮಾದಕ ವ್ಯಸನಕ್ಕೆ ಒಳಗಾಗಿ ಅಪ್ರಾಪ್ತರು
- [ಬ್ರಾಹ್ಮಣರ ಅವಹೇಳನ: ಸಿಗಂದೂರು ಆಡಳಿತಾಧಿಕಾರಿ ವಿರುದ್ಧ ಕಾನೂನು ಕ್ರಮ!](https://mobiletime.in/2026/02/insulting-brahmins-legal-action-against-sigandur-administrator/): ಹೊನ್ನಾವರದ ಮಾಳ್ಕೋಡಿನಲ್ಲಿ ನಡೆದ ರಾಮಮಂದಿರ ಪ್ರತಿಷ್ಠಾಪನಾ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ವಿರುದ್ಧ ಕೆಟ್ಟದಾಗಿ ನಿಂದಿಸಿದ ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತಾಧಿಕಾರಿ ರಾಮಪ್ಪ ವಿರುದ್ಧ ಕಾನೂನು ಕ್ರಮವಾಗಿದೆ. ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತರ ಪರಿಷತ್ ನೀಡಿದ ದೂರಿನ ಆಧಾರದಲ್ಲಿ ಹೊನ್ನಾವರದ ಮಂಕಿ ಪೊಲೀಸ್ ಠಾಣೆಯಲ್ಲಿ ರಾಮಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಹೊನ್ನಾವರದ ಮಾಳ್ಕೋಡುವಿನಲ್ಲಿ ರಾಮ ಮಂದಿರ ಚಾರಿಟೇಬಲ್ ಟ್ರಸ್ಟಿನವರು ಜನವರಿ 29ರಿಂದ 31ರವರೆಗೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮದ ಮೂರನೇ ದಿನ ವೇದಿಕೆ ಏರಿದ ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತಾಧಿಕಾರಿ ರಾಮಪ್ಪ ಅವರು ಸಾವಿರಾರು ಜನರ ಮುಂದೆ ಬ್ರಾಹ್ಮಣರನ್ನು `– ಮಕ್ಕಳು’ ಎಂದು ಬೈದಿದ್ದರು. ಅನೇಕ ಬಾರಿ ಅದೇ ಮಾತನ್ನು ಅವರು ಪುನರುಚ್ಚರಿಸಿದ್ದರು. ಜೊತೆಗೆ `ಬ್ರಾಹ್ಮಣರೆಲ್ಲರೂ — ಆಗಿ ಸಾಯುತ್ತಾರೆ’ ಎಂದು ಶಫಿಸಿದ್ದರು. ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ರಾಮಪ್ಪ ಅವರು ದುರುದ್ದೇಶದಿಂದ ಬ್ರಾಹ್ಮಣರ ಅವಹೇಳನ ಮಾಡಿದ್ದು, ಆ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ಜನವರಿ 29ರಿಂದ
- [ಅನಂತಪರ್ವ: ಈ ಬಾರಿ ಭಟ್ಕಳದಿಂದಲೇ ಆಟ ಶುರು!](https://mobiletime.in/2026/02/ananthaparva-this-time-the-game-starts-from-bhatkal/): ರಾಜಕೀಯವಾಗಿ ತಟಸ್ಥ ನೀತಿ ಅನುಸರಿಸಿದ್ದ ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಕಳೆದ ಎರಡು ವಾರದಿಂದ ಅನಂತಕುಮಾರ ಹೆಗಡೆ ವಿಷಯವಾಗಿ ಚರ್ಚೆ ಶುರುವಾಗಿದ್ದು, ಅವರು ಮತ್ತೆ ಸಕ್ರೀಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆರು ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರು ಒಮ್ಮೆ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಆದರೆ, 2024ರ ವೇಳೆ ಅನಂತಕುಮಾರ ಹೆಗಡೆ ಅವರಿಂದ ಬಿಜೆಪಿ ಪಕ್ಷಕ್ಕೆ ಹಾನಿ ಆದ ಆರೋಪದ ಹಿನ್ನಲೆ ಪಕ್ಷ ಅವರನ್ನು ದೂರ ಮಾಡಿದ್ದು, ಟಿಕೆಟ್ ಸಹ ಕೊಟ್ಟಿರಲಿಲ್ಲ. ಚುನಾವಣಾ ಅವಧಿಯಲ್ಲಿಯೂ ಅನಂತಕುಮಾರ ಹೆಗಡೆ ಅವರನ್ನು ಮಾತನಾಡಿಸುವ ಪ್ರಯತ್ನ ನಡೆದಿರಲಿಲ್ಲ. ಹೀಗಾಗಿ ಅನಂತಕುಮಾರ ಹೆಗಡೆ ಅವರು ಬಿಜೆಪಿಯಿಂದ ದೂರವುಳಿದಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿರಲಿಲ್ಲ. ತಮ್ಮ ಪೋಸ್ಟರ್‌ಗಳಲ್ಲಿಯೂ ಅವರು ಬಿಜೆಪಿ ಚಿಹ್ನೆ ಹಾಗೂ ಮಾಜಿ ಸಂಸದ ಎಂಬ ಪದವನ್ನು ಬಳಸುತ್ತಿರಲಿಲ್ಲ. ಈ ಎಲ್ಲದರ ನಡುವೆ ಅನಂತಕುಮಾರ ಹೆಗಡೆ ಅವರು ಮತ್ತೆ ರಾಜಕಾರಣಕ್ಕೆ ಬರುತ್ತಾರೆ ಎಂಬ ವದಂತಿ
- [ಅತ್ತೆ-ನಾದಿನಿ ಕಾಟ: ಅತಿಥಿ ಉಪನ್ಯಾಸಕಿಗೆ ಅನ್ಯಾಯ!](https://mobiletime.in/2026/02/mother-in-law-in-law-conflict-injustice-to-the-guest-lecturer/): ಸಿದ್ದಾಪುರದಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಜ್ಯೋತಿ ನಾಯ್ಕ ಅವರ ಮೇಲೆ ಅವರ ಕುಟುಂಬದಿoದಲೇ ಅನ್ಯಾಯವಾಗಿದೆ. ಜ್ಯೋತಿ ನಾಯ್ಕ ಅವರ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ಜ್ಯೋತಿ ನಾಯ್ಕ ಅವರ ಅನಾರೋಗ್ಯ-ಅಸಹಾಯಕತೆಯನ್ನು ಅವರ ಅತ್ತೆ ಹಾಗೂ ನಾದಿನಿ ದುರುಪಯೋಗಪಡಿಸಿಕೊಂಡಿದ್ದಾರೆ. ಸಿದ್ದಾಪುರದ ಬಾಲಿಕೊಪ್ಪದ ಜ್ಯೋತಿ ಸೋಮಶೇಖರ ನಾಯ್ಕ (35) ಅವರು ಸದ್ಯ ಸುಂಕತ್ತಿಯಲ್ಲಿ ವಾಸವಾಗಿದ್ದಾರೆ. ಅತಿಥಿ ಉಪನ್ಯಾಸಕರಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. 2023ರ ಅವಧಿಯಲ್ಲಿ ಜ್ಯೋತಿ ನಾಯ್ಕ ಅವರ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ಅದಾದ ನಂತರ ಜ್ಯೋತಿ ನಾಯ್ಕ ಅವರ ಜೊತೆ ಅವರ ಮಗಳ ಬದುಕು ಶೋಚನೀಯ ಸ್ಥಿತಿ ತಲುಪಿದೆ. ಜ್ಯೋತಿ ನಾಯ್ಕ ಅವರ ಅತ್ತೆ ಬಾಲಿಕೊಪ್ಪದ ಸರೋಜಾ ಹನುಮಂತ ನಾಯ್ಕ, ಬೆಳಟ್ಟೆಯಲ್ಲಿರುವ ನಾದಿನಿ ದಿವ್ಯಾ ರಾಘವೇಂದ್ರ ನಾಯ್ಕ ಹಾಗೂ ನಾದಿನಿಯ ಗಂಡ ರಾಘವೇಂದ್ರ ನಾಯ್ಕ ಸೇರಿ ಜ್ಯೋತಿ ನಾಯ್ಕ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಊಟ-ವಸತಿ-ಬಟ್ಟೆಯನ್ನು ಸಹ ನೀಡದೇ ಅವರು ಸತಾಯಿಸುತ್ತಿದ್ದಾರೆ. ಜ್ಯೋತಿ ನಾಯ್ಕ ಅವರ ಮಗಳಿಗೆ ನೆರವು ನೀಡುವುದಾಗಿ ಹೇಳಿದ್ದರೂ, ಅವರಿಗೆ ಸಹಾಯ ಮಾಡಿಲ್ಲ.
- [ನೇಣಿಗೆ ಶರಣಾದ ವ್ಯಸನಿ](https://mobiletime.in/2026/02/addict-who-surrendered-to-the-hangman/): ಆದಾಯಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಸರಾಯಿ ಸೇವಿಸುತ್ತಿದ್ದ ಶಿರಸಿಯ ಗಣೇಶ ಜಡೆ ಅವರು ಮಾನಸಿಕ ವೇದನೆ ಸಹಿಸಿಕೊಳ್ಳಲಾಗದೇ ಸಾವನಪ್ಪಿದ್ದಾರೆ. ಬಾಗಿಲು ತಟ್ಟಿದರೂ ಮಾತನಾಡದ ಮಗನನ್ನು ಕಿಟಕಿ ಕಿಂಡಿಯಲ್ಲಿ ನೋಡಿದ ಅನ್ನಪೂರ್ಣ ಜಡೆ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಶಿರಸಿಯ ಬನವಾಸಿ ರಸ್ತೆಯ ಗಾಯತ್ರಿ ನಗರದಲ್ಲಿ ಗಣೇಶ ಮೋಹನ ಜಡೆ (40) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ನಿತ್ಯವೂ ಸರಾಯಿ ಕುಡಿಯುವ ಚಟ ಹೊಂದಿದ್ದ ಅವರು ದುಡಿಮೆಯ ಹಣವನ್ನು ವ್ಯಸನಕ್ಕೆ ಮೀಸಲಿರಿಸಿದ್ದರು. ಕುಡಿತ ಒಳ್ಳೆಯದಲ್ಲ ಎಂದು ಬುದ್ದಿ ಹೇಳಿದರೂ ಅದನ್ನು ಕೇಳುತ್ತಿರಲಿಲ್ಲ. ಫೆಬ್ರವರಿ 24ರ ರಾತ್ರಿ ಮನೆಗೆ ಬಂದ ಗಣೇಶ ಜಡೆ ಅವರು ನೇರವಾಗಿ ತಮ್ಮ ಕೋಣೆಗೆ ಹೋದರು. ಬಾಗಿಲಿಗೆ ಚಿಲಕ ಹಾಕಿಕೊಂಡ ಅವರು ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ. ಅನ್ನಪೂರ್ಣ ಜಡೆ ಅವರು ಮಗನನ್ನು ಕರೆದರು. ಆದರೂ, ಹೊರ ಬಾರದ ಕಾರಣ ಕಿಟಕಿಯ ಕಿಂಡಿಯಿAದ ಮಗನನ್ನು ನೋಡುವ ಪ್ರಯತ್ನ ಮಾಡಿದರು. ಆದರೆ, ಮನೆಯೊಳಗಿನ ಫ್ಯಾನಿಗೆ ಗಣೇಶ ಜಡೆ ಅವರು
- [ಭೂಮಿ ಹಕ್ಕು: ಅರ್ಜಿ ವಿಚಾರಣೆಗೆ ಒಂದೂ ಪುರಾವೆ ಇದ್ದರೂ ಸಾಕು!](https://mobiletime.in/2026/02/land-rights-even-one-piece-of-evidence-is-enough-for-the-application-to-be-heard/): ಅರಣ್ಯ ಹಕ್ಕು ವಿಚಾರವಾಗಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಉತ್ತರಕನ್ನಡ ಜಿಲ್ಲಾ ಅರಣ್ಯಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ನಿಯೋಗ ಮತ್ತೊಮ್ಮೆ ಧ್ವನಿ ಎತ್ತಿದೆ. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನಿಯೋಗದವರು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. `ತಿರಸ್ಕ್ರತವಾಗಿರುವ ಎಲ್ಲಾ ಅರಣ್ಯ ಹಕ್ಕು ಅರ್ಜಿಗಳ ಪುನರ್ ಪರಿಶೀಲನೆ ಕಾರ್ಯಗಳು ಜನರಿಗೆ ನ್ಯಾಯ ಒದಗಿಸುವ ಮಾದರಿಯಲ್ಲಿ ನಡೆಯಬೇಕು’ ಎಂದು ಹೋರಾಟಗಾರ ಚಂದ್ರಕಾoತ ಕೋಚ್ರೇಕರ್ ಅವರು ಆಗ್ರಹಿಸಿದ್ದಾರೆ. `ಸ್ಥಳ ಮಹಜರು ಪ್ರಕ್ರಿಯೆಗಳು ಭೂಮಿಯ ಹಕ್ಕು ಸಿಗಲು ಜನರಿಗೆ ಅಗತ್ಯ ಪುರಾವೆಯಾಗಬೇಕು.ಆ ದಿಶೆಯಲ್ಲಿ ಅಗತ್ಯ ಬದಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು. ಆ ಮೂಲಕ ವಸತಿ ಮತ್ತು ಜೀವನೋಪಾಯಕ್ಕೆ 2005ರ ಪೂರ್ವದಿಂದ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಜಿಲ್ಲೆಯ ಜನರಿಗೆ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯಡಿ ಭೂಮಿಯ ಹಕ್ಕು ನೀಡಲು ಕ್ರಮ ಆಗಬೇಕು’ ಎಂದು ಅವರು ಜಿಲ್ಲಾಧಿಕಾರಿಗಳ ಮುಂದೆ ನಿಂತು ಮಾತನಾಡಿದ್ದಾರೆ. ವಿವಿಧ ಸಂಘಟನೆಗಳ ಹೋರಾಟ ಪ್ರಮುಖರ ನಿಯೋಗದ ಜೊತೆ ಅವರು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಎಲ್ಲರೂ ಸೇರಿ
- [ಕೋಟಿ ವೆಚ್ಚದ ಕಾಮಗಾರಿ ಕಳಪೆ!](https://mobiletime.in/2026/02/poor-work-costing-crores/): ಕುಮಟಾದ ತದಡಿ ಅಳವೆ ಪ್ರದೇಶದಲ್ಲಿ ಕೋಟಿ ರೂ ವೆಚ್ಚದಲ್ಲಿ ಹೂಳು ತೆಗೆಯುವ ಕೆಲಸ ನಡೆಯುತ್ತಿದ್ದು, ಹೂಳೆತ್ತುವ ಕಾಮಗಾರಿ ಕಳಪೆ ಎಂಬ ದೂರು ಕೇಳಿ ಬಂದಿದೆ. ಆಳ ಸಮುದ್ರಕ್ಕೆ ಯಾಂತ್ರಿಕೃತ ದೋಣಿ ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತಿರುವ ಹಿನ್ನಲೆ ಮೀನುಗಾರರು ಹೂಳು ತೆಗೆಯುವಂತೆ ಒತ್ತಾಯಿಸಿದ್ದು, ಸದ್ಯ ಮೀನುಗಾರರೇ ಆ ಕಾಮಗಾರಿಯ ಬಗ್ಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ 2.65 ಕೋಟಿ ರೂ ವೆಚ್ಚದಲ್ಲಿ ಹೂಳೆತ್ತುವ ಕೆಲಸ ನಡೆಯುತ್ತಿದೆ. ಈ ಕೆಲಸ ನಿರ್ವಹಿಸಲು ಬೃಹತ್ ಆಕಾರದ ಡ್ರೇಜಿಂಗ್ ಮಷಿನ್ ಬಂದಿದೆ. ಆ ಯಂತ್ರ ದಿನಕ್ಕೆ ಒಮ್ಮೆ ಮಾತ್ರ ಅಳಿವೆ ಪ್ರದೇಶಕ್ಕೆ ಹೋಗಿ ಬರುತ್ತಿದ್ದು, ಮತ್ತೆರಡು ದಿನ ಖಾಲಿ ನಿಲ್ಲುತ್ತಿದೆ. ತದಡಿ ಬಂದಿರನಲ್ಲೇ ಲಂಗರು ಹಾಕಿರುವ ಈ ಯಂತ್ರ ಈವರೆಗೆ ಎಷ್ಟು ಪ್ರಮಾಣದಲ್ಲಿ ಹೂಳೆತ್ತಿದೆ? ಎನ್ನುವುದರ ಬಗ್ಗೆ ಜನರಿಗೆ ಮಾಹಿತಿ ಸಿಗುತ್ತಿಲ್ಲ. ತೆಗೆದ ಹೂಳು ಎಲ್ಲಿ ಹಾಕುತ್ತಾರೆ? ಎಂಬ ಪ್ರಶ್ನೆಗೂ ಉತ್ತರವಿಲ್ಲ. `ಅನಗತ್ಯ ಹಣ ಪೋಲು ಮಾಡುವ ಬದಲು ಸರಿಯಾದ ರೀತಿ ಕೆಲಸ ನಿರ್ವಹಿಸಬೇಕು. ಹೂಳು ಎತ್ತುವ ನೆಪದಲ್ಲಿ
- [ಅರಣ್ಯವಾಸಿಗಳ ಅಳಲು ಆಲಿಸದ ಮುಖ್ಯಮಂತ್ರಿ: ಆಕ್ರೋಶ](https://mobiletime.in/2026/02/outrage-over-chief-minister-not-listening-to-forest-dwellers-cries/): `ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರ ನಿಲುವು ಹೊಂದಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಸಹ ರೈತರ ಸಮಸ್ಯೆ ಆಲಿಸಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. ಅರಣ್ಯ ಅತಿಕ್ರಮಣ ಸೇರಿ ಹಲವು ಸಮಸ್ಯೆಗಳಿದ್ದರೂ ಆ ಬಗ್ಗೆ ಕಿಂಚಿತ್ತು ಕಾಳಜಿವಹಿಸದ ಜನಪ್ರತಿನಿಧಿಗಳ ವಿರುದ್ಧ ಅವರು ಕಿಡಿಕಾರಿದ್ದಾರೆ. `ಕಳೆದ 50 ವರ್ಷಗಳಿಂದ ಅರಣ್ಯ ಅತಿಕ್ರಮಣದಾರರು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ 80 ಸಾವಿರ ಅರಣ್ಯ ಅತಿಕ್ರಮಣ ಕುಟುಂಬಗಳಿದ್ದು, ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ನಡೆದಿಲ್ಲ. ಮುಖ್ಯಮಂತ್ರಿಗಳ ಭೇಟಿ ಸಮಯದಲ್ಲಿ ಈ ವಿಷಯವಾಗಿ ಮಾತನಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ಶಾಂತಾರಾಮ ನಾಯಕ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ. ಅಂಕೋಲಾದ ಕನ್ನಡ ಭವನದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಮಟ್ಟದ 6ನೇ ರೈತ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿಯೇ ಶಾಂತರಾಮ ನಾಯಕ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ವರ್ತನೆಯನ್ನು ಖಂಡಿಸಿದ್ದಾರೆ. `ಸದ್ಯ
- [ಮೊಬೈಲ್ ಕಳೆದುಕೊಂಡ ಪವರ ಮ್ಯಾನ್: ನಿಗೂಢ ನಾಪತ್ತೆ!](https://mobiletime.in/2026/02/power-man-loses-his-mobile-phone-mysterious-disappearance/): ಸಿದ್ದಾಪುರದ ಹೆಸ್ಕಾಂ ಕಚೇರಿ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮಹಾಕೂಟೇಶ್ವರ ಗಾಜಿ ಅವರ ಮೊಬೈಲ್ ಕಾಣೆಯಾಗಿದ್ದು, ಅದಾದ ಕೆಲ ದಿನದಲ್ಲಿ ಮಹಾಕೂಟೇಶ್ವರ ಗಾಜಿ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಕಳೆದ 25 ದಿನಗಳಿಂದ ಹುಡುಕಾಟ ನಡೆಸಿದರೂ ಮಹಾಕೂಟೇಶ್ವರ ಗಾಜಿ ಅವರ ಸುಳಿವು ಸಿಕ್ಕಿಲ್ಲ. ಗದಗದ ರೋಣ ಬಳಿಯ ಮಲ್ಲಾಪುರ ಮೂಲದ ಮಹಾಕೂಟೇಶ್ವರ ಯಲ್ಲಪ್ಪ ಗಾಜಿ (35) ಅವರು ಹೆಸ್ಕಾಂ ನೌಕರರಾಗಿದ್ದರು. ಸಿದ್ದಾಪುರದಲ್ಲಿ ಜೂನಿಯರ್ ಪವರ್ ಮ್ಯಾನ್ ಆಗಿ ಅವರು ಕೆಲಸ ಮಾಡಿಕೊಂಡಿದ್ದರು. ಅಲ್ಲಿನ ಹೆಸ್ಕಾಂ ವಸತಿ ನಿಲಯದಲ್ಲಿ ಅವರು ಒಬ್ಬರೇ ವಾಸವಾಗಿದ್ದರು. ಇನ್ನೂ ಮದುವೆ ಆಗಿರದ ಮಹಾಕೂಟೇಶ್ವರ ಗಾಜಿ ಅವರು ಮದ್ಯ ಸೇವನೆಯ ದುಶ್ಚಟವನ್ನು ಹೊಂದಿದ್ದರು. ಫೆಬ್ರವರಿ 1ರಂದು ಮಹಾಕೂಟೇಶ್ವರ ಗಾಜಿ ಅವರು ತಮ್ಮ ಸಹೋದರ ಹನಮಪ್ಪ ಗಾಜಿ ಅವರಿಗೆ ಫೋನ್ ಮಾಡಿದ್ದರು. `ನನ್ನ ಮೊಬೈಲ್ ಕಳೆದುಹೋಗಿದೆ. ತುರ್ತಾಗಿ ಹಣದ ಅಗತ್ಯವಿದೆ’ ಎಂದು ಅವರು ಆ ವೇಳೆ ಹೇಳಿದ್ದರು. ಅದಾದ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಎಷ್ಟು ದಿನ
- [ತೆಂಗಿನ ಮರಕ್ಕೆ ಕಾಟ ಕೊಡುವ ಕೆಂಪು ಕೀಟ!](https://mobiletime.in/2026/02/a-red-insect-that-threatens-coconut-trees/): ಸಮೃದ್ಧವಾಗಿ ಬೆಳೆದ ತೆಂಗಿನ ಮರಗಳಿಗೆ ಕೆಂಪು ಮೂತಿಯ ಕೀಟವೊಂದು ಕಾಟ ಕೊಡುತ್ತಿದೆ. ಸಂಪತ್ಬರಿತ ಫಲ ಕೊಡುವ ಮರಗಳನ್ನು ಸಹ ಸಣ್ಣ ಬಗೆಯ ಕೀಟವೊಂದು ಸಾಯಿಸುತ್ತಿದೆ. ಸದ್ಯ ಅಂಕೋಲಾ ಹಿಚಕಡ, ಶಟಗೇರಿ, ಕಣಗಿಲ್, ಮೊಗಟಾ ಭಾಗದ ತೆಂಗಿನ ಮರಗಳು ಕೀಟ ಬಾಧೆಯಿಂದ ಸೊರಗಿವೆ. ದುಂಬಿ ಹುಳುಗಳ ದಾಳಿಗೆ ತೆಂಗಿನ ಮರವೇ ನಾಶವಾಗುತ್ತಿದೆ. ತೆಂಗಿನ ಮರದ ಕಾಂಡಕ್ಕೆ ಸಣ್ಣ ಸಣ್ಣ ರಂದ್ರ ಮಾಡುವ ಕೀಟಗಳು ಅದರ ಒಳಗೆ ನುಸುಳಿ ಮೃದು ಭಾಗವನ್ನು ತಿನ್ನುತ್ತಿವೆ. ಕಾಂಡ ಕೊರೆದು ಆಗುವ ಹಾನಿ ಸಹಿಸಲಾಗದೇ ಮರ ಬೀಳುತ್ತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್-ಡಿಸೆAಬರ್ ಅವಧಿಯಲ್ಲಿ ಈ ಕೀಟದ ಕಾಟ ಜೋರಾಗಿರುತ್ತಿತ್ತು. ಆದರೆ, ಇದೀಗ ಫೆಬ್ರವರಿಯಲ್ಲಿಯೇ ಕೀಟ ಬಾಧೆ ಉಲ್ಬಣವಾಗಿದೆ. ಮರದ ಕಾಂಡದ ಮೇಲೆ ಚಿಕ್ಕ ಚಿಕ್ಕ ರಂದ್ರ ಕಾಣಿಸುವುದು ಕೀಟ ಬಾಧೆಯನ್ನು ಗುರುತಿಸುವ ಲಕ್ಷಣಗಳಲ್ಲಿ ಒಂದು. ಕೀಟದ ದಾಳಿಗೆ ಮರ ತತ್ತರಿಸುತ್ತಿದ್ದು, ರೈತರು ಮುನ್ನಚ್ಚರಿಕೆವಹಿಸದೇ ಇದ್ದರೆ ಮರ ಉಳಿಸಿಕೊಳ್ಳುವುದು ಸಹ ಕಷ್ಟವಾಗಲಿದೆ. `ಕೀಟದಿಂದ ತೆಂಗಿನ ಮರ ರಕ್ಷಿಸಿಕೊಳ್ಳಲು ತೋಟದಲ್ಲಿ ಸ್ವಚ್ಚತೆ ಕಾಪಾಡಬೇಕು.
- [ದಾರಿಗಾಗಿ ದಾಯಾದಿಗಳ ಕಲಹ: ಬೆಟ್ಟದ ಹಾದಿಗಾಗಿ ಬೆತ್ತದ ಏಟು!](https://mobiletime.in/2026/02/the-fight-between-the-brothers-over-the-road-a-cane-fight-for-the-path-to-the-hill/): ಸಿದ್ದಾಪುರ ಮಲಕಾರುವಿನ ಚಂದ್ರಶೇಖರ ಹೆಗಡೆ ಹಾಗೂ ಅವರ ಪುತ್ರ ವಿದ್ಯಾದರ ಹೆಗಡೆ ಅವರ ಮೇಲೆ ಅವರ ಕುಟುಂಬದವರೇ ಬೆತ್ತದಿಂದ ಹೊಡೆದಿದ್ದಾರೆ. ಬೆಟ್ಟದ ದಾರಿ ಹಕ್ಕಿನ ವಿಷಯದಲ್ಲಿ ಈ ಹೊಡೆದಾಟ ನಡೆದಿದೆ. ಸಿದ್ದಾಪುರದ ಮಲಕಾರು ಬಳಿಯ ಕಕ್ಕರಸವಲಿನಲ್ಲಿ ಚಂದ್ರಶೇಖರ ರಾಮಕೃಷ್ಣ ಹೆಗಡೆ ಹಾಗೂ ಅವರ ಪುತ್ರ ವಿದ್ಯಾಧರ ಹೆಗಡೆ ಅವರು ವಾಸವಾಗಿದ್ದಾರೆ. ಮುಠ್ಠಲಿ ಗ್ರಾಮದ ಸರ್ವೇ ನಂ 108/2ರಲ್ಲಿ ಅವರ ಕುಟುಂಬಕ್ಕೆ ತೋಟವಿದೆ. ಚಂದ್ರಶೇಖರ ಹೆಗಡೆ ಅವರ ದೊಡ್ಡಪ್ಪನ ಮಗನಾದ ಲಕ್ಷೀನಾರಾಯಣ ಮಹಾಬಲೇಶ್ವರ ಹೆಗಡೆ ಅವರಿಗೂ ಅದೇ ಭಾಗದಲ್ಲಿ ತೋಟವಿದ್ದು, ಈ ಎರಡು ತೋಟಕ್ಕೆ ಹೋಗಲು ಅಲ್ಲಿನ ಬೆಟ್ಟದಲ್ಲಿ ದಾರಿ ಮಾಡಲಾಗಿದೆ. ಆದರೆ, ಆ ದಾರಿಯಲ್ಲಿ ಚಂದ್ರಶೇಖರ ಹೆಗಡೆ ಅವರ ಕುಟುಂಬದವರು ಓಡಾಡಲು ಲಕ್ಷೀನಾರಾಯಣ ಹೆಗಡೆ ಕುಟುಂಬದವರು ಅಡ್ಡಿಪಡಿಸುತ್ತಿದ್ದಾರೆ. ಅದಾಗಿಯೂ, ಚಂದ್ರಶೇಖರ ಹೆಗಡೆ ಅವರು ಅದೇ ದಾರಿಯಲ್ಲಿ ಓಡಾಡುತ್ತಾರೆ. ಚಂದ್ರಶೇಖರ ಹೆಗಡೆ ಅವರ ಕೆಲಸಕ್ಕೆ ಬರುವ ಆಳುಗಳು ಸಹ ಅದೇ ದಾರಿಯನ್ನು ಬಳಸುತ್ತಾರೆ. ಹೀಗಾಗಿ ಲಕ್ಷೀನಾರಾಯಣ ಹೆಗಡೆ ಕುಟುಂಬದವರ ಆಕ್ರೋಶ ಹೆಚ್ಚಿದ್ದು, ಫೆಬ್ರವರಿ
- [ತಿಥಿ ಊಟಕ್ಕೆ ಬಂದವ ಮಹಿಳೆ ಮೈ ಮುಟ್ಟಿದ!](https://mobiletime.in/2026/02/the-woman-who-came-for-dinner-touched-me/): ಯಲ್ಲಾಪುರದ ಬಾಚಿನಳ್ಳಿಯಲ್ಲಿರುವ ಸರಸ್ವತಿ ಸಿದ್ದಿ ಅವರ ಮನೆಯಲ್ಲಿ ತಿಥಿ ನಡೆದಿದ್ದು, ಆ ಮನೆಯೊಳಗೆ ಪ್ರವೇಶಿಸಿದ ಮಂಚಿಕೇರಿಯ ಅಬ್ದುಲ್ ರೆಹಮಾನ್ ಅವರು ಅಲ್ಲಿದ್ದ ಮಹಿಳೆಯೊಬ್ಬರ ಮೈ ಮುಟ್ಟಿದ್ದಾರೆ. ಜೊತೆಗೆ ಮತ್ತೊಬ್ಬ ಮಹಿಳೆಯ ಬಗ್ಗೆ ವಿಚಾರಿಸಿ, ಸಿದ್ದಿ ಸಮುದಾಯದ ಬಗ್ಗೆ ನಿಂದನಾರ್ಹ ಮಾತುಗಳನ್ನು ಆಡಿದ್ದಾರೆ. ಯಲ್ಲಾಪುರದ ಬಾಚನಳ್ಳಿಯ ಸಾವಿತ್ರಿ ನಾಗೇಂದ್ರ ಸಿದ್ದಿ ಅವರು ಮಂಚಿಕೇರಿಯಲ್ಲಿ ಮಾಲ್ಕಿ ಮರ ಕಟಾವು ಮಾಡುವ ಅಬ್ದುಲ್ ರೆಹಮಾನ್ ದಾವುದ್ ಶೇಖ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಮಂಚಿಕೇರಿ ಚರ್ಚ ರಸ್ತೆಯ ಅಬ್ದುಲ್ ರೆಹಮಾನ್ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. `ತಮ್ಮ ಅಜ್ಜಿ ಸರಸ್ವತಿ ಸಿದ್ದಿ ಅವರ ಮನೆಯಲ್ಲಿ ತಿಥಿ ಊಟಕ್ಕೆ ಹೋದಾಗ ಅಲ್ಲಿಗೆ ಅಬ್ದುಲ್ ರೆಹಮಾನ್ ಅವರು ಆಗಮಿಸಿದ್ದರು. ಮನೆಯೊಳಗೆ ನುಗ್ಗಿ ಮಂಗಲಾ ಎಲ್ಲಿ? ಎಂದು ಅವರು ಪ್ರಶ್ನಿಸಿದರು. ಗೊತ್ತಿಲ್ಲ ಎಂದು ಹೇಳಿದಾಗ, ಆಕೆಯನ್ನು ನೀವೇ ಅಡಗಿಸಿಟ್ಟಿದ್ದೀರಿ.. ಸಿದ್ದಿ ಸೂ.. ಹೆಂಗಸರು ಎಂದು ಬೈದರು. ಅದಾದ ನಂತರ ತನ್ನ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದರು’ ಎಂದು ಸಾವಿತ್ರಿ ಸಿದ್ದಿ
- [ವೈದ್ಯನ ವಿರುದ್ಧ ಹಲವು ದೂರು!](https://mobiletime.in/2026/02/many-complaints-against-the-doctor/): ಕಾರವಾರ ಬಳಿಯ ಹಾರವಾಡದಲ್ಲಿ ಕರ್ತವ್ಯದಲ್ಲಿರುವ ವೈದ್ಯರು ರೋಗಿಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸೀರ್ಬರ್ಡ ಯೋಜನೆಗಾಗಿ ಭೂಮಿ ತ್ಯಾಗ ಮಾಡಿದ ಹಾರವಾಡದ ಜನರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. `ತಮ್ಮೂರಿನ ಆಸ್ಪತ್ರೆಗೆ ನುರಿತ ವೈದ್ಯರನ್ನು ನೇಮಿಸಿ. ಕರ್ತವ್ಯದಲ್ಲಿ ಅಸಡ್ಡೆ ತೋರುವ ವೈದ್ಯರನ್ನು ಇಲ್ಲಿಂದ ಓಡಿಸಿ’ ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಶಾಸಕರಿಗೆ ಲಿಖಿತ ಅರ್ಜಿ ಸಲ್ಲಿಸಿದ್ದಾರೆ. `ತರಂಗಮೇಟ, ನಡುವಿನಕೇರಿ, ಒಕ್ಕಲಕೇರಿ, ಗಾಬಿತವಾಡ ಭಾಗದ ಜನ ಅನಾರೋಗ್ಯಕ್ಕೆ ಒಳಗಾದರೆ ಹಾರವಾಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದು, ಅಲ್ಲಿ ತಮಗೆ ಯೋಗ್ಯ ಚಿಕಿತ್ಸೆ ದೊರೆಯುತ್ತಿಲ್ಲ’ ಎಂದು ಆ ಭಾಗದ ಜನ ದೂರಿದ್ದಾರೆ. `ಇಲ್ಲಿನ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ರೋಗಿಗಳ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದು, ಆ ಬಗ್ಗೆ ದೂರಿದರೂ ಕ್ರಮವಾಗಿಲ್ಲ. ಅಡೆಂಟರ್ ಕೆಲಸಕ್ಕಿದ್ದವರ ಬಳಿ ರೋಗಿಗಳ ತಪಾಸಣೆ ಮಾಡಿಸುತ್ತಿದ್ದು, ಪ್ರಶ್ನಿಸಿದರೆ ಕೂಗಾಡುತ್ತಿದ್ದಾರೆ. ವೃದ್ಧರ ಜೊತೆಯೂ ವೈದ್ಯರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ’ ಎಂದು ಜನ ಆಕ್ಷೇಪವ್ಯಕ್ತಪಡಿಸಿದ್ದಾರೆ. ಜನರ ಮನವಿ ಆಲಿಸಿದ ಶಾಸಕ
- [ಮಂಚದಿoದ ಬಿದ್ದ ಹಾಡುಗಾರ: ಸಾವು!](https://mobiletime.in/2026/02/singer-who-fell-from-the-stage-death/): ಭಟ್ಕಳ ಮಾರುಕೇರಿಯ ನಾಗರಾಜ ಹೆಗಡೆ ಅವರು ಮಂಚದಿoದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ. ಭಟ್ಕಳದ ಮಾರುಕೇರಿಯ ಕೋಟಖಂಡ ಕಲ್ಲಬ್ಬೆಯಲ್ಲಿ ನಾಗರಾಜ ವಾಸುದೇವ ಹೆಗಡೆ ಏಣಿಮನೆ (47) ಅವರು ವಾಸವಾಗಿದ್ದರು. ಸಂಗೀತಗಾರರಾಗಿದ್ದ ಅವರು ಅನೇಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಭಟ್ಕಳದಲ್ಲಿ ಹಂಸಧ್ವನಿ ಅಂಗಡಿ ತೆರೆದು ಹಾರ್ಮೊನಿಯಂ ರಿಪೇರಿ ಮತ್ತು ಸೌಂಡ್ ಸಿಸ್ಟಮ್ ಕಾಯಕವನ್ನು ನಿಭಾಯಿಸಿದ್ದರು. ಉತ್ತಮ ಸಂಗೀತಗಾರರೂ ಆಗಿದ್ದ ಅವರು ಹಲವರಿಗೆ ಸಂಗೀತಾಭ್ಯಾಸ ಮಾಡಿಸಿದ್ದರು. ಈಚೆಗೆ ಅವರು ತಮ್ಮ ಮನೆಯಲ್ಲಿ ಮಂಚದಿ0ದ ಕೆಳಗೆ ಬಿದ್ದಿದ್ದರು. ಅದರಿಂದ ಅವರ ತಲೆಗೆ ಗಂಭೀರ ಪ್ರಮಾನದಲ್ಲಿ ಪೆಟ್ಟಾಗಿತ್ತು. ತಕ್ಷಣ ಸರಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿ ನಂತರ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ.
- [ಶಿರಸಿ ಜಾತ್ರೆ: ದರೋಡೆಕರೋರರ ಕೆಲಸಕ್ಕೆ ವಿಘ್ನ!](https://mobiletime.in/2026/02/sirsi-fair-a-hindrance-to-the-work-of-robbers/): ಶಿರಸಿ ಜಾತ್ರೆಯ ಸನ್ನಿವೇಶ ದುರುಪಯೋಗಪಡಿಸಿಕೊಂಡು ದರೋಡೆಗೆ ಸಿದ್ಧತೆ ಮಾಡಿಕೊಂಡಿದ್ದ ಡಕಾಯಿತರಿಗೆ ಭಾರೀ ಹಿನ್ನಡೆಯಾಗಿದೆ. ಶಿರಸಿಗೆ ಹೊರಡಲು ಸಿದ್ಧವಾಗಿದ್ದ ಡಕಾಯಿತರನ್ನು ಯಲ್ಲಾಪುರ ಪೊಲೀಸರು ದಾರಿ ಮದ್ಯೆಯೇ ತಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಎಲ್ಲಿಯೇ ಜಾತ್ರೆ ನಡೆದರೂ ಮಹಾರಾಷ್ಟದ ಎಂಟು ಜನ ಅಲ್ಲಿ ಹಾಜರಾಗುತ್ತಿದ್ದರು. ಈ ಮೊದಲು ಗೋಕರ್ಣ, ಮುರುಡೇಶ್ವರದಲ್ಲಿಯೂ ಆ ಡಕಾಯಿತರು ತಮ್ಮ ಕೈ ಚಳಕ ಪ್ರದರ್ಶಿಸಿದ್ದರು. ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ಮುಖಕ್ಕೆ ಖಾರದಪುಡಿ ಎರಚಿ ಪರಾರಿಯಾಗುತ್ತಿದ್ದರು. ಅದಾಗಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಕಲ್ಲು ತೂರಾಟ ನಡೆಸಿ ಕಾರು ಓಡಿಸುತ್ತಿದ್ದರು. ಅಂಥ ಎಂಟು ಜನ ಡಕಾಯಿತರು ಸೇರಿ ಶಿರಸಿ ಜಾತ್ರೆಗೆ ಹೋಗಲು ಯೋಚಿಸಿದ್ದು, ಬುಧವಾರ ನಸುಕಿನಲ್ಲಿ ಯಲ್ಲಾಪುರ ಪೊಲೀಸರು ಕೆ ಮಿಲನ್ ಹೊಟೇಲ್ ಬಳಿ ಅನುಮಾನಾಸ್ಪದ ಕಾರನ್ನು ಪಿಸೈ ಸಿದ್ದಪ್ಪ ಗುಡಿ ಅವರು ತಡೆದು ನಿಲ್ಲಿಸಿದರು. ಪಿಸೈ ರಾಜಶೇಖರ್ ವಂದಲಿ ಅವರ ಜೊತೆ ಅನೀಲ ಮಾದರ್, ಮಹಾಂತೇಶ ಕುಂಬಾರ್, ಎಸೈ ಗಜಾನನ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಶೇಖ್, ರಾಜೇಶ ನಾಯ್ಕ,
- [ಕಲಿಯುವ ಕನಸಿದ್ದವರಿಗೆ ಕಂಪ್ಯುಟರ್ ಕೊಡುಗೆ](https://mobiletime.in/2026/02/computer-gift-for-those-who-dream-of-learning/): ಕಾರವಾರದ ಸದಾಶಿವಗಡ ಲಯನ್ಸ ಕ್ಲಬ್ಬಿನ ಸದಸ್ಯರು ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಂಪ್ಯುಟರ್ ಅಗತ್ಯವಿರುವುದನ್ನು ಗಮನಿಸಿದ ಲಯನ್ಸ್ ಸದಸ್ಯರು ಕಂಪ್ಯುಟರ್ ಜೊತೆ ಇನ್ನಿತರ ತಂತ್ರಜ್ಞಾನಯುಕ್ತ ಸಾಮಗ್ರಿಗಳನ್ನು ಸಹ ಕೊಟ್ಟಿದ್ದಾರೆ. ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರ ಗ್ರಾಮೀಣ ಭಾಗದ ಉತ್ತಮ ಪ್ರೌಢಶಾಲೆ ಎಂಬ ಹೆಗ್ಗಳಿಕೆಪಡೆದಿದೆ. ಹಿಂದುಳಿತ ಪ್ರದೇಶದ ಅನೇಕ ವಿದ್ಯಾರ್ಥಿಗಳು ಇಲ್ಲಿ ಸಾಧನೆ ಮಾಡಿದ್ದಾರೆ. ಅವರಿಗೆ ಅಗತ್ಯ ಪ್ರೋತ್ಸಾಹ ದೊರೆತರೆ ಇನ್ನಷ್ಟು ಸಾಧನೆ ಸಾಧ್ಯ ಎಂದು ಲಯನ್ಸ ಕ್ಲಬ್ಬಿಗೆ ಮನವರಿಕೆಯಾಗಿದ್ದು, ಈ ಹಿನ್ನಲೆ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ ನಯೀಮ್ ಮುಖಾದಮ್ ಅವರು ಶೈಕ್ಷಣಿಕ ಕೊಡುಗೆಗೆ ನಿರ್ಧರಿಸಿದ್ದಾರೆ. ಕಲಿಕಾ ಸಾಮಗ್ರಿ ವಿತರಣೆ ನಂತರ ಮಾತನಾಡಿದ ಡಾ ನಯೀಮ್ ಮುಖಾದಮ್ ಅವರು `ಗ್ರಾಮೀಣ ಭಾಗದಲ್ಲಿ ಆಧುನಿಕ ಶಿಕ್ಷಣ ಒದಗಿಸುತ್ತಿರುವ ಪ್ರೌಢಶಾಲೆಗೆ ನಮ್ಮ ಬೆಂಬಲ ಸದಾ ಇದೆ. ಎಂದರು. `ಈ ಶಾಲೆಯ ಅಭ್ಯುದಯಕ್ಕೆ ಲಯನ್ಸ್ ಪ್ರಮುಖರಾದ ರಾಜೇಶ ಸಾಲೆಹಿತ್ತಲ ಮತ್ತು ಅನೀಲ ಶೇಟ ಅವರ ಸಹಕಾರವೂ ಇದೆ’ ಎಂದು ಸ್ಮರಿಸಿದರು. ಲಯನ್ಸ
- [ಹದಗೆಟ್ಟ ರಸ್ತೆ: ದುರಸ್ತಿ ಕೆಲಸಕ್ಕೆ ಎರಡೇ ವಾರ ಗ್ಯಾರಂಟಿ!](https://mobiletime.in/2026/02/deteriorated-road-only-two-weeks-guarantee-for-repair-work/): ಕೈಗಾ-ಬoಕಾಪುರ ರಸ್ತೆ ಯಲ್ಲಾಪುರದ ಬಳಿ ವ್ಯಾಪಕ ಪ್ರಮಾಣದಲ್ಲಿ ಹದಗೆಟ್ಟಿದ್ದು, ಜನಾಗ್ರಹಕ್ಕೆ ಮಣಿದು ಸರ್ಕಾರ ಪ್ಯಾಚ್ ವರ್ಕ ಕೆಲಸ ಮಾಡಿಸಿದೆ. ಆದರೆ, ರಸ್ತೆ ದುರಸ್ಥಿ ನಡೆದ ಎರಡೇ ವಾರದಲ್ಲಿ ಆ ರಸ್ತೆ ಮತ್ತೆ ಹದಗೆಟ್ಟಿದೆ. ಸರ್ಕಾರ ಸೂಚಿಸಿದ ಕೆಲಸ ಮಾಡುವಲ್ಲಿ ಗುತ್ತಿಗೆದಾರ ಎಡವಿದ್ದು, ಜನ ಸಹ ಆ ರಸ್ತೆಯಲ್ಲಿ ಎಡವಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಕೈಗಾ ಬಂಕಾಪುರ ರಾಜ್ಯ ಹೆದ್ದಾರಿಯೂ ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ವಿವಿಧ ಪ್ರದೇಶಗಳಿಂದ ಹಾದು ಹೋಗುತ್ತದೆ. ರವೀಂದ್ರ ನಗರದಿಂದ ಹಣಶೆಟ್ಟಿಕೊಪ್ಪ-ಕರಡೊಳ್ಳಿ ಕ್ರಾಸಿನವರೆಗೆ ಈ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ಇದನ್ನು ಗಮನಿಸಿದ ಸರ್ಕಾರ ರಸ್ತೆ ಸುಧಾರಣಾ ಕಾಮಗಾರಿಯನ್ನು ಸಹ ನಡೆಸಿದೆ. ಆದರೆ, ರಸ್ತೆ ಸುಧಾರಣೆ ನಡೆದ ಎರಡೇ ವಾರದಲ್ಲಿ ಮೊದಲಿಗಿಂತಲೂ ದೊಡ್ಡ ದೊಡ್ಡ ಹೊಂಡಗಳು ಅಲ್ಲಿ ಹುಟ್ಟಿಕೊಂಡಿವೆ. ಸದ್ಯ ಪ್ಯಾಚ್ ವರ್ಕ ಕಾಮಗಾರಿ ನಡೆದು ಎರಡು ತಿಂಗಳಾಗಿದ್ದು, ನಿತ್ಯವೂ ಒಂದಿಲ್ಲೊoದು ಅಪಘಾತಗಳಿಂದ ಜನ ಬೇಸತ್ತಿದ್ದಾರೆ. `ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದರಿಂದ ಗುತ್ತಿಗೆದಾರರಿಗೆ ಹಣಪಾವತಿ ಮಾಡಬಾರದು’ ಎಂದು ಯಲ್ಲಾಪುರದ
- [ಉತ್ತರ ಕನ್ನಡ: ಎಲ್ಲಾ ಕಡೆಯೂ ಆನೆ ತಪಾಸಣಾ ಕೇಂದ್ರ!](https://mobiletime.in/2026/02/uttara-kannada-elephant-checkpoints-everywhere/): ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ `ಆನೆ ತಪಾಸಣಾ ಕೇಂದ್ರ’ ಶುರುವಾಗಿದೆ. ರಸ್ತೆಗೆ ಅಡ್ಡಲಾಗಿ ಬರುವ ಆನೆಗಳು ಜನರ ವಾಹನ `ತಪಾಸಣೆ’ ನಡೆಸಿ ಬಿಡುತ್ತಿವೆ. ಆನೆ ನೋಡಿದ ಕೆಲವರು ಆತಂಕಕ್ಕೆ ಒಳಗಾಗುತ್ತಿದ್ದು, ಇನ್ನು ಕೆಲವರು ವನ್ಯಜೀವಿ ದರ್ಶನದ ಸಂತಸ ಹಂಚಿಕೊಳ್ಳುತ್ತಿದ್ದಾರೆ. ದಾAಡೇಲಿಯ ಅಂಬಿಕಾನಗರ-ಬೊಮ್ಮನಳ್ಳಿ ಮಾರ್ಗದಲ್ಲಿ ಬುಧವಾರ ಮತ್ತೊಂದು ಆನೆ ತಪಾಸಣಾ ಕೇಂದ್ರ ಶುರುವಾಗಿದೆ. ಈ ದಿನ ಆ ಮಾರ್ಗದಲ್ಲಿ ಓಡಾಡುವ ಸರ್ಕಾರಿ ಬಸ್ಸನ್ನು ಆನೆ ತಪಾಸಣೆ ನಡೆಸಿದ್ದು, ಬಸ್ಸಿನಲ್ಲಿ ಏನೂ ಸಿಗದ ಕಾರಣ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಕೆಲ ದಿನಗಳ ಹಿಂದೆ ಯಲ್ಲಾಪುರ-ಹಳಿಯಾಳ ಮಾರ್ಗವಾಗಿ ಸಂಚರಿಸುವ ಬಸ್ಸನ್ನು ಈಚೆಗೆ ಆನೆಯೊಂದು ಅಡ್ಡಗಟ್ಟಿತ್ತು. ಅಲ್ಲಿಯೂ ಕೆಲ ಸಮಯದ ನಂತರ ಬಸ್ಸಿನ ಸುಗಮ ಸಂಚಾರಕ್ಕೆ ಆನೆ ಅವಕಾಶ ಮಾಡಿಕೊಟ್ಟಿತ್ತು. ಅದಾದ ನಂತರ ಅಂಬಿಕಾನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಒಂಟಿ ಸಲಗದ ಓಡಾಟ ಮೊಬೈಲ್ ಕ್ಯಾಮರಾಗೆ ಸೆರೆಯಾಗಿತ್ತು. ರಸ್ತೆ ಮೇಲೆ ಓಡಾಡುವ ಆನೆ ಜನರ ಓಡಾಟಕ್ಕೆ ಅಡ್ಡಿ ಮಾಡಿತ್ತು. ಈ ವಿದ್ಯಮಾನ ಮಾಸುವ ಮುನ್ನ
- [2 ಕೆಜಿ ಚಿನ್ನಕ್ಕೆ 10 ಲಕ್ಷ ರೂ: ಕುರಿ ವ್ಯಾಪಾರಿಗೆ ಮೂರು ನಾಮ!](https://mobiletime.in/2026/02/10-lakh-rupees-for-2-kg-gold-three-names-for-sheep-trader/): `ಭೂಮಿ ಅಗೆಯುವಾಗ 2 ಕೆಜಿ ಚಿನ್ನ ಸಿಕ್ಕಿದೆ. 10 ಲಕ್ಷ ರೂಪಾಯಿಗೆ ಅದನ್ನು ಮಾರಾಟ ಮಾಡುವೆ’ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಲಾಗಿದೆ. ಈ ಮೋಸದ ವ್ಯವಹಾರ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ. ಸಿದ್ದಾಪುರ – ಸಾಗರ ರಸ್ತೆಯಲ್ಲಿರುವ ಹಿತ್ತಲಕೊಪ್ಪ ಕ್ರಾಸಿನ ಬಳಿ ಬೆಳಗಾವಿಯ ಕುರಿ ವ್ಯಾಪಾರಿ ಆಕಾಶ ಅಬುಬಕ್ಕರ್ ಕಲಾಲ್ ಅವರು ಮೋಸ ಹೋಗಿದ್ದಾರೆ. ಚಿಕ್ಕಮಗಳೂರಿನ ಹೊಸಳ್ಳಿಯ ರವಿ ಎಂಬಾತರು 10 ಲಕ್ಷ ರೂಪಡೆದು ನಕಲಿ ಬಂಗಾರ ನೀಡಿ ಯಾಮಾರಿಸಿದ್ದಾರೆ. ಕಳೆದ ತಿಂಗಳು ನಡೆದ ಸೌದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಆಕಾಶ ಕಲಾಲ್ ಹಾಗೂ ಹೊಸಳ್ಳಿಯ ರವಿ ಪರಿಚಿತರಾಗಿದ್ದು, ರವಿ ಅವರು ಆ ಪರಿಚಯವನ್ನು ತಮ್ಮ ಮೋಸಕ್ಕೆ ಬಳಸಿಕೊಂಡಿದ್ದಾರೆ. `ತನ್ನ ಮನೆಯ ನೆಲ ಅಗೆಯುವಾಗ 2 ಕೆಜಿ ಬಂಗಾರ ಸಿಕ್ಕಿದೆ’ ಎಂದು ಆಕಾಶ ಅವರ ಮಾವನಿಗೆ ಫೋನ್ ಮಾಡಿ ನಂಬಿಸಿದ ರವಿ ಅವರು ಅದರ ಮಾರಾಟ ವ್ಯವಹಾರ ನಡೆಸಲು ಸಿದ್ದಾಪುರಕ್ಕೆ ಆಮಂತ್ರಿಸಿದ್ದಾರೆ. ಮೊದಲು ಅಸಲಿ ಚಿನ್ನದ ನಾಣ್ಯ ಕೊಟ್ಟು, ಹಣಪಡೆದ ನಂತರ ನಕಲಿ
- [ಹೆಗಡೆರಿಗೆ ಇಲ್ಲ ದುರುಳರ ಆಶೀರ್ವಾದ!](https://mobiletime.in/2026/02/hegde-does-not-have-the-blessings-of-the-evil-ones/): ಸಿದ್ದಾಪುರದ ಹೊಳೆಜಡ್ಡಿ ಸೇತುವೆ ಬಳಿ ರಾತ್ರಿ ವೇಳೆ ಹರಟೆ ಹೊಡೆಯುತ್ತಿದ್ದ ಮೂವರು ಕೊಪ್ಪದಜಡ್ಡಿಯ ಸುಬ್ರಹ್ಮಣ್ಯ ಹೆಗಡೆ ಅವರ ಕಾಲು ಸುಟ್ಟಿದ್ದಾರೆ. ಹೆಗಡೆ ಅವರನ್ನು ಹಿಡಿದುಕೊಂಡ ಆ ಆಗಂತುಕರು ಅವರದ್ದೇ ಬೈಕಿನ ಸೈಲನ್ಸರ್ ಪೈಪಿಗೆ ಕಾಲು ತಾಗಿಸಿ ನೋವು ಮಾಡಿದ್ದಾರೆ. ಸಿದ್ದಾಪುರದ ಹುಲ್ಲುಂಡೆ ಬಳಿಯ ಕೊಪ್ಪದಜಡ್ಡಿಯಲ್ಲಿ ಸುಬ್ರಹ್ಮಣ್ಯ ಅನಂತ ಹೆಗಡೆ (30) ಅವರು ವಾಸವಾಗಿದ್ದಾರೆ. ಆಶಿರ್ವಾದ ಕಂಪನಿಯಲ್ಲಿ ಅವರು ಕೆಲಸ ಮಾಡಿಕೊಂಡಿದ್ದು, ತೋಟದ ಕೆಲಸವನ್ನು ಸಹ ನಿಭಾಯಿಸುತ್ತಿದ್ದಾರೆ. ಹೀಗಿರುವಾಗ ಫೆಬ್ರವರಿ 19ರ ರಾತ್ರಿ ಅವರು ತಮ್ಮ ತೋಟದ ಕೆಲಸಕ್ಕೆ ಬಂದಿದ್ದ ಕಲ್ಲರೆಯ ರಾಜು ಗೌಡ ಅವರನ್ನು ಮನೆಗೆ ಬಿಡಲು ಹೊರಟಿದ್ದರು. ಆ ದಿನ ರಾತ್ರಿ ಹೊಳೆಜಡ್ಡಿ ಸೇತುವೆ ಮೇಲೆ ಹರಟೆ ಹೊಡೆಯುತ್ತಿದ್ದ ಹೆಗ್ಗಾರಬೈಲಿನ ಅಣ್ಣಪ್ಪ, ಕಲ್ಲಾರೆ ಬಳಿಯಿರುವ ಹುಲ್ಲುಂಡೆಯ ಮಂಜು ಗೌಡ, ಅದೇ ಊರಿನ ಗಣಪತಿ ಗೌಡ ಸೇರಿ ಸುಬ್ರಹ್ಮಣ್ಯ ಹೆಗಡೆ ಅವರ ಮೇಲೆ ದಬ್ಬಾಳಿಕೆ ನಡೆಸಿದರು. ಸುಬ್ರಹ್ಮಣ್ಯ ಹೆಗಡೆ ಹಾಗೂ ರಾಜು ಗೌಡ ಅವರು ಬೈಕಿನಲ್ಲಿ ಹೋಗುತ್ತಿರುವಾಗ ರಾಜು ಗೌಡ ಅವರು
- [ಏರ್ ಬ್ಯಾಗಿನಿಂದ ಉಳಿದ ಉಸಿರು!](https://mobiletime.in/2026/02/the-remaining-breath-from-the-air-bag/): ಹಳಿಯಾಳದ ನಾಗಶೆಟ್ಟಿ ಕೊಪದ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಏರ್ ಬ್ಯಾಗ್ ತೆರೆದುಕೊಂಡಿದ್ದರಿAದ ಪ್ರಯಾಣಿಕರ ಉಸಿರು ಉಳಿದಿದೆ. ಕಲಘಟಗಿ ರಸ್ತೆಯಲ್ಲಿ ಸೋಮವಾರ ರಾತ್ರಿ ವೇಳೆ ಈ ಅಪಘಾತ ನಡೆದಿದ್ದು, ಎರಡು ಕಾರು ಜಖಂ ಆಗಿದೆ. ಗೋವಾ ನೋಂದಣಿಯ ಎರ್ಟಿಗಾ ಕಾರು ಹಾಗೂ ಕರ್ನಾಟಕ ನೋಂದಣಿಯ ಗ್ಲಾನಝಾ ಕಾರಿನ ನಡುವೆ ಅಪಘಾತ ಉಂಟಾಗಿದೆ. ಒಂದು ವಾಹನವನ್ನು ಮತ್ತೊಂದು ವಾಹ ಹಿಂದಿಕ್ಕುವ ಅವಸರದಲ್ಲಿ ಎದುರಿನಿಂದ ಬಂದ ವಾಹನಕ್ಕೆ ಗುದ್ದಿರುವುದೇ ಅಪಘಾತಕ್ಕೆ ಕಾರಣ. ಡಿಕ್ಕಿಯ ರಭಸಕ್ಕೆ ಎರಡು ಕಾರುಗಳ ಮುಂಭಾಗ ಸಂಪೂರ್ಣ ಜಖಂ ಆಗಿದೆ. ವಾಹನಗಳಿಗೆ ಭಾರೀ ಹಾನಿಯಾಗಿದೆ. ಆದರೆ, ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ತಕ್ಷಣ ಏರ್ ಬ್ಯಾಗ್ ತೆರೆದುಕೊಂಡಿದ್ದು, ಅದರಿಂದಾಗಿಯೇ ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದಾರೆ. ಅಪಘಾತ ನೋಡಿದ ಜನ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. `ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’
- [ಗೋ ಕಳ್ಳರನ್ನು ಬಂಧಿಸಿ!](https://mobiletime.in/2026/02/arrest-the-cow-thieves/): ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗೋ ಕಳ್ಳತನ ನಡೆಯುತ್ತಿರುವ ಬಗ್ಗೆ ಹಿಂದೂ ಜಾಗರಣ ವೇದಿಕೆ ಕಳವಳವ್ಯಕ್ತಪಡಿಸಿದೆ. ಸಿಸಿ ಕ್ಯಾಮರಾ ಪರಿಶೀಲನೆ ಆಧಾರದಲ್ಲಿ ಗೋ ಕಳ್ಳರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ವೇದಿಕೆಯವರು ಆಗ್ರಹಿಸಿದ್ದಾರೆ. `ಯಲ್ಲಾಪುರದ ರಾಮಾಪುರ, ಸಹಸ್ರಳ್ಳಿ, ರಾಮನಕೊಪ್ಪ ಸೇರಿ ಸುತ್ತಲಿನ ಹಲವು ಕಡೆ 25ಕ್ಕೂ ಅಧಿಕ ಗೋವುಗಳ ಕಳ್ಳತನ ನಡೆದಿದೆ’ ಎಂದು ಹಿಂದೂ ಜಾಗರಣಾ ವೇದಿಕೆಯವರು ಹೇಳಿದ್ದಾರೆ. ಶುಕ್ರವಾರ ರಾತ್ರಿ 2 ಗಂಟೆ ಅವಧಿಗೆ ಶಿರಸಿ ರಸ್ತೆಯ ಹೆಸ್ಕಾಂ ಕಚೇರಿ ಬಳಿ ದುರುಳರು ಗೋವನ್ನು ಅಪಹರಿಸಿದ್ದಾರೆ. ಜಾತ್ರೆ ಅಂಗವಾಗಿ ಪ್ರದರ್ಶನವಾಗುತ್ತಿರುವ ನಾಟಕ ಮುಗಿಸಿ ಮನೆಗೆ ಮರಳುತ್ತಿರುವವರು ಒತ್ತಾಯಪೂರ್ವಕವಾಗಿ ಗೋವನ್ನು ಹೊಡೆದುಕೊಂಡು ಹೋಗುವವರನ್ನು ನೋಡಿದ್ದಾರೆ. ನಂತರ ಆ ಕೆಂಪು ಬಣ್ಣದ ಕರು ಕಲ್ಪನಾ ನಾಯ್ಕ ಅವರಿಗೆ ಸೇರಿದ್ದು ಎಂದು ಗೊತ್ತಾಗಿದ್ದು, ಈವರೆಗೂ ಆ ಕರು ಕೊಟ್ಟಿಗೆಗೆ ಮರಳಿಲ್ಲ’ ಎಂದು ಹಿಂದು ಜಾಗರಣಾ ವೇದಿಕೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. `ಇಲ್ಲಿ ಅಪಹರಿಸಲಾದ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿರುವ ಬಗ್ಗೆ ಮಾಹಿತಿಯಿದೆ.
- [ಶಿರಸಿ ಜಾತ್ರೆ: ಮದ್ಯ ಮಾರಾಟಕ್ಕೂ ನಿರ್ಭಂಧ.. ರಸ್ತೆ ಸಂಚಾರವೂ ನಿಷೇಧ!](https://mobiletime.in/2026/02/sirsi-fair-sale-of-liquor-is-also-prohibited-road-traffic-is-also-banned/): ಶಿರಸಿ ಜಾತ್ರೆ ಹಿನ್ನಲೆ ವಿವಿಧ ಮಾರ್ಗಗಳ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಜಾತ್ರೆ ಅಂಗವಾಗಿ ಎರಡು ದಿನ ಮದ್ಯ ಮಾರಾಟ-ಸಾಗಾಟವನ್ನು ನಿಷೇಧಿಸಿ ಅವರು ಆದೇಶಿಸಿದ್ದಾರೆ. ಫೆಬ್ರವರಿ 24ರಿಂದ ಮಾರ್ಚ 4ರವರೆಗೆ ಶಿರಸಿಯಲ್ಲಿ ಮಾರಿಕಾಂಬಾ ಜಾತ್ರೆ ನಡೆಯಲಿದೆ. ಜನರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವದಕ್ಕಾಗಿ ಶಿರಸಿ ಶಹರ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ 77 ಮತ್ತು ರಾಷ್ಟ್ರೀಯ ಹೆದ್ದಾರಿ 766(ಇ) ಸಚಾರ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಅದರ ಪ್ರಕಾರ, ಮಾರ್ಚ 4ರ ಮಧ್ಯ ರಾತ್ರಿ 12ಗಂಟೆಯವರೆಗೆ ಶಿರಸಿ ಶಹರದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 766(ಇ) ರಲ್ಲಿ ಐದು ರಸ್ತೆ ವೃತ್ತದಿಂದ – ವಾಜಿ ಚೌಕ್, ಬಿಡ್ಡಿ ವೃತ್ತ, ಕಾಮತ ಹೋಟೆಲ್ ಕ್ರಾಸ್, ಮಂಗಳೂರ ಹೊಟೆಲ್ ಕ್ರಾಸಿನಿಂದ ಕೋಟೆಕೇರೆ ವೃತ್ತದವರೆಗೆ ಎಲ್ಲ ತರಹದ ವಾಹನಗಳ ಸಂಚಾರನ್ನು ನಿಷೇಧಿಸಲಾಗಿದೆ. ಇದರೊಂದಿಗೆ ಕುಮಟಾ ಸಿದ್ದಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಶಿರಸಿ ಶಹರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ
- [ಶಿರಸಿ ಜಾತ್ರೆ: ಯಜಮಾನನಿಂದಲೇ ಶ್ರೀಗಳ ವಿಡಿಯೋ ದುರುಪಯೋಗ!](https://mobiletime.in/2026/02/sirsi-fair-misuse-of-video-of-the-saint-by-the-master-himself/): ಶಿರಸಿ ಮಾರಿಕಾಂಬಾ ದೇವಿಯ ಹೆಸರಿನಲ್ಲಿ ದುಡ್ಡು ದೋಚಲು ಮುಂದಾಗಿದ್ದ `ಯಜಮಾನ’ ಪೇಜ್ ಪ್ರಮುಖರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. ಅದಕ್ಕೂ ಬಗ್ಗದ ವಂಚಕರು ಶ್ರೀಗಳೊಬ್ಬರ ವಿಡಿಯೋ ದುರುಪಯೋಗಪಡಿಸಿಕೊಂಡು ತಮ್ಮ ವಂಚನೆ ಜಾಲವನ್ನು ಇನ್ನಷ್ಟು ವಿಸ್ತರಿಸಿದ್ದಾರೆ. `ಯಜಮಾನ’ ಎಂಬ ಜಾಲತಾಣದ ಪುಟ ಹಾಗೂ ಮಾರಿಕಾಂಬಾ ದೇಗುಲಕ್ಕೆ ಯಾವುದೇ ಸಂಬAಧ ಇಲ್ಲ. ಅದಾಗಿಯೂ `ಯಜಮಾನ’ ಪೇಜ್ ಪ್ರಮುಖರು ಮಾರಿಕಾಂಬಾ ದೇವಿ ಹೆಸರಿನಲ್ಲಿ ಪೂಜೆ ಮಾಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕನ ಅಂಗ ಸಂಸ್ಥೆ mobiletime.in ವರದಿ ಪ್ರಸಾರ ಮಾಡಿದ್ದು, ಮಾರಿಕಾಂಬಾ ದೇವಿ ಹೆಸರಿನಲ್ಲಿ ಆನ್‌ಲೈನ್ ಸೇವೆಪಡೆದು ಮೋಸ ಹೋಗದಂತೆ ದೇಗುಲ ಆಡಳಿತ ಮಂಡಳಿಯೂ ವಿನಂತಿಸಿದೆ. ಅದರ ಬೆನ್ನಲ್ಲೆ `ಯಜಮಾನ’ ಪೇಜ್ ಪ್ರಮುಖರ ವಿರುದ್ಧ ಶಿರಸಿ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಅದಾಗಿಯೂ, ಅವರ ವಂಚನೆ ನಿಂತಿಲ್ಲ. ಎಐ ಆಧಾರಿತ ವಿಡಿಯೋ ರಚಿಸಿ ಮಾರಿಕಾಂಬಾ ದೇವಿಗೆ ಆನ್‌ಲೈನ್ ಸೇವೆ ಸಲ್ಲಿಸುವ ವಿಡಿಯೋ ಯಜಮಾನ ಪೇಜಿನಿಂದ
- [ಆ ಬಾಲಕರು ಭಯೋತ್ಪಾದಕರಲ್ಲ.. ಭಯ ಉತ್ಪಾದಕರು!](https://mobiletime.in/2026/02/those-boys-are-not-terrorists-they-are-fear-mongers/): ಭಟ್ಕಳದ ಬೈಲೂರಿನಲ್ಲಿ ಏಳು ಜನ ಮುಸ್ಲೀಂ ಸಮುದಾಯದ ಬಾಲಕರು ಸೇರಿ ಹಿಂದು ಸಮುದಾಯದವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಬೈಕಿನಲ್ಲಿ ಗುಂಪು ಗುಂಪಾಗಿ ಆಗಮಿಸಿ, ಮನೆಗಳ ಮೇಲೆ ಕಲ್ಲು ಎಸೆಯುತ್ತಿದ್ದ ಅಪ್ತಾಪ್ತರನ್ನು ಊರಿನ ಜನ ಹಿಡಿದಿದ್ದಾರೆ. ಫೆಬ್ರವರಿ 23ರಂದು ಮುರುಡೇಶ್ವರ ಬಸ್ತಿಮಕ್ಕಿಯ ಇಬ್ರಾಹಿಂ ಇಹಾಲ್ ಅವರು ತಮ್ಮ ಸಹಚರರಾದ ನ್ಯಾಶನಲ್ ಕಾಲೋನಿಯ ಅಬ್ಬಾಸ್ ಹಜೀಬ್, ಹಮ್ಮಾ ಕಾಲೋನಿಯ ರಯಾನ್ ಫರಾಸ್, ಜಮೀಲಾ ಮಸೀದ್ ಬಳಿಯ ನಶ್ವಾಲ್ ಗೈಮಾ, ಮಹಮದ್ ರ‍್ಜಾನ್, ಬಸ್ತಿಮಕ್ಕಿಯ ಅಪ್ಪಾನ್ ಆರೀಪ್, ರಿಯಾಜ್ ತಿರುವಳ್ಳಿ ಜೊತೆ ಬೈಕ್ ಸಂಚಾರ ಮಾಡಿದ್ದಾರೆ. ಆ ದಿನ ಬೆಳಗ್ಗೆ ಬೈಕಿನಲ್ಲಿ ಹೋಗುವಾಗ ಒಂದಷ್ಟು ಕಲ್ಲುಗಳನ್ನು ತೆಗೆದುಕೊಂಡಿದ್ದು, ಅದನ್ನು ಬೈಲೂರು ಮಾರ್ಕಂಡೇಶ್ವರದ ಸಮೀಪದ ದಿನಕರ ನಾಯ್ಕ ಅವರ ಮನೆಗೆ ಹೊಡೆದಿದ್ದಾರೆ. ಈ ವೇಳೆ `ಯಾರೋ ತಮಾಷೆಗೆ ಕಲ್ಲು ಹೊಡೆದಿರಬಹುದು’ ಎಂದು ಭಾವಿಸಿ ಜನ ಸುಮ್ಮನ್ನಾಗಿದ್ದಾರೆ. ಆದರೆ, ಅದೇ ದಿನ ರಾತ್ರಿ ಆ ಏಳು ಜನರ ಜೊತೆ ಇನ್ನಿತರರು ಸೇರಿಕೊಂಡು ಇನ್ನಷ್ಟು ರಂಪಾಟ ಮಾಡಿದ್ದಾರೆ.
- [ಪತ್ನಿಗಾಗಿ ತಾಯಿಗೆ ಹೊಡೆದ ಮದುಮಗ!](https://mobiletime.in/2026/02/the-groom-beat-his-mother-for-his-wife/): ಪಾಲಕರ ವಿರೊಧದ ನಡುವೆಯೂ ಭಟ್ಕಳದ ನಾರಾಯಣ ನಾಯ್ಕ ಹಾಗೂ ಕಸ್ತೂರಿ ನಾಯ್ಕ ಅವರು ಅದ್ಧೂರಿ ಮದುವೆ ಆಗಿದ್ದಾರೆ. ಮದುವೆ ಮುಗಿದ ನಂತರ ನಾರಾಯಣ ನಾಯ್ಕ ಅವರು ಪತ್ನಿಯನ್ನು ಮನೆಗೆ ಕರೆತಂದಿದ್ದು, ಇದಕ್ಕೆ ವಿರೋಧವ್ಯಕ್ತಪಡಿಸಿದ ತಾಯಿ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಭಟ್ಕಳದ ಯಲ್ವಡಿ ಕವೂರು ಬಳಿಯ ಬಿಟ್ಟಿ ಬೀಳೂರುವಿನಲ್ಲಿ ಮಾಸ್ತಮ್ಮ ಮಾಸ್ತಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಅವರ ಮಗ ನಾರಾಯಣ ಮಾಸ್ತಪ್ಪ ನಾಯ್ಕ ಅವರು ತಮ್ಮ ತಂಗಿ ಪದ್ಮಾವತಿ ಮಾಸ್ತಪ್ಪ ನಾಯ್ಕ ಅವರ ಮಗಳಾದ ಕಸ್ತೂರಿ ಮಾಸ್ಪಪ್ಪ ನಾಯ್ಕ ಅವರನ್ನು ವಿವಾಹವಾಗಿದ್ದಾರೆ. ಬೆಳಕೆಯ ವಿನಾಯಕ ದೇವಸ್ಥಾನದಲ್ಲಿ ಫೆಬ್ರವರಿ 20ರಂದು ಅದ್ಧೂರಿ ಮದುವೆ ನಡೆದಿದೆ. ಆದರೆ, ಈ ಮದುವೆಗೆ ಮಾಸ್ತಮ್ಮ ನಾಯ್ಕ ಅವರ ವಿರೋಧವಿದ್ದು, ಅದನ್ನು ಯಾರೂ ತಲೆಗೆ ಹಾಕಿಕೊಂಡಿಲ್ಲ. ಆ ದಿನ ಮದುವೆ ಮುಗಿದ ನಂತರ ನಾರಾಯಣ ನಾಯ್ಕ ಅವರು ತಮ್ಮ ಪತ್ನಿ ಜೊತೆ ಮನೆಗೆ ಬಂದಿದ್ದಾರೆ. ಸಂಜೆ 7.30ಕ್ಕೆ ಮನೆಗೆ ಬಂದ ವರ-ವಧುವನ್ನು ಮಾಸ್ತಮ್ಮ ನಾಯ್ಕ ಅವರು ಸ್ವಾಗತಿಸಿಲ್ಲ. ಬದಲಾಗಿ, `ನನ್ನ
- [ಸ್ಪಿರಿಟ್ ಹೆಸರಿನಲ್ಲಿ ಸರಾಯಿ ಸಾಗಾಟ!](https://mobiletime.in/2026/02/transporting-a-tavern-in-the-name-of-spirit/): ನಕಲಿ ದಾಖಲೆಗಳ ಆಧಾರದಲ್ಲಿ ಲಕ್ಷಾಂತರ ರೂ ಮೌಲ್ಯದ ಸರಾಯಿ ಸಾಗಿಸುತ್ತಿದ್ದ ಎರಡು ಟ್ಯಾಂಕರ್ ಜೊಯಿಡಾದ ರಾಮನಗರದ ಬಳಿ ಸಿಕ್ಕಿ ಬಿದ್ದಿದೆ. ಸ್ಪಿರಿಟ್ ಹಾಗೂ ಎಥನಲ್ ಸಾಗಿಸುವುದಕ್ಕಾಗಿ ಅನುಮತಿಪಡೆದು ಆ ಟ್ಯಾಂಕರಿನಲ್ಲಿ ಸರಾಯಿ ಸಾಗಿಸುತ್ತಿರುವವರು ಅಬಕಾರಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ದಾವಣೆಗೆರೆ ಶುಗರ್ ಕಂಪನಿ ಲಿಮಿಟೆಡ್ ಕಡೆಯಿಂದ ಗೋವಾ ರಾಜ್ಯದ ಗ್ಲೋಬಲ್ ಕಮ್ ಕಾರ್ಪ್ ಕುಂಡೇಮ್’ಗೆ ಸ್ಪಿರಿಟ್ ಸಾಗಿಸುವುದಕ್ಕಾಗಿ ಸರ್ಕಾರದಿಂದ ಅನುಮತಿಪಡೆಯಲಾಗಿತ್ತು. ಅದರೊಂದಿಗೆ ದಾವಣಗೆರೆಯ ಕೊಲೆಹಳ್ಳಿ ಹಡದಿಯಲ್ಲಿರುವ ಶ್ರೀ ಸಾಯಿ ಟ್ರೇಡರ್ಸ್ & ಕಂಪನಿಯಿAದ ಗೋವಾದ ವರ್ಧನ್ ಸಷ್ಟಿಮೆಂಟ್ಸ್ ಇಂಡಿಯಾ ಪ್ರೈ.ಲಿ. ಪಿಲರ್ನ ಇಂಡಸ್ಟ್ರೀಯಲ್’ಗೆ ಎಥನಲ್ ಸಾಗಾಟಕ್ಕೆ ಸರ್ಕಾರ ಪರವಾನಿಗೆ ನೀಡಿತ್ತು. ಆ ಅನುಮತಿ ದುರುಪಯೋಗಪಡಿಸಿಕೊಂಡ ದುರುಳರು ಟ್ಯಾಂಕರ್ ತುಂಬ ಮದ್ಯಸಾರಾ ಸಾಗಾಟ ಮಾಡುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಎ ಅವರು ಫೆ 21ರಂದು ಆ ಟ್ಯಾಂಕರ್ ತಪಾಸಣೆ ನಡೆಸಿದರು. ಸ್ಥಳಕ್ಕೆ ತಜ್ಞರನ್ನು ಕರೆಯಿಸಿ ಆಲ್ಕೋ ಮೀಟರ್ ಉಪಕರಣದ ಮೂಲಕ ಪರೀಕ್ಷೆ ಮಾಡಿಸಿದಾಗ ಅಪಾರ ಪ್ರಮಾಣದಲ್ಲಿ
- [ಶಿರಸಿ| ಜಾತ್ರೆಗೆ ಬರಲಿದೆ ಚುಕುಪುಕು ರೈಲು!](https://mobiletime.in/2026/02/sirsi-chukupuku-train-coming-to-the-fair/): ಶಿರಸಿ ಜಾತ್ರೆ ಹಿನ್ನಲೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲು ಓಡಿಸಿದ್ದಾರೆ. ಮಾರಿಕಾಂಬಾ ದೇವಿಯ ಭಕ್ತರ ಅನುಕೂಲಕ್ಕಾಗಿ ಈ ವಿಶೇಷ ರೈಲು ಓಡಾಟ ಶುರು ಮಾಡಿಸಿರುವುದಾಗಿ ಕಾಗೇರಿ ಅವರು ಹೇಳಿದ್ದಾರೆ. ಶಿರಸಿ ಜಾತ್ರೆಗೆ ಲಕ್ಷಕ್ಕೂ ಅಧಿಕ ಜನ ಬರುತ್ತಾರೆ. ಬೇರೆ ಬೇರೆ ಪ್ರದೇಶಗಳ ಭಕ್ತರು ಇಲ್ಲಿಗೆ ಆಗಮಿಸಲಿದ್ದು, ಅವರಿಗೆ ಅಗತ್ಯವಿರುವ ವಾಹನ ಸೌಕರ್ಯ ಸಮಸ್ಯೆ ಮೊದಲಿನಿಂದಲೂ ಇದೆ. ಈ ಹಿನ್ನಲೆ ಬೆಂಗಳೂರಿನ ಭಕ್ತರಿಗಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದಾರೆ. ಭಕ್ತರ ಸುಗಮ ಪ್ರಯಾಣಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಸಾಗರದ ತಾಳಗುಪ್ಪ ನಡುವೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಅದರಂತೆ, ಫೆಬ್ರವರಿ 27 ಮತ್ತು 28ರಂದು ಈ ವಿಶೇಷ ರೈಲು ಸೇವೆ ಲಭ್ಯವಿರಲಿದೆ. ಅದರ ಪ್ರಕಾರ ರೈಲು ಸಂಖ್ಯೆ 06587ಯೂ ಫೆಬ್ರವರಿ 27ರ ಶುಕ್ರವಾರ ರಾತ್ರಿ 10:45ಕ್ಕೆ ಯಶವಂತಪುರದಿAದ ಹೊರಟು ಮರುದಿನ ಮುಂಜಾನೆ 05:05ಕ್ಕೆ ತಾಳಗುಪ್ಪ
- [ಮುಖ್ಯಮಂತ್ರಿ ಮುಂದೆ ಶಾಸಕರ ಮೌನ: ಅನಂತಮೂರ್ತಿಗೆ ಅನುಮಾನ!](https://mobiletime.in/2026/02/mlas-silence-before-the-chief-minister-ananthamurthy-has-many-doubts/): `ನದಿ ತಿರುವು, ಶರಾವಂತಿ ಪಂಪ್ ಸ್ಟೋರೇಜ್, ಕೇಣಿ ವಾಣಿಜ್ಯ ಬಂದರು, ಅರಣ್ಯ ಅತಿಕ್ರಮಣ ಸಮಸ್ಯೆ, ಅಡಿಕೆ ಎಲೆಚುಕ್ಕಿ ರೋಗ, ಮಳೆ ಮಾಪನ ಯಂತ್ರ ದುರಸ್ಥಿ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದರೂ ಆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಮಾತನಾಡಿಲ್ಲ. ಎಂಟು ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಇದರ ಹಿಂದೆ ಸ್ಥಳೀಯ ಸಂಸ್ಥೆ ಚುನಾವಣೆಯ ಲೆಕ್ಕಾಚಾರವಿರುವ ಹಾಗಿದೆ’ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಅನುಮಾನವ್ಯಕ್ತಪಡಿಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು `ನದಿ ತಿರುವು ಯೋಜನೆಗಳು, ಶರಾವತಿ ಪಂಪ್ ಸ್ಟೋರೇಜ್ ಯೋಜನೆ, ಬಂದರುಗಳ ಕಾಮಗಾರಿ, ಅರಣ್ಯ ಅತಿಕ್ರಮಣ ಸಮಸ್ಯೆ ಮತ್ತು ಎಲೆ ಚುಕ್ಕೆ ರೋಗದಿಂದ ಸಂಕಷ್ಟದಲ್ಲಿರುವ ರೈತರ ವಿಚಾರ, ಮಳೆ ಮಾಪನದ ಸಮಸ್ಯೆ ಬಗ್ಗೆ ಅರಿವಿದ್ದರೂ ನಾಯಕರು ಮಾತನಾಡಿಲ್ಲ. ಬಿಜೆಪಿಯನ್ನು ಟೀಕಿಸುವ ಉದ್ದೇಶಕ್ಕೆ ಪ್ರವಾಸ ಮಾಡಿದ ಹಾಗೇ ಕಾಣುತ್ತಿದ್ದು, ಸಮಸ್ಯೆಗಳ ಬಗ್ಗೆ ಶಾಸಕರು
- [ನಗೆ ಗ್ರಾಮದಲ್ಲಿ ನೋವು: ಶಾಲಾ ಬಾಲಕಿಯ ಸ್ಮಶಾನ ವಾಸ!](https://mobiletime.in/2026/02/pain-in-the-village-of-laughter-a-schoolgirls-graveyard-dwelling/): ಕಾರವಾರದ ನಗೆಕೋವೆ ಬಳಿ ಉಲ್ಲಾಸ ನಾಯ್ಕ ಅವರ ಮನೆ ಮುಂದೆ ನಡೆದು ಹೋಗುತ್ತಿದ್ದ ದಾಕ್ಷಾಯಣಿ ಗೌಡ ಅವರಿಗೆ ಮಿನಿ ಲಾರಿ ಗುದ್ದಿದ್ದು, ದಾಕ್ಷಾಯಣಿ ಗೌಡ ಅವರು ಸಾವನಪ್ಪಿದ್ದಾರೆ. ಕಾರವಾರದ ನಗೆಕೋವೆ ಗ್ರಾಮದಲ್ಲಿ ದಾಕ್ಷಾಯಣಿ ಯಶ್ವಂತ ಗೌಡ (15) ಅವರು ವಾಸವಾಗಿದ್ದರು. ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದ ಅವರು ಬಾಲ್ಯದಿಂದಲೂ ಪ್ರತಿಭಾನ್ವಿತರಾಗಿದ್ದರು. ಭಾನುವಾರ ಮಧ್ಯಾಹ್ನ ತಮ್ಮ ತಾಯಿ ಜಯಲಕ್ಷಿ ಗೌಡ ಅವರ ಜೊತೆ ದಾಕ್ಷಾಯಣಿ ಗೌಡ ಅವರು ರಸ್ತೆ ಬದಿ ನಡೆದು ಹೋಗುತ್ತಿದ್ದರು. ನಗೆ ಗ್ರಾಮದಿಂದ ಕೋವೆ ಗ್ರಾಮದ ಕಡೆ ಹೋಗುವಾಗ ಎದುರಿನಿಂದ ಐಸರ್ ಲಾರಿ ವೇಗವಾಗಿ ಬಂದಿತು. ಕೋವೆಯ ಕಡೆ ಹೋಗುತ್ತಿದ್ದ ದಾಕ್ಷಾಯಣಿ ಗೌಡ ಅವರಿಗೆ ಆ ಲಾರಿ ಗುದ್ದಿತು. ಎದುರಿನಿಂದ ಲಾರಿ ಗುದ್ದಿದ ರಭಸಕ್ಕೆ ದಾಕ್ಷಾಯಣಿ ಗೌಡ ಅವರು ಮಾರಣಾಂತಿಕವಾಗಿ ಗಾಯಗೊಂಡರು. ಅದಾದ ನಂತರ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿನ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರು. ಲಾರಿ ಓಡಿಸುತ್ತಿದ್ದ ಕೆರವಡಿಯ ಕಿರಣ ದೇವಿದಾಸ ನಾಯ್ಕ ಅವರು ಅಪಘಾತದ ನಂತರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಸ್ಥಳೀಯರು
- [ಬಾವಿಗೆ ಬಿದ್ದವನಿಗೆ ಮರುಜೀವ](https://mobiletime.in/2026/02/the-one-who-fell-into-the-well-was-brought-back-to-life/): ಸಿದ್ದಾಪುರದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯೊಬ್ಬರಿಗೆ ಮರುಜೀವ ಸಿಕ್ಕಿದೆ. ಬಾವಿಗೆ ಬಿದ್ದು ನೆನೆದಿದ್ದ ವ್ಯಕ್ತಿ ಬಗ್ಗೆ ಅರಿತ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಧಾವಿಸಿ ಜೀವ ಕಾಪಾಡಿದ್ದಾರೆ. ಸಿದ್ದಾಪುರದ ಕವಲಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದ ಬಗ್ಗೆ ಅಗ್ನಿಶಾಮಕ ಠಾಣೆಗೆ ಫೋನ್ ಬಂದಿತು. ಅಗ್ನಿಶಾಮಕ ದಳದ ಶೌರ್ಯ ತಂಡವರು ಸ್ಥಳಕ್ಕೆ ದೌಡಾಯಿಸಿದರು. ಆಗಲೇ ಅಲ್ಲಿ ಸ್ಥಳೀಯರು ಸಹ ಆಗಮಿಸಿದ್ದು, ಎಲ್ಲರೂ ಸೇರಿ ಬಾವಿಯಲ್ಲಿದ್ದ ವ್ಯಕ್ತಿಯನ್ನು ಮೇಲೆತ್ತಿದರು. ಸಹಾಯಕ ಠಾಣಾಧಿಕಾರಿ ಎ ಸುಬ್ರಹ್ಮಣ್ಯ ಅವರ ನೇತೃತ್ವದ ತಂಡದಲ್ಲಿ ನಾಗರಾಜ್ ಪಟಗಾರ, ವಿನಯ ಕುಮಾರ, ಬಾಳೇಶ ತಳವಾರ, ಪ್ರಸಾದ ನಾಯ್ಕ ಹಾಗೂ 112 ಪೊಲೀಸ್ ಸಹಾಯವಾಣಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು. ಶೌರ್ಯ ತಂಡದ ವೆಂಕಟೇಶ ಗೌಡ ಕೊಡಗಿಬೈಲ್ ಮತ್ತು ರಾಘವೇಂದ್ರ ನಾಯ್ಕ ಹಾಸಣಿಗೆ ತಮ್ಮ ಸಾಹಸದಿಂದ ವ್ಯಕ್ತಿಯ ಜೀವ ಕಾಪಾಡಿದರು.  
- [ಸ್ನೇಹಿತರ ಜೊತೆಗಿದ್ದ ಬಾಲಕ ಜಲ ಸಮಾಧಿ!](https://mobiletime.in/2026/02/a-boy-who-was-with-his-friends-drowned/): ಮುಂಡಗೋಡಿನ ಅಜಯ ಕರಿಹೊಲದವರ್ ಅವರು ಸ್ನೇಹಿತರ ಜೊತೆ ಸನವಳ್ಳಿ ಜಲಾಶಯಕ್ಕೆ ಈಜಲು ಹೋಗಿದ್ದು, ಜಲ ಸಮಾಧಿಯಾಗಿದ್ದಾರೆ. ಅಜಯ ಕರಿಹೊಲದವರ್ ಅವರು ಮುಳುಗುವುದನ್ನು ನೋಡಿದರೂ ಸ್ನೇಹಿತರು ತಕ್ಷಣ ವಿಷಯ ಬಾಯ್ಬಿಡದ ಕಾರಣ ಅಪಾಯದಲ್ಲಿದ್ದ ಬಾಲಕನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಭಾನುವಾರ ಶಾಲೆಗೆ ರಜೆಯಿದ್ದ ಕಾರಣ ಅಜಯ ಕರಿಹೊಲದವರ್ (17) ಅವರು ಸ್ನೇಹಿತರ ಜೊತೆ ಆಟಕ್ಕೆ ಹೋಗಿದ್ದರು. ಅಲ್ಲಿಂದ ಮುಂದೆ ಸ್ನೇಹಿತರೆಲ್ಲರೂ ಸೇರಿ ಸನವಳ್ಳಿ ಜಲಾಶಯಕ್ಕೆ ಹೋಗಿದ್ದು, ಈಜಲು ನಿರ್ಧರಿಸಿದರು. ನೀರಿನ ಆಳಕ್ಕೆ ಹೋಗಿದ್ದ ಅಜಯ ಕರಿಹೊಲದವರ್ ಅಲ್ಲಿಯೇ ಮುಳುಗಡೆಯಾದರು. ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಜೊತೆಗಿದ್ದವರು ಗಮನಿಸಿದರು. ಆದರೆ, ಅವರಿಂದ ಅಜಯ ಕರಿಹೊಲದವರ್ ಅವರ ರಕ್ಷಣೆ ಸಾಧ್ಯವಾಗಲಿಲ್ಲ. `ಅಜಯ ಕರಿಹೊಲದವರ್ ಅವರು ನೀರುಪಾಲಾದ ವಿಷಯ ಹೇಳಿದರೆ ತಮ್ಮ ಮೇಲೆ ಆರೋಪ ಬರುತ್ತದೆ’ ಎಂಬ ಕಾರಣಕ್ಕೆ ಸ್ನೇಹಿತರೆಲ್ಲರೂ ಸುಮ್ಮನೆ ಮನೆಗೆ ಮರಳಿದ್ದರು. ರಾತ್ರಿಯಾದರೂ ಅಜಯ ಕರಿಹೊಲದವರ್ ಮರಳದ ಕಾರಣ ಪಾಲಕರು ಸ್ನೇಹಿತರನ್ನು ಪ್ರಶ್ನಿಸಿದ್ದು, ಆ ವೇಳೆ ಅಜಯ ಕರಿಹೊಲದವರ್ ಅವರು ನೀರಿನಲ್ಲಿ ಮುಳುಗಿದ ವಿಷಯ ಹೊರಬಿದ್ದಿತು. ಆತಂಕಗೊAಡ
- [ಎರಡು ಬೈಕ್ ಡಿಕ್ಕಿ: ನಾಲ್ವರಿಗೆ ಗಾಯ](https://mobiletime.in/2026/02/two-bikes-collide-four-injured/): ಭಟ್ಕಳದ ಕಿತ್ರೆ ಕ್ರಾಸ್ ಬಳಿ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಒಟ್ಟು ನಾಲ್ಕು ಜನ ಗಾಯಗೊಂಡಿದ್ದಾರೆ. ಫೆಬ್ರವರಿ 22ರ ಮಧ್ಯಾಹ್ನ ಈ ಅಪಘಾತ ನಡೆದಿದೆ. ಭಟ್ಕಳದಿಂದ ಕುಂಟವಾಣಿಗೆ ತೆರಳುತ್ತಿದ್ದ ಕುಂಟವಾಣಿಯ ಗುಡಿಹಿತ್ಲುವಿನ ಕೃಷಿಕ ಮಂಜುನಾಥ ಶೇಷಾ ಶೆಟ್ಟಿ (52) ಹಾಗೂ ತಲಾಂದದ ಕೂಲಿ ಕಾರ್ಮಿಕ ವಿಜಯ ನಾರಾಯಣ ಗೊಂಡ (28) ಅವರು ಓಡಿಸುತ್ತಿದ್ದ ಬೈಕು ಮುಖಾಮುಖಿಯಾಗಿದೆ. ಎರಡು ಬೈಕಿನ ವೇಗ ಹೆಚ್ಚಾಗಿದ್ದ ಕಾರಣ ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ವಿಜಯ ಗೊಂಡ ಅವರ ಬೈಕಿನಲ್ಲಿ ಕುಳಿತಿದ್ದ ತಲಾಂದ ಗ್ರಾಮದ ಕೂಲಿ ಕಾರ್ಮಿಕ ಕಿರಣ ಹನುಮಂತ ನಾಯ್ಕ (26) ಮತ್ತು ಮಂಜುನಾಥ ಶೆಟ್ಟಿ ಬೈಕಿನಲ್ಲಿದ್ದ ಅವರ ಮಗಳು ಭೂಮಿಕಾ (19) ಅವರಿಗೂ ಈ ಅಪಘಾತದಲ್ಲಿ ನೋವಾಗಿದೆ. ಮಂಜುನಾಥ ಶೆಟ್ಟಿಯವರ ಎಡ ಕೈ ಮತ್ತು ತುಟಿಗೆ ಹಾಗೂ ಅವರ ಮಗಳಿಗೆ ಬಲ ಕೈ ಕಿರು ಬೆರಳಿಗೆ ಗಾಯಗಳಾಗಿವೆ. ವಿಜಯ ಗೊಂಡ ಅವರಿಗೆ ತಲೆಗೆ, ಬಲಗೆನ್ನೆಗೆ, ಮೂಗು, ತುಟಿ ಮತ್ತು
- [ವರ ದಕ್ಷಿಣೆಗಾಗಿ ಚಿತ್ರಹಿಂಸೆ: ಕಾರಿನ ಆಸೆಗೆ ಕಂದಮ್ಮನ ಕೊಲೆ!](https://mobiletime.in/2026/02/torture-for-the-grooms-sake-murder-of-kandamma-for-the-sake-of-a-car/): ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರೂ ಕಾರು ಕೊಡಿಸುವಂತೆ ಪತ್ನಿಗೆ ಕಾಡಿಸುತ್ತಿದ್ದ ಶಿರಸಿಯ ಜಾವೇದ್ ಅಕ್ತರ್ ಅವರು ಕಾರು ಸಿಗದ ಕಾರಣ ಸಬೀಹಾಭಾನು ಅವರ ಹೊಟ್ಟೆಗೆ ಒದ್ದಿದ್ದಾರೆ. ಪರಿಣಾಮ ಒಂದುವರೆ ತಿಂಗಳ ಭ್ರೂಣ ಅಲ್ಲಿಯೇ ಅಸುನೀಗಿದೆ! ಶಿರಸಿಯ ಗೌಡಳ್ಳಿಯ ಸೋಫಿಯಾ ನಗರದಲ್ಲಿ ಜಾವೇದ್ ಅಕ್ತರ್ ಅಬ್ದುಲ್ ಶಕುರ್ ಅವರು ವಾಸವಾಗಿದ್ದಾರೆ. ಅಬುದಾಬಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿರುವ ಅವರಿಗೆ ಕೈ ತುಂಬ ಸಂಬಳ ಸಿಗುತ್ತಿದೆ. 2025ರ ಜೂನ್ 1ರಂದು ಅವರು ಶಿರಸಿ ಕಸ್ತೂರಿಬಾ ನಗರದ ಸಬಿಹಾಭಾನು ಅವರನ್ನು ಮದುವೆ ಆಗಿದ್ದಾರೆ. ಮದುವೆ ವೇಳೆ 16 ತೊಲೆ ಬಂಗಾರವನ್ನು ಸಹ ಪಡೆದಿದ್ದಾರೆ. ಅದಾಗಿಯೂ ತವರು ಮನೆಯಿಂದ ಕಾರು ಕೊಡಿಸುವಂತೆ ಜಾವೇದ್ ಅಕ್ತರ್ ಅವರು ಸಬೀಹಾಭಾನು ಅವರಿಗೆ ಕಾಡಿಸುತ್ತಿದ್ದು, ಆರು ತಿಂಗಳಾದರೂ ಕಾರು ಸಿಗದ ಕಾರಣ ಸಬಿಹಾಭಾನು ಅವರ ತವರುಮನೆಗೆ ಹೋಗಿ ಕೂಗಾಡಿದ್ದಾರೆ. ಅದಾದ ನಂತರ ಸಬೀಹಾಭಾನು ಅವರ ಜೊತೆ ಜಾವೇದ್ ಅಕ್ತರ್ ಅವರು ಗೌಡಳ್ಳಿಯಲ್ಲಿರುವ ತಮ್ಮ ಮನೆಗೆ ಹೋಗಿದ್ದರು. ತಿಂಗಳು ಕಳೆದ ನಂತರ ಜಾವೇದ್ ಅಕ್ತರ್ ಅವರು ಪತ್ನಿ
- [ಹಲವು ಸಮಸ್ಯೆ ಬಗೆಹರಿಸಿದ ಜನಶಕ್ತಿಯ ಅರ್ಜಿ!](https://mobiletime.in/2026/02/a-public-petition-that-solved-many-problems/): ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದ್ದು, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಮನವಿ ಸ್ವೀಕಾರ ಮಾಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಮಾಧವ ನಾಯಕ ಅವರ ಜೊತೆ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾಧವ ನಾಯಕ ಅವರು ಕರ್ನಾಟಕ ಕರಾವಳಿಯ ಏಕೈಕ ಸರಕಾರಿ ವೈದ್ಯಕೀಯ ಕಾಲೇಜಿಗೆ ಅನುಭವಿ ನಿರ್ದೇಶಕರು, ತಜ್ಞ ವೈದ್ಯರು, ತಾಂತ್ರಿಕ ತಜ್ಞರು ಸೇರಿ ಅಗತ್ಯ ಸಿಬ್ಬಂದಿ ನೇಮಿಸುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಗೋವಾ ಗಡಿಯಲ್ಲಿರುವ ಕಾರವಾರದ ಸರಕಾರಿ ವೈದ್ಯಕೀಯ ಕಾಲೇಜಿಗೆ ಅಗತ್ಯ ಸೌಕರ್ಯಗಳಿಲ್ಲದಿರುವ ಬಗ್ಗೆ ಗಮನಸೆಳೆದಿದ್ದಾರೆ. `ಸಮಸ್ಯೆಗಳು ಸರಿಯಾಗಲು ಮುಖ್ಯವಾಗಿ ಕಿಮ್ಸ್ ಪ್ರಭಾರಿ ನಿರ್ದೇಶಕಿ ಡಾ ಪೂರ್ಣಿಮಾರನ್ನು ಬದಲಿಸಿ ಅನುಭವಿ ಸಮರ್ಥ ನಿರ್ದೇಶಕರನ್ನು ನೀಡಬೇಕು. ಬಿಪಿಎಲ್ ಕಾರ್ಡದಾರರಿಗೆ ಉಚಿತ ಚಿಕಿತ್ಸೆ
- [ಸ್ಕೋಡ್‌ವೆಸ್ ಸಹಯೋಗದಲ್ಲಿ ಸ್ವ ಉದ್ಯೋಗಿಗಳ ಸಮಾಗಮ: ಖರೀದಿ - ಮಾರಾಟಕ್ಕೆ ಹೊಸ ಒಪ್ಪಂದ](https://mobiletime.in/2026/02/self-employed-association-in-collaboration-with-skodves-new-agreement-for-purchase-and-sale/): ಉತ್ಪನ್ನಗಳ ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ಸಮನ್ವಯ ಹಾಗೂ ಸಂಪರ್ಕ ಮೂಡಿಸುವುದಕ್ಕಾಗಿ ಸ್ಕೊಡ್‌ವೆಸ್ ಸಂಸ್ಥೆ ವಿನೂತನ ಕಾರ್ಯಾಗಾರ ನಡೆಸಿದ್ದು, ಮೊದಲ ಪ್ರಯತ್ನದಲ್ಲಿಯೇ ಅದು ಯಶಸ್ವಿಯಾಗಿದೆ. 14ಕ್ಕೂ ಅಧಿಕ ಖರೀದಿ ಸಂಸ್ಥೆ ಹಾಗೂ 50ರಷ್ಟು ಮಾರಾಟ ಸಂಸ್ಥೆಯವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, 35ಕ್ಕೂ ಬಗೆಯ ಉತ್ಪನ್ನಗಳ ವ್ಯವಹಾರಕ್ಕೆ ಒಪ್ಪಂದ ನಡೆದಿದೆ. ಜಿ ಐ ಝಡ್, ಇಸಾಫ್, ಕೃಷಿ ಹಾಗೂ ತೋಟಗಾರಿಕಾ ಇಲಾಖೆ, ಪ್ರಗತಿಮಿತ್ರ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಶಿರಸಿಯ ಪೂಗಭವನದಲ್ಲಿ ಇದೇ ಮೊದಲ ಬಾರಿಗೆ 2ದಿನಗಳ ಖರೀದಿ-ಮಾರಾಟ ಕಾರ್ಯಾಗಾರ ನಡೆದಿದೆ. ರಾಜ್ಯಮಟ್ಟದ ಈ ಕಾರ್ಯಾಗಾರದಲ್ಲಿ ಹಲವು ಉತ್ಪನ್ನಗಳ ಪ್ರದರ್ಶನ ನಡೆದಿದ್ದು, ಅನೇಕರಿಗೆ ಅನುಕೂಲವಾಗಿದೆ. `ಸಣ್ಣ ರೈತರ ಮಾರುಕಟ್ಟೆಗೆ ಬೈಯರ್ & ಸೆಲ್ಲರ್ ಮೀಟ್ ಎಂಬುದು ಯೋಗ್ಯ ವೇದಿಕೆ’ ಎಂದು ಶಿರಸಿ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರು ಕರೆ ನೀಡಿದ್ದಾರೆ. ಈ ಕಾರ್ಯಕ್ರಮ ಉದ್ಘಾಟಿಸಿದ ಅವರು `ಕೃಷಿ ಕ್ಷೇತ್ರವನ್ನು ರೋಗ ಮುಕ್ತ ಮಾಡಿ’ ಎಂದು ವಿಜ್ಞಾನಿ ಹಾಗೂ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. `ಖರೀದಿದಾರರು
- [ಶರಣರನ್ನು ಸ್ಮರಿಸಿದ ಶಿರಸಿ ಆಡಳಿತ](https://mobiletime.in/2026/02/sirsi-administration-commemorates-the-martyrs/): ಶಿರಸಿ ತಹಶೀಲ್ದಾರ್ ಕಚೇರಿಯಲ್ಲಿ ಶರಣರನ್ನು ಸ್ಮರಿಸುವ ಕಾರ್ಯಕ್ರಮ ನಡೆದಿದ್ದು, ಉರಿಲಿಂಗ ಪೆದ್ದಿ, ಮಾದಾರ ಧೂಳಯ್ಯ, ಮಾದಾರ ಚನ್ನಯ್ಯ, ಢೋಹರ ಕಕ್ಕಯ್ಯ ಮತ್ತು ಸಮಗಾರ ಹರಳಯ್ಯ ಅವರ ಆದರ್ಶಗಳನ್ನು ಪ್ರಸ್ತುತಪಡಿಸಲಾಗಿದೆ. ಕಾಯಕ ಶರಣರ ಸಮುದಾಯದ ಆಶ್ರಯದಲ್ಲಿ ನಡೆದ ಈ ಜಯಂತೋತ್ಸವವನ್ನು ಶಿರಸಿ ತಹಶೀಲ್ದಾರ ರಮೇಶ ಹೆಗಡೆ ಅವರು ಉದ್ಘಾಟಿಸಿದರು. ಸಂತ ರವಿದಾಸ ಸಮಾಜ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಅರವಿಂದ ಬಿನೇತ್ರೇಕರ ಅವರು ದೀಪ ಬೆಳಗಿಸುವ ವೇಳೆ ಕೈ ಜೋಡಿಸಿದರು. ಶರಣರ ಭಾವಚಿತ್ರಗಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ರಘು ಜಿ ಕಾನಡೆ ಅವರು ಮಾತನಾಡಿ ಕಾರ್ಯಕ್ರಮದ ರೂಪುರೇಷೆಗಳ ವಿಷಯ ಮಂಡಿಸಿದರು. ಢೋಹರ ಕಕ್ಕಯ್ಯ ಹಾಗೂ ಸಮಗಾರ ಹರಳಯ್ಯ ಸಮಾಜದ ಕರ್ಮಯೋಗಿ ಪರವಾಗಿ ಡಾ ಪಿ ಟಿ ಕದಮ್ ಹಾಗೂ ತುಕಾರಾಮ ವಾಸುದೇವ ಜೋಗಳೇಕರ ಅವರನ್ನು ಗೌರವಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಅನಿತಾ ಬೆಳಗಾಂವಕರ್ ಹಾಗೂ ಕೈಗಾ ಅಣು ಘಟಕದ ನಿವೃತ್ತ ಅಧಿಕಾರಿ ಸುಭಾಷ ಕಾನಡೆ ಅವರು ಕಾಯಕ ಶರಣರ ವಚನ
- [ಭೀಮಣ್ಣರ ಹೆಸರು ಬಾಯಿಗೆ ಬರಲ್ಲ!](https://mobiletime.in/2026/02/the-name-of-bhimanna-never-comes-to-mind/): ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು `ಭೀಮಣ್ಣ ಖಂಡ್ರೇ’ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಗೋಕರ್ಣ ಎನ್ನುವ ಬದಲು `ಗೋಕಾಕ್’ ಎಂದು ಹೇಳಿದ್ದಾರೆ. ಅದಾದ ನಂತರ ಸುಧಾರಿಸಿಕೊಂಡು ಸರಿಯಾದ ಪದ ಪ್ರಯೋಗ ಮಾಡಿದ್ದಾರೆ. ಗಂಗಾವಳಿ ಸೇತುವೆಯ ಉದ್ಘಾಟನಾ ಭಾಷಣದ ಆರಂಭದಲ್ಲಿ ಸಿದ್ದರಾಮಯ್ಯ ಅವರು ಶಾಸಕ ಸತೀಶ್ ಸೈಲು, ದೇಶಪಾಂಡೆ, ಭೀಮಣ್ಣ ಖಂಡ್ರೇ ಎನ್ನುತ್ತ ಮಾತು ಶುರು ಮಾಡಿದರು. ಭಾಷಣದ ನಡುವಿನಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಎಲ್ಲಾ ಶಾಸಕರ ಹೆಸರು ಉಚ್ಚಾರಿಸಿದ್ದು, ಆ ವೇಳೆಯಲ್ಲಿಯೂ ಭೀಮಣ್ಣ ನಾಯ್ಕ ಅವರ ಹೆಸರು ಉಚ್ಚರಿಸಲು ತಡವರಿಸಿದರು. ಭಾಷಣದಲ್ಲಿ ಎರಡನೇ ಬಾರಿ ಎಲ್ಲರ ಹೆಸರು ಹೇಳುವಾಗ ಭೀಮಣ್ಣನ ನಾಯ್ಕ ಎಂದು ಸಂಬೋಧಿಸಿದ ಸಿದ್ದರಾಮಯ್ಯ ಅವರು ಮತ್ತೊಮ್ಮೆ `ಭೀಮಣ್ಣ ನಾಯ್ಕ’ ಎಂದು ಸರಿಯಾಗಿ ಓದಿ ಹೇಳಿದರು. ತಮ್ಮ ಭಾಷಣದಲ್ಲಿ ಗೋಕರ್ಣದ ಬದಲು `ಗೋಕಾಕ್’ ಎಂದು ಹೇಳಿದ್ದು, ನಂತರ ಸುಧಾರಿಸಿಕೊಂಡು `ಥೊ ಅಲ್ಲಲ್ಲ, ಎಂಥದು ಅದು ಹೊನ್ನಾವರ’ ಎಂದು ಹೇಳಿದರು. ಆಗ ಜನ
- [ಮುಖ್ಯಮಂತ್ರಿ ಆಗಮನ: ಸ್ವಕ್ಷೇತ್ರದಲ್ಲಿಯೇ ಶಾಸಕರಿಗೆ ಅವಮಾನ!](https://mobiletime.in/2026/02/chief-ministers-arrival-an-insult-to-mlas-in-their-own-constituency/): `ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಸದನದ ಒಳಗೆ ಒಂದು ರೀತಿ ಮಾತನಾಡುತ್ತಾರೆ. ಕ್ಷೇತ್ರಕ್ಕೆ ಬಂದ ನಂತರ ಮತ್ತೊಂದು ರೀತಿ ವರ್ತಿಸುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಯಲ್ಲಿಯೇ ಭಾಷಣ ಮಾಡಿದ್ದಾರೆ. `ದಿನಕರ ಶೆಟ್ಟಿ ಅವರು ಕಾಂಗ್ರೆಸ್ಸಿಗೆ ಬಂದರೂ ಅವರನ್ನು ನಾವು ಸೇರಿಸಿಕೊಳ್ಳುವುದಿಲ್ಲ’ ಎನ್ನುವ ಮೂಲಕ ದಿನಕರ ಶೆಟ್ಟಿ ಅವರಿಗೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ. ಈಚೆಗೆ ದಿನಕರ ಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. `ಕ್ಷೇತ್ರದ ಅಭಿವೃದ್ಧಿಗೆ 50 ಲಕ್ಷ ಬೇಡಿದರೂ ಕೊಟ್ಟಿಲ್ಲ’ ಎಂದು ಸುದ್ದಿಗಾರರ ಬಳಿ ಹೇಳಿಕೊಂಡಿದ್ದರು. ಭಾನುವಾರ ಗಂಗಾವಳಿ ಸೇತುವೆ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ `2017ರಲ್ಲಿ ಈ ಸೇತುವೆಗೆ ನಾನು ಅಡಿಗಲ್ಲು ಹಾಕಿದಾಗ 28 ಕೋಟಿ ಅಂದಾಜು ವೆಚ್ಚ ಆಗಿತ್ತು. ಈಗ 35 ಕೋಟಿ ರೂ ವೆಚ್ಚವಾಗಿದೆ. ಹಿಂದಿನ ಸರ್ಕಾರ ಸೇತುವೆ ನಿರ್ಮಾಣಕ್ಕೆ ಆಸಕ್ತಿವಹಿಸದ ಕಾರಣ ವಿಳಂಭವಾಗಿದೆ. ಜೊತೆಗೆ ಹಣವೂ ಅಧಿಕವಾಗಿದೆ’ ಎಂದವರು ಹೇಳಿದರು. ನಂತರ ಮಾಡಿದ ಭಾಷಣದಲ್ಲಿ
- [ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸೀಎಂ ಬದ್ಧ!](https://mobiletime.in/2026/02/cm-committed-to-building-a-well-equipped-hospital/): `ಉತ್ತರ ಕನ್ನಡ ಜಿಲ್ಲೆಯ ಜನರ ಬಹುವರ್ಷದ ಬೇಡಿಕೆಯ ಪ್ರಕಾರ ಇಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಭಾನುವಾರ ಕಾರವಾರದ ವೈದ್ಯಕೀಯ ವಿಜ್ಞಾನ ಕಾಲೇಜು ಆವರಣದಲ್ಲಿ ಅವರು ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದು, `ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳ ಅಗತ್ಯದ ಬಗ್ಗೆ ಜನ ಆಗ್ರಹಿಸಿದ್ದಾರೆ. ಬಹುಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ. ಇಲ್ಲಿನ ಶಾಸಕರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸುಸಜ್ಜಿತ ಆಸ್ಪತ್ರೆಗಾಗಿ ಮನವಿ ಸಲ್ಲಿಸಿದ್ದು, ಮುಂದಿನ ಆಯವ್ಯಯದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ’ ಎಂದವರು ಸ್ಪಷ್ಠಪಡಿಸಿದರು. `ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ. ಅದರ ಭಾಗವಾಗಿ ಕಾರವಾರದಲ್ಲಿಯೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಲಿದೆ. ಮುಂದಿನ ವರ್ಷದಿಂದಲೇ ಕಾಮಗಾರಿ ಶುರುವಾಗಲಿದ್ದು, ಆ ಆಸ್ಪತ್ರೆಯನ್ನು ನಾನೇ ಉದ್ಘಾಟನೆ ಮಾಡುತ್ತೇನೆ’ ಎಂಬ ವಿಶ್ವಾಸದ ಮಾತುಗಳನ್ನು ಸಿದ್ದರಾಮಯ್ಯ ಅವರು ಆಡಿದ್ದಾರೆ. ಎಂದಿನoತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು `ಆ ಪಕ್ಷದ ಆಡಳಿತದಲ್ಲಿ
- [ಕಾಂಗ್ರೆಸ್ ಶಾಸಕರೇ.. ಬಾಯ್ಮುಚ್ಚಿ!](https://mobiletime.in/2026/02/congress-mlas-shut-up/): ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಕೆಲ ಕಾಂಗ್ರೆಸ್ ಶಾಸಕರ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ. `ಶಾಸಕರ ವಿದೇಶ ಪ್ರವಾಸದ ಕುರಿತು ಅವರು ಮರಳಿದ ನಂತರ ಪ್ರಶ್ನಿಸಲಾಗುತ್ತದೆ. ಅಲ್ಲಿಯವರೆಗೆ ಸುಮ್ಮನಿದ್ದರೆ ಒಳಿತು’ ಎಂದವರು ಹೇಳಿದ್ದಾರೆ. ಈಚೆಗೆ ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಶಾಸಕರ ವಿದೇಶ ಪ್ರವಾಸದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದರು. `ಹೆಚ್ಚು ದುಡ್ಡಿದ್ದವರು ಎಲ್ಲಾ ಕಡೆ ಹೋಗುತ್ತಾರೆ’ ಎಂದು ಹೇಳುವ ಮೂಲಕ ಜನಪ್ರತಿನಿಧಿಗಳ ಮೋಜಿನ ಪ್ರವಾಸದ ಬಗ್ಗೆ ವ್ಯಂಗ್ಯವಾಡಿದ್ದರು. ಅದರೊಂದಿಗೆ ಶಾಸಕ ಇಕ್ಬಾಲ್ ಹುಸೇನ್ ಸೇರಿ ಅನೇಕರು ವಿದೇಶಿ ಪ್ರವಾಸದ ಬಗ್ಗೆ ಮಾತನಾಡಿದ್ದರು. ರವಿ ಗಾಣಿಗ, ಶಿವಗಂಗ ಬಸವರಾಜ ಅವರು ಸಹ ವಿದೇಶಿ ಪ್ರವಾಸದ ಬಗ್ಗೆ ಅಸಮಧಾನದ ಮಾತನಾಡಿದ್ದರು. ಈ ಎಲ್ಲಾ ಹಿನ್ನಲೆ ಕಾರವಾರದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ ಅವರು `ವಿದೇಶ ಪ್ರವಾಸಕ್ಕೆ ಹೋದವರು ನಮ್ಮವರೇ. ಅವರು ಮರಳಿದ ನಂತರ ಏಕೆ ಹೋಗಿದ್ದರು? ಎನ್ನುವ ಬಗ್ಗೆ ಪ್ರಶ್ನಿಸುವೆ. ಅಲ್ಲಿಯವರೆಗೆ ಈ ಎಲ್ಲರೂ ಸುಮ್ಮನಿದ್ದರೆ
- [ಅಡಿಕೆ ತೋಟ: ಫಲ ಗುತ್ತಿಗೆ ವಿಷಯದಲ್ಲಿ ಅರಣ್ಯಾಧಿಕಾರಿಗೆ ಮೋಸ!](https://mobiletime.in/2026/02/areca-nut-plantation-forest-officer-cheated-in-fruit-lease-case/): ಸ್ವಂತ ಕೃಷಿ ಮಾಡಲು ಆಗದ ನಿವೃತ್ತ ಅರಣ್ಯ ಸಂರಕ್ಷಾಧಿಕಾರಿ ಮಹದೇವ ನಾಯ್ಕ ಅವರು ಜೊಯಿಡಾದಲ್ಲಿರುವ ತಮ್ಮ ಅಡಿಕೆ ತೋಟದ ನಿರ್ವಹಣೆ ಹಾಗೂ ಫಲಗುತ್ತಿಗೆ ಹೊಣೆಯನ್ನು ಸಿದ್ದಾಪುರದ ಮೈದಿನ್ ಖಾನ್ ಅವರಿಗೆ ವಹಿಸಿದ್ದಾರೆ. ಆದರೆ, ಮೈದಿನ್ ಖಾನ್ ಅವರು ನಿರ್ವಹಣೆ ಮಾಡದೇ ತೋಟದಲ್ಲಿ ಬೆಳೆದಿದ್ದ 30 ಕ್ವಿಂಟಲ್ ಅಡಿಕೆ ಕದ್ದು ಪರಾರಿಯಾಗಿದ್ದಾರೆ! ಮಹದೇವ ನಾರಾಯಣ ನಾಯ್ಕ ಅವರು ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದರು. ನಿವೃತ್ತಿ ನಂತರ ಅವರು ಧಾರವಾಡಕ್ಕೆ ಹೋಗಿ ವಾಸವಾಗಿದ್ದರು. 75 ವರ್ಷವಾದ ಹಿನ್ನಲೆ ಕೃಷಿ ಕೆಲಸ ಅಸಾಧ್ಯ ಎಂದು ಭಾವಿಸಿ ಅವರು ತೋಟದ ನಿರ್ವಹಣೆಯನ್ನು ಸಿದ್ದಾಪುರ ಕಾನಸೂರಿನ ಮೈದಿನ್ ಖಾನ್ ಹಾಗೂ ಅವರ ತಂದೆ ಅಬ್ದುಲ್ ಖಾನ್ ಅವರಿಗೆ ವಹಿಸಿದ್ದರು. ಈ ಬಗ್ಗೆ 2025ರ ಮೇ ಮಾಸದಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆ ಪ್ರಕಾರ, ಜೊಯಿಡಾದ ಉಳುವಿಯಲ್ಲಿರುವ 9 ಎಕರೆ ಕ್ಷೇತ್ರದಲ್ಲಿ 8 ಎಕರೆ ಅಡಿಕೆ ತೋಟದ ನಿರ್ವಹಣೆಯನ್ನು ಮೈದಿನ್ ಖಾನ್ ಹಾಗೂ ಅವರ ತಂದೆ ಅಬ್ದುಲ್ ಖಾನ್ ಅವರು ಮಾಡಬೇಕಿತ್ತು. ಅಲ್ಲಿ ಬೆಳೆಯಲಾದ
- [ಗಾಜಿನ ಬಳೆ ಆಸೆಗೆ ಚಿನ್ನದ ಬಳೆ ಕಳೆದುಕೊಂಡ ಅಜ್ಜಿ!](https://mobiletime.in/2026/02/grandma-lost-her-gold-bracelet-for-the-desire-for-a-glass-bracelet/): ಶಿವರಾತ್ರಿ ದಿನ ಗೋಕರ್ಣದ ಜಾತ್ರೆ ಪೇಟೆಗೆ ಹೋಗಿದ್ದ ಮಹಾದೇವಿ ಮಾರಿಗೋಳಿ ಅವರು ತಮ್ಮ ಕೈಯಲ್ಲಿದ್ದ ಚಿನ್ನದ ಬಳೆಯನ್ನು ಕಾಣೆ ಮಾಡಿಕೊಂಡಿದ್ದಾರೆ. ಅವರು ಗಾಜಿನ ಬಳೆ ಖರೀದಿಸುವ ವೇಳೆ ಕಳ್ಳರು ಕೈ ಚಳಕ ಪ್ರದರ್ಶಿಸಿ ಚಿನ್ನದ ಬಳೆ ಅಪಹರಿಸಿದ ಅನುಮಾನವ್ಯಕ್ತವಾಗಿದೆ. ಗೋಕರ್ಣದ ಕೋಟಿತೀರ್ಥದ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮಹಾದೇವಿ ಸದಾಶಿವ ಮಾರಿಗೋಳಿ (75) ಅವರು ವಾಸವಾಗಿದ್ದಾರೆ. ಫೆ 18ರಂದು ಶಿವರಾತ್ರಿ ಅಂಗವಾಗಿ ಅವರು ಜಾತ್ರೆ ಪೇಟೆಗೆ ಹೋಗಿದ್ದರು. ರಥಬೀದಿಯಲ್ಲಿ ತಿರುಗಾಟ ಮುಗಿಸಿದ ನಂತರ ಅವರು ವೆಂಕಟ್ರಮಣ ದೇವಸ್ಥಾನದ ಎದುರಿನ ಬಳೆ ಅಂಗಡಿ ಬಳಿ ಬಂದರು. ಅಲ್ಲಿ ಬಳೆ ಹಾಗೂ ಅರಶಿನ ಖರೀದಿಗೆ ಮುಂದಾದಾಗ ಅವರ ಎಡಗೈಯಲ್ಲಿರುವ ಎರಡು ಬಳೆ ಕಾಣಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಆ ಬಳೆಗಳು ಸಿಗಲಿಲ್ಲ. 14 ಗ್ರಾಂ ತೂಕದ ಆ ಬಳೆಗಳು 75 ಸಾವಿರ ರೂ ಮೌಲ್ಯದ್ದಾಗಿದ್ದವು. ಆ ಬಳೆ ಕದ್ದ ಕಳ್ಳರಿಗೆ ಶಾಪ ಹಾಕಿದ ಮಹಾದೇವಿ ಮಾರಿಗೋಳಿ ಅವರು ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ ಹೋದರು. ಸದ್ಯ
- [ಅಕ್ರಮ ಗೋ ಸಾಗಾಟಕ್ಕೆ ತಡೆ](https://mobiletime.in/2026/02/stop-illegal-cow-trafficking/): ಭಟ್ಕಳದ ಕಸಾಯಿಖಾನೆಗೆ ಹೋಗುತ್ತಿದ್ದ ಮೂರು ದಷ್ಟಪುಷ್ಟ ಹೋರಿಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆಪಡೆದಿದ್ದಾರೆ. ಗುಳ್ಳಾಪುರದ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಆ ಗೋವುಗಳನ್ನು ಬಿಡುವಂತೆ ಒತ್ತಡ ಬಂದಿದ್ದು, ಪ್ರಭಾವಿಗಳ ಒತ್ತಡಕ್ಕೂ ಮಣಿಯದೇ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶನಿವಾರ ಒಂದೇ ಕಂಟೇನರಿನಲ್ಲಿ ಮೂರು ಹೋರಿಗಳನ್ನು ಸಾಗಿಸಲಾಗುತ್ತಿತ್ತು. ರಾಜಾರೋಷವಾಗಿ ಕಳ್ಳ ಸಾಗಾಣಿಕೆ ನಡೆದಿದ್ದರೂ ಅದನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ. ಅನುಮತಿ ಇಲ್ಲದೇ ಗೋ ಸಾಗಾಟ ನಡೆದ ಬಗ್ಗೆ ಯಲ್ಲಾಪುರ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸ್ ಸಿಬ್ಬಂದಿ ಆ ಕಂಟೇನರ್’ನ್ನು ತಡೆದರು. ಒಳಗಿದ್ದ ಭಾರೀ ಗಾತ್ರದ ಗೋವುಗಳನ್ನು ಗಮನಿಸಿ ದಾಖಲೆ ಕೇಳಿದರು. ಯಾವುದೇ ದಾಖಲೆಗಳಿಲ್ಲದೇ ಜಾನುವಾರು ಸಾಗಾಟ ನಡೆದಿರುವುದು ಗಮನಕ್ಕೆ ಬಂದಿತು. ಪ್ರತಿ ಗೋವು 5-6 ಲಕ್ಷ ರೂ ಬೆಲೆ ಬಾಳುವಂತದ್ದಾಗಿದ್ದು, ಅದನ್ನು ಬಿಡಿಸಿಕೊಳ್ಳಲು ಅಕ್ರಮ ಗೋ ಸಾಗಾಟಕಾರರ ಒತ್ತಡಗಳು ಬಂದವು. ಆದರೆ, ಆ ಒತ್ತಡಕ್ಕೆ ಪೊಲೀಸರು ಮಣಿಯಲಿಲ್ಲ. ಸಾರ್ವಜನಿಕರ ಸಹಕಾರದಲ್ಲಿ ಗೋವುಗಳನ್ನು ರಕ್ಷಿಸಿದರು. ಜೊತೆಗೆ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.
- [ಪಾಳು ಬಿದ್ದ ಕೋಣೆಯಲ್ಲಿ ಕ್ವಿಂಟಲ್ ಕ್ವಿಂಟಲ್ ಕಳ್ಳ ಅಕ್ಕಿ!](https://mobiletime.in/2026/02/a-quintal-of-stolen-rice-found-in-a-dilapidated-room/): ಕುಮಟಾ ಮಿರ್ಜಾನ್ ಬಳಿಯಿರುವ ತಾರಿಬಾಗಿಲಿನ ಮಹಮದ್ ಗೌಸ್ ಅವರ ಪಾಳು ಬಿದ್ದ ಕೋಣೆಯಲ್ಲಿ ರಾಶಿ ರಾಶಿ ಅಕ್ಕಿ ಮೂಟೆಗಳನ್ನು ದಾಸ್ತಾನು ಮಾಡಲಾಗಿದೆ. ಸರ್ಕಾರದಿಂದ ಬಡವರಿಗೆ ವಿತರಣೆ ಆಗಬೇಕಿದ್ದ ಅಕ್ಕಿಯನ್ನು ಇಲ್ಲಿ ಕದ್ದು-ಮುಚ್ಚಿ ಶೇಖರಿಸಿಡಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ರಹಸ್ಯ ಕಾರ್ಯಾಚರಣೆ ನಡೆಸಿ, ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆದಿದ್ದಾರೆ. ಮಹಮ್ಮದ್ ಗೌಸ್ ಮೈದಿನ್ ಸಾಬ ಆಗಾ ಅವರು ತಮ್ಮ ಮಾಲಿಕತ್ವದ ಪಾಳು ಬಿದ್ದ ಕಟ್ಟಡದಲ್ಲಿ 63 ಚೀಲ ಅಕ್ಕಿ ಅಡಗಿಸಿಟ್ಟಿರುವುದು ಈ ವೇಳೆ ಬೆಳಕಿಗೆ ಬಂದಿದೆ. ಸರ್ಕಾರ ಬಡವರಿಗೆ ವಿತರಿಸಿದ ಅಕ್ಕಿಯನ್ನು ಮಹಮ್ಮದ್ ಗೌಸ್ ಅವರು ಹಣದ ಆಮೀಷ ಒಡ್ಡಿ ಬಡವರಿಂದ ಕಸಿದುಕೊಳ್ಳುತ್ತಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಆ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಹಮದ್ ಗೌಸ್ ಮಾರಾಟ ಮಾಡುತ್ತಿರುವ ಬಗ್ಗೆ ಅಂದಾಜಿಸಲಾಗಿದೆ. ಕಟ್ಟಡದಲ್ಲಿ ಸಿಕ್ಕ ಅಕ್ಕಿಯನ್ನು ಅಧಿಕಾರಿಗಳು ತೂಕ ಮಾಡಿದ್ದಾರೆ. 59 ಪ್ಲಾಸ್ಟಿಕ್ ಚೀಲ ಹಾಗೂ 3 ಗೋಣಿ ಚೀಲದಲ್ಲಿದ್ದ ಒಟ್ಟು ಅಕ್ಕಿ ತೂಕ
- [ಒಬ್ಬರ ಸಾವು: ಇಬ್ಬರಿಗೆ ನೋವು!](https://mobiletime.in/2026/02/one-death-two-people-suffer/): ಹೊನ್ನಾವರದಿಂದ ಮುರುಡೇಶ್ವರ ಕಡೆಗೆ ವೇಗವಾಗಿ ಸಂಚರಿಸಿದ ಕ್ಯಾಂಟರ್ ಒಂದು ಬೈಲೂರು ಕ್ರಾಸಿನ ಬಳಿ ಡಿವೈಡರಿಗೆ ಗುದ್ದಿದ್ದು, ನಂತರ ಟಾಕ್ಟರಿಗೆ ಬಡಿದಿದೆ. ಪರಿಣಾಮ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಫೆಬ್ರವರಿ 19ರಂದು ಬೆಳಗಾವಿಯ ಶಂಕರ ಯಲ್ಲಪ್ಪ ಅಷ್ಟೇಕರ ಅವರು ಕ್ಯಾಂಟರ್ ಓಡಿಸುತ್ತಿದ್ದರು. ಸಂಜೆ ವೇಳೆ ಅವರು ಹೊನ್ನಾವರ ದಾಟಿದ್ದು, ತಮ್ಮ ವಾಹನದ ವೇಗ ಹೆಚ್ಚಿಸಿದರು. ಆ ಅವಾಂತರಕ್ಕೆ ಮುಂಡಗೋಡ ಚೌಡಳ್ಳಿಯ ಮೋಹನ (ಮಣಿಕಂಠ) ನಾಗರಾಜ ಶಿಂಧೆ ಅವರು ಸಾವನಪ್ಪಿದರು. ಮೋಹನ ಶಿಂದೆ ಅವರು ರಸ್ತೆಯ ಡಿವೈಡರ್ ಹತ್ತಿರ ಸ್ವಚ್ಚ ಮಾಡುವ ಕೆಲಸ ಮಾಡುತ್ತಿದ್ದ ಐ ಆರ್ ಬಿ ಕಂಪನಿಯ ಸಬ್ ಕಂಟ್ರಾಕ್ಟರ್ ಧನಶ್ರೀ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದರು. ಕ್ಯಾಂಟರ್ ಗುದ್ದಿದ ರಭಸಕ್ಕೆ ಅವರ ಎರಡು ಕಾಲುಗಳಿಗೆ ಗಾಯವಾಗಿದ್ದು, ಉಡುಪಿ ಆಸ್ಪತ್ರೆಗೆ ಕರೆದೊಯ್ದರು ಸಹ ಬದುಕಿಸಿಕೊಳ್ಳಲು ಆಗಲಿಲ್ಲ. ಫೆಬ್ರವರಿ 20ರಂದು ಅವರು ಕೊನೆಯುಸಿರೆಳೆದರು. ಈ ಅವಘಡದಲ್ಲಿ ಇನ್ನೊಬ್ಬ ಕೂಲಿ ಕಾರ್ಮಿಕ ಉತ್ತರ ಪ್ರದೇಶದ ಗುಡ್ಡುಕುಮಾರ್ ಭಾವಿಲಾಲ್ ಅವರು ಸಹ ಗಾಯಗೊಂಡಿದ್ದಾರೆ. ಕ್ಯಾಂಟರ್ ವಾಹನ ಟ್ರ‍್ಯಾಕ್ಟರಿನ
- [ಉತ್ತರ ಕನ್ನಡ | ಈ ಊರುಗಳಲ್ಲಿ ನಾಡ ದೊರೆಗಳ ಜಂಟಿ ಪ್ರವಾಸ!](https://mobiletime.in/2026/02/uttara-kannada-joint-tour-of-the-rulers-of-the-country-in-these-towns/): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಫೆಬ್ರವರಿ 22ರ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ವಿವಿಧ ಊರುಗಳಿಗೆ ಜಂಟಿ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ. ಈ ಪ್ರವಾಸದ ವೇಳೆ ಅವರು ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಮೂಲಕ ಅವರಿಬ್ಬರು ಒಟ್ಟಿಗೆ ಪ್ರಯಾಣಿಸಲಿದ್ದು, ಕಾರವಾರ ಮತ್ತು ಅಂಕೋಲಾದಲ್ಲಿ ನಡೆಯುವಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಂಕೋಲಾದಲ್ಲಿ ಗಂಗಾವಳಿ ನೂತನ ಸೇತುವೆಯನ್ನು ಅವರು ಉದ್ಘಾಟಿಸಲಿದ್ದಾರೆ. ಅಂಕೋಲಾ ತಾಲೂಕಿನ ಮಂಜಗುಣಿ ಗ್ರಾಮದಿಂದ ಕುಮಟಾ ತಾಲೂಕಿನ ಗಂಗಾವಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂತನ ಸೇತುವೆಯನ್ನು ಮಂಜಗುಣಿಯಲ್ಲಿ ಉದ್ಘಾಟಿಸಲಿದ್ದಾರೆ. ಕಾರವಾರದಲ್ಲಿ 450 ಹಾಸಿಗೆಗಳ ಆಸ್ಪತ್ರೆ ಲೋಕಾರ್ಪಣೆ ಮಾಡಲಿದ್ದಾರೆ. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 450 ಹಾಸಿಗೆಗಳ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕಾರವಾರದಲ್ಲಿಯೇ ಕುಳಿತು ಆ ಇಬ್ಬರು ನಾಯಕರು ಆನ್‌ಲೈನ್ ಮೂಲಕ ಯಲ್ಲಾಪುರ ತಾಲೂಕಿನ ಖಾನಾಪುರ-ತಾಳಗುಪ್ಪಾ
- [ಫೋನ್ ಮೂಲಕವೇ ಪ್ರೂಟ್ ಐಡಿ ಮಾಡಿಸಿ!](https://mobiletime.in/2026/02/create-a-root-id-right-from-your-phone/): ಪಿಎಂ ಕಿಸಾನ್ ಸಹಾಯಧನ ಸೇರಿ ಕೃಷಿ ಇಲಾಖೆಯ ಯೋಜನೆಗಳ ಪ್ರಯೋಜನಪಡೆಯಲು ಪ್ರತಿಯೊಬ್ಬರು ಪ್ರೂಟ್ ಐಡಿ ಪಡೆಯುವುದು ಕಡ್ಡಾಯವಾಗಿದೆ. ಈ ಹಿನ್ನಲೆ ಫೋನ್ ಮೂಲಕವೇ ಪ್ರೂಟ್ ಐಡಿ ಮಾಡಿಕೊಡಲು ಗ್ರಾಮ ಒನ್ ಕೇಂದ್ರವೊoದು ಆಸಕ್ತಿವಹಿಸಿದೆ. ಫೆಬ್ರವರಿ 26ರ ಒಳಗೆ ಪ್ರತಿಯೊಬ್ಬ ರೈತರು ಪ್ರೂಟ್ ಐಡಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಕೃಷಿ ಇಲಾಖೆ ಫಾರ್ಮಾನು ಹೊರಡಿಸಿದೆ. ಸಮೀಪದ ಗ್ರಾಮ ಕೇಂದ್ರ ಅಥವಾ ಕೃಷಿ ಸಂಪರ್ಕಕ್ಕೆ ಕೇಂದ್ರಕ್ಕೆ ಭೇಟಿ ನೀಡಿ ಈ ಐಡಿ ಮಾಡಿಸಿಕೊಳ್ಳಬೇಕಿದೆ. ಈಗಾಗಲೇ ಐಡಿ ಹೊಂದಿದವರು ಸಹ ಅದನ್ನು ನವೀಕರಿಸುವಂತೆ ಸೂಚಿಸಲಾಗಿದ್ದು, ಈ ಕೆಲಸ ಮಾಡಲು ಆಧಾರ್ ಕಾರ್ಡ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂ ಇದ್ದರೆ ಸಾಕು. ಈ ಕೆವೈಸಿ ಮಾಡಿಸದಿದ್ದರೆ ಪಿಎಂ ಕಿಸಾನ್ ಸೇರಿದಂತೆ ವಿವಿಧ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಅರಿತು ಯಲ್ಲಾಪುರದ ನಂದೂಳ್ಳಿ ಗ್ರಾಮ ಒನ್ ಕೇಂದ್ರದವರು ಫೋನ್ ಮೂಲಕ ಪ್ರೂಟ್ಸ್ ಐಡಿ ಮಾಡಿಕೊಡುವುದಾಗಿ ಘೋಷಿಸಿದ್ದಾರೆ. 9480362267 ಸಂಖ್ಯೆಗೆ ಆಧಾರ್
- [ಶಿರಸಿ-ಹಾವೇರಿ ರಸ್ತೆ: ಬೈಕ್ ಸವಾರರಿಗೆ ನಿತ್ಯ ನರಕ!](https://mobiletime.in/2026/02/sirsi-haveri-road-a-constant-hell-for-bikers/): ಶಿರಸಿ-ಹಾವೇರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದನಗನಹಳ್ಳಿ ಸಮೀಪ ರಸ್ತೆ ಅಡ್ಡವಾಗಿ ತೆಗೆದಿರುವ ಕಾಲುವೆಗೆ ಬೈಕ್ ಸವಾರೊಬ್ಬರು ಬಿದ್ದಿದ್ದಾರೆ. ಬೈಕು ಕಾಲುವೆಗೆ ಬಿದ್ದಿದ್ದರಿಂದ ಬೋರನಗುಡ್ಡ ಗ್ರಾಮದ ವ್ಯಕ್ತಿಯೊಬ್ಬರಿಗೆ ಪೆಟ್ಟಾಗಿದೆ. ಬೈಕು ಕಾಲುವೆಯಲ್ಲಿ ಸಿಲುಕಿ ಬಿದ್ದಿದೆ. ರಸ್ತೆ ದುರಸ್ಥಿ ಕಾರ್ಯಕ್ಕೆ ಅನುಗುಣವಾಗಿ ಮುನ್ನಚ್ಚರಿಕೆವಹಿಸದ ಕಾರಣ ಇಲ್ಲಿ ಬೈಕ್ ಸವಾರರು ನಿತ್ಯ ಅಪಾಯ ಎದುರಿಸುತ್ತಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸೂಚನಾ ಫಲಕ, ಬ್ಯಾರಿಕೇಡ್ ಇಲ್ಲದ ಬಗ್ಗೆ ಜನ ಆಕ್ರೋಶಹೊರಹಾಕಿದ್ದಾರೆ. ಈ ರಸ್ತೆ ಮಾರ್ಗವಾಗಿ ದೂಳಿನ ಪ್ರಮಾಣ ಹೆಚ್ಚಾಗಿದ್ದು, ನಿಯಮಿತವಾಗಿ ನೀರು ಸಿಂಪಡಿಸುವ ಕ್ರಮ ಆಗಿಲ್ಲ. ಬಸ್ ಪ್ರಯಾಣಿಕರು ಸಹ ಧೂಳಿನ ತೊಂದರೆಯಿAದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಾರ್ಗದಲ್ಲಿ ಸೂಚನಾ ಫಲಕಗಳ ಕೊರತೆಯಿಂದಾಗಿ ಪ್ರತಿನಿತ್ಯ ಒಂದಿಲ್ಲೊAದು ಅಪಘಾತ ನಡೆಯುತ್ತಿದೆ. ಫೆಬ್ರವರಿ 24ರಿಂದ ಶಿರಸಿ ಜಾತ್ರೆ ಆರಂಭವಾಗಲಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ
- [ಕರ್ನಾಟಕ ಒನ್ ಸೆಂಟರ್ ತೆರೆಯಲು ಬಯಸುವಿರಾ?](https://mobiletime.in/2026/02/want-to-open-a-gram-one-centre/): ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಕರ್ನಾಟಕ ಒನ್ ಕೇಂದ್ರ ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಭಟ್ಕಳ ಪುರಸಭೆ, ದಾಂಡೇಲಿ ನಗರಸಭೆ, ಹಳಿಯಾಳ ಪುರಸಭೆ, ಕಾರವಾರ ನಗರಸಭೆ, ಮಂಕಿ ಪಟ್ಟಣ ಪಂಚಾಯತ, ಶಿರಸಿ ನಗರಸಭೆ ಸೇರಿ 6 ಕಡೆ ಹೊಸದಾಗಿ 10 ಕರ್ನಾಟಕ ಒನ್ ಕೇಂದ್ರ ಅನುಷ್ಠಾನಕ್ಕೆ ಸರ್ಕಾರ ಆಸಕ್ತಿವಹಿಸಿದೆ. ಇಲ್ಲಿನ ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ  ಆರಂಭಿಸಲು ಯೋಗ್ಯ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಇದಕ್ಕಾಗಿ ಅರ್ಹ ಪ್ರಾಂಚೈoಸಿಗಳಿoದ ಅರ್ಜಿ ಆಹ್ವಾನಿಸಲಾಗಿದೆ. ಆಧಾರ್ ಕಾರ್ಡ, ರೇಶನ್ ಕಾರ್ಡ, ಪಹಣಿ ಪತ್ರಿಕೆ ವಿತರಣೆ, ವಿವಿಧ ಬಿಲ್ ಪಾವತಿ ಸೇರಿ ಸರ್ಕಾರಿ ಸಹಭಾಗಿತ್ವದಲ್ಲಿ ಸಾರ್ವಜನಿಕ ಸೇವೆ ಮಾಡಲು ಕೇಂದ್ರ ಸಹಕಾರಿಯಾಗಿದೆ. ನಿರುದ್ಯೋಗಿಗಳಿಗೆ ಈ ಕೇಂದ್ರ ಆದಾಯವನ್ನು ತಂದುಕೊಡಲಿದ್ದು, ಆಸಕ್ತರು ಮಾರ್ಚ 2ರ ಒಳಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ತಹಶೀಲ್ದಾರ್ ಕಚೇರಿ ಮೂಲಕವೂ ಹೆಚ್ಚಿನ ಮಾಹಿತಿ ಲಭ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಹೇಳಿದ್ದಾರೆ. ಇನ್ನಷ್ಟು ವಿವರಗಳಿಗೆ
- [ವಿದ್ಯಾರ್ಥಿಗಳಿಬ್ಬರಿಗೆ ಜೈಲು!](https://mobiletime.in/2026/02/two-students-go-to-jail/): ಮುರುಡೇಶ್ವರ ಕಡಲತೀರದಲ್ಲಿ ಅಮಲಿನಲ್ಲಿ ಅಲೆದಾಡುತ್ತಿದ್ದ ಬೆಂಗಳೂರಿನ ವಿದ್ಯಾರ್ಥಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ ನಿವಾಸಿ ಸತೀಶ ಸೆಲ್ವರಾಜ್ (21) ಹಾಗೂ ಬೆಂಗಳೂರು ದಕ್ಷಿಣದ ಬೊಮ್ಮನಹಳ್ಳಿ ನಿವಾಸಿ ಮೋನಿಶ್ ಬಾಬು ಭಾಸ್ಕರರೆಡ್ಡಿ (18) ಅವರು ಫೆಬ್ರವರಿ 20ರಂದು ಮುರುಡೇಶ್ವರಕ್ಕೆ ಆಗಮಿಸಿದ್ದರು. ಮೋಜು ಮಸ್ತಿಯಲ್ಲಿ ತೊಡಗಿದ ಅವರು ಗಾಂಜಾ ಸೇವಿಸಿದ್ದರು. ಸಂಜೆ 6.30ರ ವೇಳೆಗೆ ಕಡಲತೀರದ ಬಳಿ ಅಲೆದಾಟ ಶುರು ಮಾಡಿದ್ದರು. ಪಿಸೈ ಹನುಮಂತ ಬೀರಾದರ್ ಅವರು ಆ ವಿದ್ಯಾರ್ಥಿಗಳಿಬ್ಬರನ್ನು ತಡೆದು ಪ್ರಶ್ನಿಸಿದರು. ಅವರಿಬ್ಬರು ಮಾತನಾಡಲು ತಡವರಿಸಿದಾಗ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಆಗ, ವಿದ್ಯಾರ್ಥಿಗಳಿಬ್ಬರು ಅಡ್ಡದಾರಿ ಹಿಡಿದಿದ್ದು ಅರಿವಿಗೆ ಬಂದಿತು. ನಿಷೇಧಿತ ಗಾಂಜಾ ಬಳಕೆ ಮಾಡಿದ ಕಾರಣ ಪೊಲೀಸರು ಅವರಿಬ್ಬರನ್ನು ಬಂಧಿಸಿದರು. ಪ್ರಕರಣವನ್ನು ದಾಖಲಿಸಿದರು.
- [ಬೇಕು ಅಂತ ಬಂದಿದ್ದಲ್ಲ.. ದಾರಿ ತಪ್ಪಿ ಬಂದಿದ್ದು!](https://mobiletime.in/2026/02/i-didnt-come-here-because-i-wanted-to-i-came-here-by-mistake/): ಕಾoಡ್ಲಾ ಕಾಡಿನ ನಡುವೆ ಸಿಕ್ಕಿಬಿದ್ದು ಅಸ್ವಸ್ಥಗೊಂಡಿದ್ದ 130 ಕೆಜಿ ತೂಕದ ಕಡಲ ಆಮೆಯನ್ನು ಕಾರವಾರ ಅರಣ್ಯ ಅಧಿಕಾರಿಗಳು ರಕ್ಷಿಸಿದ್ದು, ಆ ಆಮೆಯನ್ನು ಆರೈಕೆ ಮಾಡಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಕಾಳಿ ನದಿ ಸಮುದ್ರ ಸೇರುವ ಸಂಗಮ ಪ್ರದೇಶದ ಮೂಲಕ ಆಳ ಸಮುದ್ರದ ಆಮೆ ನದಿಯ ಕಡೆ ಬಂದಿತ್ತು. ನಂತರ ಮರಳಿ ಸಮುದ್ರಕ್ಕೆ ಸಂಚರಿಸಲಾಗದೇ ಕಾಂಡ್ಲಾ ಗಿಡಗಳ ಬೇರಿನ ಅಡಿ ಸಿಕ್ಕಿ ಬಿದ್ದಿತ್ತು. ಅಂದಾಜು 60 ವರ್ಷ ವಯಸ್ಸಿನ ಈ ಆಮೆ ಬರಬ್ಬರಿ 130 ಕೆಜಿ ತೂಕವಿದ್ದು, ಭಾರೀ ಗಾತ್ರದ ಆಮೆಯನ್ನು ನೋಡಲು ಅನೇಕರು ಮುಗಿ ಬಿದ್ದಿದ್ದರು. ಅಪರೂಪದಲ್ಲಿಯೇ ಅಪರೂಪಕ್ಕೆ ಸಿಕ್ಕಿರುವ ಕಡಲ ಆಮೆ ಹಸಿರು ಬಣ್ಣದಿಂದ ಕೂಡಿದ್ದು, ಸಂತೋಷಿಮಾತಾ ದೇಗುಲದ ಅಂಚಿನ ಪ್ರದೇಶವನ್ನು ಸುತ್ತು ಹೊಡೆದಿತ್ತು. ಅದಾದ ನಂತರ ಮುಂದೆ ಚಲಿಸಲಾಗದೇ ಸುಸ್ತಾಗಿತ್ತು. ಪರಿಸರ ಆಸಕ್ತರು ಆ ಆಮೆಯನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಆಮೆ ಅಸ್ವಸ್ಥವಾಗಿರುವ ಬಗ್ಗೆ ಅರಿತ ಅರಣ್ಯ ಇಲಾಖೆಯವರು ಅದನ್ನು ಮಣ್ಣಿನ ರಾಡಿಯಿಂದ ಹೊರಗೆಳೆದು ಸ್ವಚ್ಛ ಮಾಡಿದರು. ಗೋವಾದಿಂದ ನುರಿತ
- [ಎಳೆಯ ವಯಸ್ಸಿಗೆ ಅಂತ್ಯವಾದ ಫೋಟೋಗ್ರಾಫರ್ ಜೀವನ!](https://mobiletime.in/2026/02/a-photographers-life-ended-at-a-young-age/): ಫೆಬ್ರವರಿ 14ಂದು ಕಾರವಾರದ ಅಮದಳ್ಳಿ ಬಳಿ ನಡೆದಿದ್ದ ಅಪಘಾತದಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಫೋಟೋಗ್ರಾಫರ್ ಸಚಿನ್ ತಳೇಕರ ಅವರು ಶುಕ್ರವಾರ ಸಾವನಪ್ಪಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಆರು ದಿನಗಳ ಕಾಲ ನಿರಂತರ ಚಿಕಿತ್ಸೆ ನಡೆದರೂ ಅದು ಪ್ರಯೋಜನಕ್ಕೆ ಬಂದಿಲ್ಲ. ಅoಕೋಲಾ ತಾಲೂಕಿನ ಅವರ್ಸಾ ಮೂಲದ ಸಚಿನ್ ತಳ್ಳೆಕರ್ ಅವರು ಕಳೆದ 23 ವರ್ಷಗಳಿಂದ ಜೋಯಿಡಾದಲ್ಲಿ ನೆಲೆಸಿದ್ದರು. ಅಲ್ಲಿಯೇ ಅವರು ಫೋಟೋಗ್ರಾಫರ್ ಆಗಿ ಪ್ರಸಿದ್ಧಿಪಡೆದಿದ್ದರು. ತಮ್ಮ ಸರಳತೆ, ವಿನಯತೆ ಮತ್ತು ಸ್ನೇಹಮಯಿ ಸ್ವಭಾವದಿಂದ ಊರಿನವರ ಮೆಚ್ಚುಗೆಗಳಿಸಿದ್ದರು. ತಮ್ಮ ಕಲಾತ್ಮಕ ಪ್ರತಿಭೆಯಿಂದ ಅನೇಕ ಕುಟುಂಬಗಳ ಶುಭ ಸಮಾರಂಭಗಳ ಸಂತಸದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಶಾಶ್ವತವಾಗಿ ಸೆರೆಹಿಡಿದಿದ್ದರು. ತಮ್ಮ ವೃತ್ತಿಪರತೆ ಹಾಗೂ ಪ್ರೀತಿಯ ಬಂಧದಿAದ ಅವರು ಎಲ್ಲರ ಹೃದಯ ಗೆದ್ದಿದ್ದರು. ಫೆ 14ರಂದು ಅಮದಳ್ಳಿ ಹೆದ್ದಾರಿಯಲ್ಲಿ ನಡೆದಿದ್ದ ಬೈಕ್-ಸ್ಕೂಟಿ ನಡುವಿನ ರಸ್ತೆ ಅಪಘಾತದಲ್ಲಿ ಸಚಿನ್ ತಳ್ಳೇಕರ್ ಅವರು ಗಂಭೀರ ಗಾಯಗೊಂಡಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಸಹ ತಲೆಗೆ ಗಂಭೀರ ಗಾಯಗಳಾಗಿದ್ದ
- [ದುಡಿಯುವ ವರ್ಗಕ್ಕೆ ಧ್ವನಿಯಾದ ಕೆಂಪು ಪುಸ್ತಕ](https://mobiletime.in/2026/02/the-red-book-a-voice-for-the-working-class/): ದುಡಿಯುವ ವರ್ಗದ ಜನರಿಗೆ ಹೊಸ ದಿಕ್ಕು ತೋರಿಸಿದ ಕಾರ್ಲ್ ಮಾರ್ಕ್ಸ್ ಮತ್ತು ಫೆಡರಿಕ್ ಎಂಗೆಲ್ಸ್ ರಚಿಸಿದ `ಕಮ್ಯುನಿಸ್ಟ್ ಪ್ರಣಾಳಿಕೆ’ ಬಿಡುಗಡೆಯಾದ ದಿನದ ಅಂಗವಾಗಿ ವಿಶ್ವದ ಹಲವು ಕಡೆ ಕೆಂಪು ಪುಸ್ತಕ ದಿನದ ಆಚರಣೆ ನಡೆದಿದೆ. ಅಂಕೋಲಾದಲ್ಲಿಯೂ ಈ ದಿನ `ಯು ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಎಂಬ ಪುಸ್ತಕದ ಬಿಡುಗಡೆ ನಡೆದಿದೆ. ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನ ಗಾಂಧಿ ಪ್ರತಿಮೆ ಎದುರು ಸಮಾನ ಮನಸ್ಕರು ಸೇರಿ ದುಡಿಯುವ ವರ್ಗದ ಶ್ರಮವನ್ನು ಸ್ಮರಿಸಿದರು. `1848 ಫೆಬ್ರವರಿ 21ರಂದು ಕಾರ್ಲ್ ಮಾರ್ಕ್ಸ್ ಮತ್ತು ಫೆಡರಿಕ್ ಎಂಗೆಲ್ಸ್ ರಚಿಸಿದ ಕಮ್ಯುನಿಸ್ಟ್ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಆ ಪ್ರಣಾಳಿಕೆ ಜಗತ್ತಿನ ದುಡಿಯುವ ವರ್ಗಕ್ಕೆ ಹೊಸ ದಿಕ್ಕು ತೋರಿಸಿದೆ’ ಎಂದು ಅವರೆಲ್ಲರೂ ಅಭಿಪ್ರಾಯವ್ಯಕ್ತಪಡಿಸಿದರು. `ಸಾಮ್ರಾಜ್ಯಶಾಹಿ ಅಮೆರಿಕ ವೆನೆಜುವೆಲಾ ಅಧ್ಯಕ್ಷರ ಮತ್ತು ಅವರ ಪತ್ನಿಯ ಅಪಹರಣ ಮಾಡಿರುವುದು, ಇರಾನ ಮೇಲೆ ದಾಳಿ, ಸಿರಿಯಾ, ಲೆಬನಾನ್, ಯೆಮನ್ ಮೇಲೆ ದಾಳಿ, ಇಸ್ರೇಲ್ ನಿಂದ ಪ್ಯಾಲಿಸ್ಟೈನ್ ಮೇಲೆ ದಾಳಿ 70 ಸಾವಿರ ಜನರ
- [ಮುರುಡೇಶ್ವರದಲ್ಲಿ ಮೈ ಮಾರಾಟ ದಂಧೆ: ಮಹಿಳೆಯರಿಬ್ಬರ ರಕ್ಷಣೆ!](https://mobiletime.in/2026/02/body-selling-racket-in-murudeshwar-two-women-rescued/): ಮುರುಡೇಶ್ವರದಲ್ಲಿ ಮಹಿಳೆಯರ ಮೈ ಮಾರಾಟ ದಂಧೆಯಲ್ಲಿ ತೊಡಗಿದ್ದ ಸುರೇಶ ನಾಯ್ಕ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ರಾತ್ರಿ ವೇಳೆ ಇಲ್ಲಿನ ಭಾರತ್ ಗೆಸ್ಟ್ ಹೌಸ್’ನಲ್ಲಿ ನಡೆಯುತ್ತಿದ್ದ ಕಳ್ಳಾಟವನ್ನು ಪೊಲೀಸರು ಬೆಳಕಿಗೆ ತಂದಿದ್ದಾರೆ. ಭಟ್ಕಳದ ಕಾಯ್ಕಿಣಿ ಹೆರಾಡಿಯ ಸುರೇಶ ನಾಗಪ್ಪ ನಾಯ್ಕ ಅವರು ಮುರುಡೇಶ್ವರಕ್ಕೆ ಹೋಗುವ ಶೆಟ್ಟರಕೇರಿಯ ಭಾರತ್ ಗೆಸ್ಟ್ ಹೌಸ್’ನಲ್ಲಿ ರೂಂ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅದರ ಜೊತೆ ಶಿವಮೊಗ್ಗದ ಮಹಿಳೆಯರಿಬ್ಬರನ್ನು ಅವರು ಕಳ್ಳ ಸಾಗಾಣಿಕೆ ಮೂಲಕ ಮುರುಡೇಶ್ವರಕ್ಕೆ ಕರೆ ತಂದಿದ್ದರು. ತಾವು ಕೆಲಸ ಮಾಡುವ ಭಾರತ್ ಗೆಸ್ಟ್ ಹೌಸ್’ನ ರೂಂ ನಂ 3ರಲ್ಲಿ ಮಹಿಳೆಯರಿಬ್ಬರನ್ನು ಕೂಡಿ ಹಾಕಿದ್ದರು. ಆ ಮಹಿಳೆಯರಿಬ್ಬರಿಗೂ ಹಣದ ಆಮೀಷ ಒಡ್ಡಿ ಅವರನ್ನು ವೇಶ್ಯಾವಾಟಿಕೆ ದಂಧೆಗಿಳಿಸಿದ್ದರು. ಆ ಮಹಿಳೆಯರಿಬ್ಬರ ಆರ್ಥಿಕ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಸುರೇಶ ನಾಯ್ಕ ಅವರು ದುಡ್ಡು ಮಾಡುತ್ತಿದ್ದರು. ಮಹಿಳೆರಿಗೆ ಹೆದರಿಸಿ-ಬೆದರಿಸಿ ಅವರನ್ನು ಬೇರೆ ಬೇರೆ ಪುರುಷರ ಜೊತೆ ಕಳುಹಿಸುತ್ತಿದ್ದರು. ಮುರುಡೇಶ್ವರ ಸಿಪಿಐ ಜಗದೀಶ ಹಂಚಿನಾಳ ಅವರಿಗೆ ಈ ವಿಷಯ ಅರಿವಿಗೆ ಬಂದಿತು.
- [ಅಡಿಕೆ ಬೆಳೆಗಾರರಿಗೆ ಅಪಾರ ನಷ್ಟ!](https://mobiletime.in/2026/02/huge-loss-for-areca-nut-growers/): ಶಿರಸಿ-ಸಿದ್ದಾಪುರ ಭಾಗದ ಅಡಿಕೆ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದು, ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸಿ ಆ ಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಮುಖರು ಶಾಸಕ ಭೀಮಣ್ಣ ನಾಯ್ಕ ಅವರ ಭೇಟಿ ಮಾಡಿದ್ದಾರೆ. ಅಡಿಕೆಗೆ ಆವರಿಸಿದ ಭೀಕರ ರೋಗಬಾಧೆ, ಇಳುವರಿ ಕುಸಿತದ ಜೊತೆ ಕಾಡು ಪ್ರಾಣಿಗಳ ಹಾವಳಿಯಿಂದ ಆಗುವ ಸಮಸ್ಯೆಗಳ ಬಗ್ಗೆಯೂ ರೈತ ಮುಖಂಡರು ಮಾತನಾಡಿದ್ದಾರೆ. `ಸಿದ್ದಾಪುರ ತಾಲೂಕಿನಲ್ಲಿ ಶೇ 80ಕ್ಕೂ ಅಧಿಕ ಕುಟುಂಬಗಳು ಅಡಿಕೆ ಬೆಳೆ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಎರಡು ವರ್ಷಗಳಿಂದ ಅಡಿಕೆ ಮರಗಳಿಗೆ ಎಲೆಚುಕ್ಕಿ ರೋಗ ಮಾರಕವಾಗಿ ಪರಿಣಮಿಸಿದ್ದು, ಅದರೊಂದಿಗೆ ಇನ್ನಿತರ ರೋಗಗಳ ಹಾವಳಿಯಿಂದಾಗಿ ಸಾವಿರಾರು ಎಕರೆ ತೋಟಗಳು ನಾಶವಾಗುವ ಹಂತಕ್ಕೆ ತಲುಪಿವೆ. ಕಳೆದ ವರ್ಷ ಇಳುವರಿಯಲ್ಲಿ ಶೇ 50 ರಷ್ಟು ಕುಸಿತ ಕಂಡಿದ್ದು, ಈ ಬಾರಿ ಶೇ 30 ಕ್ಕೆ ಸೀಮಿತವಾಗುವ ಭೀತಿ ಎದುರಾಗಿದೆ’ ಎಂದು ಆ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ. `ಅತಿಯಾದ ಮಳೆಯಿಂದ ಉಂಟಾದ ಕೊಳೆ ರೋಗ ಹಾಗೂ ಕಾಡು ಪ್ರಾಣಿಗಳ
- [PUC ಪರೀಕ್ಷೆ: ಕಟ್ಟೆಚ್ಚರವಹಿಸಲು ಡೀಸಿ ಸೂಚನೆ](https://mobiletime.in/2026/02/sslc-exam-dc-issues-warning-to-be-careful/): ಪಿಯುಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪರೀಕ್ಷೆ ಕರ್ತವ್ಯಕ್ಕೆ ನಿಯೋಜಸಿರುವ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯಾ ಸೂಚಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪರೀಕ್ಷೆ ಕುರಿತ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. `ದ್ವಿತೀಯ ಪಿಯು ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ಜಿಲ್ಲೆಯ 35 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಬಾರಿಯ ಜಿಲ್ಲೆಯಲ್ಲಿ 5939 ಬಾಲಕರು ಮತ್ತು 8545 ಬಾಲಕಿಯರು ಸೇರಿದಂತೆ ಒಟ್ಟು 14484 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ’ ಎಂದರು. `ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು ಸಂಪೂರ್ಣ ಜವಾಬ್ದಾರಿ ಹೊಂದಿದ್ದು ನಿಯಮಗಳಲ್ಲಿ ಸೂಚಿಸಿರುವಂತೆ ಯಾವುದೇ ಲೋಪವಾಗದಂತೆ ಪರೀಕ್ಷೆಗಳನ್ನು ನಡೆಸಬೇಕು. ಜಿಲ್ಲೆಯಲ್ಲಿನ ಸೂಕ್ಷ್ಮ ಪರೀಕ್ಷೆ ಕೇಂದ್ರಗಳಲ್ಲಿ ಕಟ್ಟೆಚ್ಚರವಹಿಸಬೇಕು. ಪರೀಕ್ಷಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದರು. `ವಾಟ್ಸಆಪ್, ಇನ್‌ಸ್ಟಾಗ್ರಾಮ್ ಅಥವಾ ಇತರೇ ಸಾಮಾಜಿಕ ಜಾಲತಾಣಗಳಲ್ಲಿ
- [ಬೆತ್ತಲೆ ದೇಹಕ್ಕೆ ರುಂಡವೇ ಇರಲಿಲ್ಲ!](https://mobiletime.in/2026/02/there-was-no-room-for-a-naked-body/): ಮುಂಡಗೋಡಿನ ಕಾಡಿನಲ್ಲಿ ಮಹಿಳೆಯೊಬ್ಬರ ಮೃತದೇಹ ಕಾಣಿಸಿದೆ. ಬೆತ್ತಲೆಯಾಗಿ ಬಿದ್ದಿರುವ ದೇಹಕ್ಕೆ ರುಂಡವೇ ಇಲ್ಲದಿರುವುದನ್ನು ನೋಡಿ ಜನ ಹೌಹಾರಿದ್ದಾರೆ. ಮುಂಡಗೋಡದ ಮಳಗಿ ಬಳಿಯ ಕಾಡಿನಲ್ಲಿ ಶುಕ್ರವಾರ ಸಂಜೆ ದೇಹ ಪತ್ತೆಯಾಗಿದೆ. ಮಹಿಳೆಯನ್ನು ಕೊಲೆ ಮಾಡಿ ಕೊಳಗಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎಸೆದ ಅನುಮಾನವ್ಯಕ್ತವಾಗಿದೆ. ಅಂದಾಜು 35 ವರ್ಷದ ಮಹಿಳೆ ಸಾವನಪ್ಪಿದ್ದು, ಗುರುತು ಪತ್ತೆಯಾಗಿಲ್ಲ. ಎರಡು ದಿನದ ಹಿಂದೆಯೇ ಮಹಿಳೆ ಹತ್ಯೆಯಾಗಿರುವ ಶಂಕೆಯಿದೆ. ಶವ ಕೊಳೆಯುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಆ ಶವ ಯಾರದ್ದು? ಅರಣ್ಯ ಪ್ರದೇಶಕ್ಕೆ ಹೇಗೆ ಬಂದಿತು? ಈ ಸಂಚಿನ ಹಿಂದಿರುವವರು ಯಾರು? ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸಂಜೆ ವೇಳೆ ಶವ ಕಾಣಿಸಿದ್ದರಿಂದ ಸ್ಥಳದಲ್ಲಿ ಕತ್ತಲು ಆವರಿಸಿದ್ದು, ಸದ್ಯದ ಮಟ್ಟಿಗೆ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾಗಿದೆ. ಬೆಳಕಿನ ವ್ಯವಸ್ಥೆ ಮಾಡಿದ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ಶುರು ಮಾಡಿದ್ದಾರೆ.
- [ಮನೆ ಬಿಟ್ಟು ಹೋದ ಕುಲ ದೇವತೆ!](https://mobiletime.in/2026/02/the-clan-goddess-who-left-home/): ದೇವರ ಜೊತೆ ನೇರ ಸಂಪರ್ಕದಲ್ಲಿರುವುದಾಗಿ ಹೇಳಿಕೊಳ್ಳುತ್ತಿದ್ದ ಹಳಿಯಾಳದ ಮಹಿಳೆಯೊಬ್ಬರು ನಿಗೂಢವಾಗಿ ಕಾಣೆಯಾಗಿದ್ದಾರೆ. `ಪತ್ನಿಯನ್ನು ಹುಡುಕಿಕೊಡಿ’ ಎಂದು ಅವರ ಪತಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ! ಹಳಿಯಾಳದ ಮಂಗಲವಾಡದಲ್ಲಿ ಹರಿದಾಸ ಗುಂಡಪ್ಕರ್ ಅವರು ವಾಸವಾಗಿದ್ದಾರೆ. ಕೂಲಿ ಕಾರ್ಮಿಕರಾಗಿರುವ ಅವರು ರುಕ್ಮಾ ಗುಂಡಪ್ಕರ್ ಅವರನ್ನು ವರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ರುಕ್ಮಾ ಗುಂಡಪ್ಕರ್ ಅವರ ವರ್ತನೆ ಬದಲಾಗಿದೆ. `ಮೈಮೇಲೆ ದೇವರು ಬರುತ್ತದೆ’ ಎನ್ನುವ ರುಕ್ಮಾ ಗುಂಡಪ್ಕರ್ ಅವರು ಆಗಾಗ ಏಕಾಏಕಿ ಕೂಗಾಟ ಶುರು ಮಾಡುತ್ತಾರೆ. ನಂತರ ಅಸ್ವಸ್ಥರಾಗಿ ಮಲಗಿ ಬಿಡುತ್ತಾರೆ. ದೇವರು ಮೈಮೇಲೆ ಬಂದಾಗ ಕೆಲವೊಮ್ಮೆ ಮನೆ ಬಿಟ್ಟು ಹೋಗುವುದೂ ಇದೆ. ಮನೆ ಬಿಟ್ಟು ಹೋದರೂ ಕೆಲ ಸಮಯದ ನಂತರ ರುಕ್ಮಾ ಗುಂಡಪ್ಕರ್ ಅವರು ಮರಳಿ ಬರುತ್ತಿದ್ದು, ಮೊನ್ನೆ ಮನೆಯಿಂದ ಹೊರ ಹೋದವರು ಮತ್ತೆ ಬಂದಿಲ್ಲ ಫೆಬ್ರವರಿ 18ರ ಬೆಳಗೆ 5 ಗಂಟೆಗೆ ಮನೆಯಿಂದ ಹೊರ ಹೋಗಿರುವ ರುಕ್ಮಾ ಗುಂಡಪ್ಕರ್ ಅವರು ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಸಿಕ್ಕಿಲ್ಲ.
- [ಹೆಂಡದ ಅಂಗಡಿಗೆ ಹಣ ಹೂಡಿಕೆ: ಮೋಸ!](https://mobiletime.in/2026/02/investing-money-in-a-womens-shop-fraud/): ದಾಂಡೇಲಿಯ ಪರಸಪ್ಪ ಮಹಾರಾಜವರ್ ಅವರು ನರೇಶ ಜೋಶಿ ಅವರ ಜೊತೆ ಸೇರಿ ಸರಾಯಿ ಅಂಗಡಿ ತೆರೆಯಲು ನಿರ್ಧರಿಸಿದ್ದು, ಈ ಯೋಜನೆಯ ಪಾಲುದಾರರಾಗಿದ್ದ ಗೋವಾದ ಲಕ್ಷೀನಾರಾಯಣ ದೋಂಡಾ ಅವರು ಹಣಪಡೆದು ಮೋಸ ಮಾಡಿದ್ದಾರೆ! ದಾಂಡೇಲಿಯ ಸಾಯಿನಗರದಲ್ಲಿ ಪರಸಪ್ಪ ತಿಮ್ಮಪ್ಪ ಮಹಾರಾಜವರ್ (67) ಅವರು ವಾಸವಾಗಿದ್ದಾರೆ. ಸರ್ಕಾರಿ ನೌಕರರಾಗಿದ್ದ ಅವರು ನಿವೃತ್ತಿ ನಂತರ ಉದ್ದಿಮೆ ನಡೆಸಲು ನಿರ್ಧರಿಸಿದ್ದು, ಸದ್ಯ ಗೋವಾದಲ್ಲಿರುವ ಓಡಿಸ್ಸಾದ ಲಕ್ಷಿನಾರಾಯಣ ಡೋರಾ (ಆಕಾಶ ಬೀಮಸೇನ ಡೋರಾ) ಅವರು ಪರಿಚಿತರಾದರು. ಲಕ್ಷಿನಾರಾಯಣ ಡೋರಾ ಅವರು ಪರಸಪ್ಪ ಮಹಾರಾಜವರ್ ಅವರ ಮನೆಗೆ ಬಂದು ವ್ಯವಹಾರದ ಮಾತುಕಥೆ ಮಾಡಿದರು. `ಸರಾಯಿ ಅಂಗಡಿ ತೆರೆದರೆ ಭಾರೀ ಪ್ರಮಾಣದ ಲಾಭವಿದೆ. ನಾವು ಬಾರ್ & ರೆಸ್ಟೋರೆಂಟ್ ವ್ಯವಹಾರ ಮಾಡೋಣ’ ಎಂದು ಲಕ್ಷಿನಾರಾಯಣ ಡೋರಾ ಅವರು ಪ್ರಸ್ತಾಪಿಸಿದರು. `3.59 ಲಕ್ಷ ರೂ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 50 ಸಾವಿರ ರೂ ಲಾಭ ಕೊಡುವೆ’ ಎಂಬ ಆಮೀಷ ಒಡ್ಡಿದರು. `ಕುಟುಂಬದವರ ಜೊತೆ ಚರ್ಚಿಸುವೆ’ ಎಂದು ಪರಸಪ್ಪ ಮಹಾರಾಜವರ್ ಅವರು ಹೇಳಿದರು.
- [ವಾಹನ ಸಾಲ: ಫೈನಾನ್ಸ್ ಕಂಪನಿಯಿOದಲೇ ಮೋಸ!](https://mobiletime.in/2026/02/vehicle-loan-the-finance-company-itself-is-a-fraud/): ಶಿರಸಿ ಹೊಸಪೇಟೆಯಲ್ಲಿರುವ ಚೋಳಮಂಡಳo ಇನ್ವೆಸ್ಟಮೆಂಟ್ & ಫೈನಾನ್ಸ ಕಂಪನಿಯವರು ಯಲ್ಲಾಪುರದ ಕಾರ್ತಿಕ್ ಸಿದ್ದಿ ಅವರಿಗೆ ಅನ್ಯಾಯ ಮಾಡಿದ್ದಾರೆ. ಸೆಕೆಂಡ್ ಹ್ಯಾಂಡ್ ಮ್ಯಾಕ್ಸಿ ಟ್ರಕ್ ಖರೀದಿಗೆ ಸಾಲ ಕೊಡುವುದಾಗಿ ನಂಬಿಸಿದ ಫೈನಾನ್ಸಿನವರು ಕಾರ್ತಿಕ್ ಸಿದ್ದಿ ಅವರಿಂದ ಹಕ್ಕು ಬದಲಾವಣೆ, ವಾಹನದ ಕಂತು ಎಂದು ಹಣ ಪಾವತಿಸಿಕೊಂಡಿದ್ದು, ನಂತರ ಆ ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ! ಯಲ್ಲಾಪುರದ ದೆಹಳ್ಳಿಯಲ್ಲಿ ಕಾರ್ತಿಕ ಕೃಷ್ಣ ಸಿದ್ದಿ ಅವರು ವಾಸವಾಗಿದ್ದಾರೆ. ಚಾಲಕರಾಗಿರುವ ಅವರು ಜೀವನ ನಡೆಸಲು ಮ್ಯಾಕ್ಸಿ ಟ್ರಕ್ ಖರೀದಿಗೆ ನಿರ್ಧರಿಸಿದ್ದರು. 2022ರಲ್ಲಿ ಮ್ಯಾಕ್ಸಿ ಟ್ರಕ್ ಹುಟುಕಾಟ ನಡೆಸುತ್ತಿರುವಾಗ ಅವರಿಗೆ ಯಲ್ಲಾಪುರ ರವೀಂದ್ರ ನಗರದ ವ್ಯಾಪಾರಿ ಮನೋಜ ಮಂಜುನಾಥ ನಾಯ್ಕ ಅವರ ಪರಿಚಯವಾಯಿತು. ಅವರ ಬಳಿಯಿದ್ದ ಮಹೇಂದ್ರಾ ಕಂಪನಿಯ ಬುಲೆರೋ ಮ್ಯಾಕ್ಸಿ ಟ್ರಕ್ ಖರೀದಿಗಾಗಿ ಕಾರ್ತಿಕ್ ಸಿದ್ದಿ ಅವರು ಮಾತುಕಥೆ ನಡೆಸಿದರು. ಅದರ ಪ್ರಕಾರ ಆ ವಾಹನಕ್ಕೆ 7.75 ಲಕ್ಷ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡರು. 1.60 ಲಕ್ಷ ರೂ ಹಣ ಪಾವತಿ ಮಾಡಿದ ಕಾರ್ತಿಕ್ ಸಿದ್ದಿ ಅವರು
- [ತುಂಡು ಭೂಮಿಗಾಗಿ ಕಾದಾಟ: ಬೂಟಿನಿಂದ ಹೊಡೆದಾಟ!](https://mobiletime.in/2026/02/fighting-for-a-piece-of-land-fighting-with-boots/): ಎರಡು ಗುಂಟೆ ಭೂಮಿಗಾಗಿ ಯಲ್ಲಾಪುರದ ಜಗದೀಶ ವಾಲೀಕರ್ ಹಾಗೂ ರತ್ನವ್ವ ವಾಲೀಕರ್ ನಡವೆ ವೈಮನಸ್ಸು ಮೂಡಿದ್ದು, ಇದೇ ವಿಷಯವಾಗಿ ಜಗಳ ತೆಗೆದ ರತ್ನವ್ವ ವಾಲೀಕರ್ ಅವರು ಜಗದೀಶ ವಾಲೀಕರ್ ಅವರಿಗೆ ಬೂಟಿನಿಂದ ಹೊಡೆದಿದ್ದಾರೆ. ಯಲ್ಲಾಪುರದ ಹೊಸಳ್ಳಿ ಬಳಿಯ ಹದ್ದಿನಸರದಲ್ಲಿ ಜಗದೀಶ ಹನುಮಂತಪ್ಪ ವಾಲೀಕರ್ (69) ಅವರು ವಾಸವಾಗಿದ್ದಾರೆ. ಕೃಷಿ ಜೊತೆ ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಂಡುಕೊAಡಿದ್ದಾರೆ. ಹೊಸಳ್ಳಿಯಲ್ಲಿ ರತ್ನವ್ವ ನಾಗಪ್ಪ ವಾಲೀಕರ್ (41) ಅವರು ವಾಸವಾಗಿದ್ದು, ಅವರು ಸಹ ಕೂಲಿ ಕಾರ್ಮಿಕರಾಗಿದ್ದಾರೆ. ಜಗದೀಶ ವಾಲೀಕರ್ ಹಾಗೂ ರತ್ನವ್ವ ವಾಲೀಕರ್ ಅವರು ಸಂಬAಧಿಕರಾಗಿದ್ದಾರೆ. ಹೀಗಿರುವಾಗ ಹೊಸಳ್ಳಿ ಗ್ರಾಮದ ಸರ್ವೇ ನಂ 173ರಲ್ಲಿ ಜಗದೀಶ ವಾಲೀಕರ್ ಅವರು 2 ಗುಂಟೆ ಭೂಮಿ ಹೊಂದಿದ್ದಾರೆ. ಆ ಭೂಮಿಯ ಬಗ್ಗೆ ರತ್ನವ್ವ ವಾಲೀಕರ್ ಅವರು ಮೊದಲಿನಿಂದಲೂ ತಂಟೆ-ತಕರಾರು ಮಾಡುತ್ತಿದ್ದಾರೆ. ಫೆಬ್ರವರಿ 18ರಂದು ಸಹ ಜಾಗದ ವಿಷಯವಾಗಿ ಜಗಳ ತೆಗೆದ ರತ್ನವ್ವ ವಾಲೀಕರ್ ಅವರು ಜಗದೀಶ ವಾಲೀಕರ್ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ತಮ್ಮ ಕಾಲಿನಲ್ಲಿದ್ದ
- [ಮಕ್ಕಳ ಜೊತೆಯಿದ್ದ ಮಹಿಳೆ ಕಣ್ಮರೆ](https://mobiletime.in/2026/02/woman-with-children-disappears/): ಮಕ್ಕಳನ್ನು ಶಾಲೆಗೆ ಬಿಡುವುದಕ್ಕಾಗಿ ಮನೆಯಿಂದ ಹೊರಟ ಹೊನ್ನಾವರದ ದಾಕ್ಷಾಯಣಿ ನಾಯ್ಕ ಅವರು ಮನೆಗೆ ಬಂದಿಲ್ಲ. ಹೊನ್ನಾವರದ ಕೆಕ್ಕಾರ್ ಬಸ್ತಿಮಕ್ಕಿಯಲ್ಲಿ ಕುಮಾರ ಗೋಪಾಲ ನಾಯ್ಕ ಹಾಗೂ ದಾಕ್ಷಾಯಣಿ ನಾಯ್ಕ ದಂಪತಿ ವಾಸವಾಗಿದ್ದಾರೆ. ಕುಮಾರ ನಾಯ್ಕ ಅವರು ತಮ್ಮದೇ ಆದ ವ್ಯಾಪಾರ-ವ್ಯವಹಾರ ನೋಡಿಕೊಳ್ಳುತ್ತಿದ್ದು, ದಾಕ್ಷಾಯಣಿ ನಾಯ್ಕ ಅವರು ಮನೆ ಕೆಲಸ ಮಾಡಿಕೊಂಡಿದ್ದರು. ಫೆಬ್ರವರಿ 17ರಂದು ದಾಕ್ಷಾಯಣಿ ನಾಯ್ಕ ಅವರು ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಹೊರಟಿದ್ದರು. ಆ ದಿನ ಬೆಳಗ್ಗೆ 7.45ಕ್ಕೆ ಮಕ್ಕಳನ್ನು ಶಾಲಾ ವಾಹನಕ್ಕೆ ಬಿಡಲು ಹೋದವರು ನಂತರ ಅವರು ಎಲ್ಲಿ ಹೋದರು? ಎಂದೇ ಗೊತ್ತಾಗಲಿಲ್ಲ. ಹೊನ್ನಾವರದ ಮಾರ್ಥೋಮಾ ಶಾಲೆಯ ವಾಹನದಲ್ಲಿ ಮಕ್ಕಳನ್ನು ಹತ್ತಿಸಿದ ನಂತರ ದಾಕ್ಷಾಯಣಿ ನಾಯ್ಕ ಅವರು ಕಾಣೆಯಾಗಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಕುಮಾರ ನಾಯ್ಕ ಅವರು ಎಲ್ಲಾ ಕಡೆ ಪತ್ನಿಗಾಗಿ ಶೋಧ ನಡೆಸಿದರು. ಎಲ್ಲಿಯೂ ಸಿಗದ ಕಾರಣ ಪೊಲೀಸರ ಮೊರೆ ಹೋದರು. ಪೊಲೀಸರು ಸಹ ದಾಕ್ಷಾಯಣಿ ನಾಯ್ಕ ಅವರ ಹುಡುಕಾಟ ಶುರು ಮಾಡಿದ್ದಾರೆ.
- [ಮುಲ್ಲಾನಿಗೆ ಮಕ್ಮಲ್ ಟೋಪಿ!](https://mobiletime.in/2026/02/a-velvet-hat-for-the-mulla/): ಕಾರವಾರ ನಂದನಗದ್ದಾದ ಜೈನಬಾ ಮುಲ್ಲಾ ಅವರು ಆನ್‌ಲೈನ್ ಉದ್ಯೋಗದ ವ್ಯಾಮೋಹಕ್ಕೆ ಸಿಲುಕಿ 12.43 ಲಕ್ಷ ರೂ ಕಳೆದುಕೊಂಡಿದ್ದಾರೆ. ಕಾರವಾರ ನಂದನಗದ್ದಾದ ಸಣ್ಣ ಮಸೀದಿ ಬಳಿಯ ಮುಲ್ಲಾ ಅಲಿ ಹೌಸ್ ಬಳಿ ಜೈನಬಾ ಸುಲ್ತಾನ್ ಮುಲ್ಲಾ (31) ಅವರು ವಾಸವಾಗಿದ್ದಾರೆ. ಜನವರಿ 5ರಂದು ಇನಸ್ಟಾಗ್ರಾಮಿನ ರೀಲ್ಸ ನೋಡುವಾಗ ಅವರಿಗೆ ಅಲ್ಲಿ `ಪಾರ್ಟ ಟೈಂ ಜಾಬ್’ ಬಗ್ಗೆ ಮಾಹಿತಿ ಸಿಕ್ಕಿದೆ. ಆ ಬಗ್ಗೆ ಆಸಕ್ತಿವಹಿಸಿದ ಅವರಿಗೆ ರುಕ್ಸನಾ ಖಾನ್ ಎಂಬ ಮಹಿಳೆ ಪರಿಚಯವಾಗಿದ್ದಾರೆ. ರುಕ್ಸನಾ ಖಾನ್ ಅವರು ಜೈನಬಾ ಮುಲ್ಲಾ ಅವರಿಗೆ ಮರಳು ಮಾಡಿದ್ದು, ವಿಐಪಿ ಎಂಬ ವೆಬ್ ಸೈಟಿನ ಉತ್ಪನ್ನಗಳಿಗೆ ರೇಟಿಂಗ್ ಕೊಡುವ ಉದ್ಯೋಗ ಕೊಟ್ಟಿದ್ದಾರೆ. ಅದಾದ ನಂತರ ತಾವು ಹೇಳಿದ ಕಡೆ ಹೂಡಿಕೆ ಮಾಡಿದರೆ ಲಾಭ ಸಿಗುವ ಆಮೀಷ ಒಡ್ಡಿದ್ದಾರೆ. 700ರೂ ಹೂಡಿಕೆ ಮಾಡಿದ ಜೈನಬಾ ಮುಲ್ಲಾ ಅವರಿಗೆ 920ರೂ ಹಣ ಸಿಕ್ಕಿದೆ. ಇದರಿಂದ ಖುಷಿಯಾದ ಜೈನಬಾ ಮುಲ್ಲಾ ಅವರು ಫೆ 9ರವರೆಗೆ ಹಂತ ಹಂತವಾಗಿ 12.43 ಲಕ್ಷ ರೂ ಹೂಡಿಕೆ
- [ಆನೆ ಗಾತ್ರದ ಆಮೆ!](https://mobiletime.in/2026/02/a-turtle-that-weighs-as-much-as-an-elephant/): ಕಾರವಾರದ ಕೋಡಿಭಾಗದ ಬಳಿ 130 ಕೆಜಿ ತೂಕದ ಆಮೆಯೊಂದು ಕಾಣಿಸಿದೆ. ಅಪರೂಪದಲ್ಲಿಯೇ ಅಪರೂಪಕ್ಕೆ ಸಿಕ್ಕಿರುವ ಆ ಆಮೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಆಳ ಸಮುದ್ರದಲ್ಲಿ ವಾಸಿಸುವ ಈ ಆಮೆ ಹಸಿರು ಬಣ್ಣದಿಂದ ಕೂಡಿದ್ದು, ನದಿ-ಸಮುದ್ರ ಸಂಗಮ ಪ್ರದೇಶದ ಮೂಲಕ ಕೋಡಿಭಾಗದವರೆಗೆ ಬಂದಿದೆ. ನದಿ ನೀರಿನ ಹರಿವು ಕಡಿಮೆ ಆಗಿದ್ದರಿಂದ ಆ ಆಮೆ ಸಂತೋಷಿಮಾತಾ ದೇಗುಲದ ಅಂಚಿನ ಪ್ರದೇಶವನ್ನು ತಲುಪಿದೆ. ಅದಾದ ನಂತರ ಮರಳಿ ಸಮುದ್ರಕ್ಕೆ ಹೋಗಲು ಸಾಧ್ಯವಾಗದೇ ಸಮಸ್ಯೆ ಅನುಭವಿಸಿದೆ. ಕಾಂಡ್ಲಾ ಗಿಡದ ಬುಡದಲ್ಲಿ ನೀರು ಕಡಿಮೆಯಿದ್ದು, ಅಲ್ಲಿ ಆಮೆ ಸಿಲುಕಿರುವುದನ್ನು ನೋಡಿದ ಜನ ಕಡಲಜೀವ ಶಾಸ್ತç ಸ್ನಾತಕೋದರ ಅಧ್ಯಯನ ಕೇಂದ್ರಕ್ಕೆ ಮಾಹಿತಿ ನೀಡಿದರು. ಕೇಂದ್ರದ ತಜ್ಞರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಆಮೆಯನ್ನು ಸ್ವಚ್ಛಗೊಳಿಸಿದರು. ಸದ್ಯ ಆ ಆಮೆ ಅಸ್ವಸ್ಥಗೊಂಡಿದ್ದು, ಅರಣ್ಯ ಇಲಾಖೆಯ ಆರೈಕೆ ನಡೆದಿದೆ. ಆಮೆ ಚೇತರಿಸಿಕೊಂಡ ನಂತರ ಅದನ್ನು ಮತ್ತೆ ಆಳ ಸಮುದ್ರಕ್ಕೆ ಬಿಡಲಾಗುತ್ತದೆ.
- [ಶಿರಸಿ ಜಾತ್ರೆ: ಮಾರಿಕಾಂಬೆ ಹೆಸರಿನಲ್ಲಿ ಮೋಸ!](https://mobiletime.in/2026/02/sirsi-fair-fraud-in-the-name-of-maricombe/): ಎರಡು ವರ್ಷಕ್ಕೆ ಒಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಗೆ ದಿನಗಣನೆ ಶುರುವಾಗಿದೆ. ಫೆ 24ರಿಂದ ಜಾತ್ರೆ ನಡೆಯಲಿದ್ದು, ಕೆಲ ಆನ್‌ಲೈನ್ ವೇದಿಕೆಗಳು ದೇವಿ ಭಕ್ತರನ್ನು ವಂಚಿಸುವ ಕಾಯಕದಲ್ಲಿ ತೊಡಗಿವೆ. `ಯಜಮಾನ’ ಎಂಬ ಜಾಲತಾಣದ ಪುಟ ಹಾಗೂ ಮಾರಿಕಾಂಬಾ ದೇಗುಲಕ್ಕೆ ಯಾವುದೇ ಸಂಬoಧ ಇಲ್ಲ. ಅದಾಗಿಯೂ `ಯಜಮಾನ’ ಪೇಜ್ ಪ್ರಮುಖರು ಮಾರಿಕಾಂಬಾ ದೇವಿ ಹೆಸರಿನಲ್ಲಿ ಪೂಜೆ ಮಾಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದಾರೆ. AI ತಂತ್ರಜ್ಞಾನ ಬಳಸಿ ಅತ್ಯಂತ ಭಾವನಾತ್ಮಕ ಸಂದೇಶ ಸಾರುವ ವಿಡಿಯೋ ರಚಿಸಿ ಜಾಲತಾಣದಲ್ಲಿ ಅದನ್ನು ಹರಿಬಿಟ್ಟಿದ್ದಾರೆ. ಜಾತ್ರೆಗೆ ಬರಲು ಸಾಧ್ಯವಾಗದ ಭಕ್ತರನ್ನು ಗುರಿಯಾಗಿರಿಸಿಕೊಂಡು ಅವರಿಂದ ಹಣ ವಸೂಲಿ ಮಾಡುವ ಪ್ರಯತ್ನ ಮುಂದುವರೆಸಿದ್ದಾರೆ. `ಮನೆಯಲ್ಲಿ ಕುಳಿತು ವಿಶೇಷ ಸೀರೆ ಸೇವೆ’ ಎಂಬ ನಿಟ್ಟಿನಲ್ಲಿ ಪ್ರಚಾರ ಮಾಡುತ್ತಿದ್ದು, ಅನೇಕರು ಆ ಯಜಮಾನನ ಮೋಸದ ಬಲೆಗೆ ಬಿದ್ದಿದ್ದಾರೆ. ಈ ಆನ್‌ಲೈನ್ ವಂಚಕರು ಮಾರಿಕಾಂಬಾ ದೇವಿಗೆ ಸೀರೆ ಉಡಿ ಸಲ್ಲಿಸಲು 351ರೂ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆ ಹಣ ಪಾವತಿಸಿದ ನಂತರ ಪ್ರಸಾದ
- [ನೀರಿಗಾಗಿ ನಾರಿಯ ಹೋರಾಟ: ಈ ವಿಷಯದಲ್ಲಿ ಪಿಡಿಓ ತಪ್ಪಿಲ್ಲ!](https://mobiletime.in/2026/02/womens-struggle-for-water-pdo-is-not-wrong-in-this-matter/): ಕುಮಟಾ ಹೊಲನಗದ್ದೆಯ ಅನಿತಾ ಡಿಸೋಜಾ ಅವರ ಅರ್ಜಿ ಪ್ರಕಾರ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸಲಾಗಿದೆ’ ಎಂದು ಹೊಲನಗದ್ದೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಡಿ ಪ್ರಜ್ಞಾ ಅವರು ದಾಖಲೆಗಳನ್ನು ಒದಗಿಸಿದ್ದಾರೆ. `ಮಾಜಿ ಅಧ್ಯಕ್ಷೆಯ ಪೋನ್ ನಂ ಬ್ಲಾಕ್ ಮಾಡಿದ ಪಿಡಿಓ: ದೂರು’ ಎಂಬ ತಲೆಬರಹದ ಅಡಿ ಮೊಬೈಲ್ ಮಿಡಿಯಾ ನೆಟ್‌ವರ್ಕ ಗುರುವಾರ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಷ್ಠನೆ ನೀಡಿದ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಡಿ ಪ್ರಜ್ಞಾ ಅವರು ತಮ್ಮ ವಿರುದ್ಧ ಕೇಳಿ ಬಂದ ಆರೋಪವನ್ನು ಅಲ್ಲಗಳೆದಿದ್ದಾರೆ. `ಅನಿತಾ ಡಿಸೋಜಾ ಅವರ ಪೋನ್ ನಂ ಬ್ಲಾಕ್ ಮಾಡಿಲ್ಲ. ಅವರು ಪೋನ್ ಮಾಡಿದಾಗ ನೆಟ್ ವರ್ಕ ಸಮಸ್ಯೆಯಿಂದ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ’ ಎಂದು ಕುಮಟಾ ಹೊಲನಗದ್ದೆ ಗ್ರಾ ಪಂ ಪಿಡಿಓ ಪ್ರಜ್ಞಾ ನಾಯ್ಕ ಅವರು ಹೇಳಿದ್ದಾರೆ. `ಅನಿತಾ ಡಿಸೋಜಾ ಅವರ ಅರ್ಜಿ ಪರಿಶೀಲಿಸಲಾಗಿದೆ. ಗ್ರಾಮ ಪಂಚಾಯತ ಅಧಿಕಾರಿಗಳು ಸ್ಥಳ ಭೇಟಿ ಮಾಡಿದ್ದಾರೆ. ಜಲ ಜೀವನ ಯೋಜನೆ ಅಡಿ ಕುಡಿಯುವ ನೀರು
- [ಅಪಘಾತ: ಇಬ್ಬರ ಸ್ಥಿತಿಯೂ ಗಂಭೀರ](https://mobiletime.in/2026/02/accident-one-persons-death-anothers-pain/): ಕಾರವಾರದ ಮಾಜಾಳಿ ಬಳಿಯಿರುವ ವಿಠಲ ರುಕುಮಾಯಿ ದೇವಸ್ಥಾನದ ಸಮೀಪ ಗುರುವಾರ ರಾತ್ರಿ ಬೈಕ್ ಅಪಘಾತಕ್ಕೀಡಾಗಿದ್ದು, ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಈ ಮೊದಲು ವ್ಯಕ್ತಿಯೊಬ್ಬರು ಸಾವನಪ್ಪಿದ ಬಗ್ಗೆ ಮಾಹಿತಿ ಬಂದಿದ್ದು, ನಂತರ ಅವರು ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗೋವಾಗೆ ಕಳುಹಿಸಲಾಗಿದೆ. ಬೈಕಿನಲ್ಲಿ ಯುವಕರಿಬ್ಬರು ತೆರಳುತ್ತಿದ್ದಾಗ ಬೈಕಿನ ನಿಯಂತ್ರಣ ತಪ್ಪಿದ ಬಗ್ಗೆ ಅಂದಾಜಿಸಲಾಗಿದೆ. ರಸ್ತೆ ಪಕ್ಕ ಯುವಕರಿಬ್ಬರು ರಕ್ತದ ಮೊಡವಿನಲ್ಲಿ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿತ್ತಾಕುಲ ಠಾಣೆ ಪೊಲೀಸರು ಸ್ಥಳಕ್ಕೆ ಹೊಗಿ ನೋಡಿದಾಗ ಇಬ್ಬರು ಅಲ್ಲಿ ನರಳಾಡುತ್ತಿದ್ದು, ಅವರನ್ನು ಪೊಲೀಸರು ತುರ್ತಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಂಬುಲೆನ್ಸ ಬರುವುದು ತಡವಾಗುವ ಮಾಹಿತಿ ಅರಿತು ಪಿಎಸ್‌ಐ ಪರಶುರಾಮ ಮಿರ್ಚಗಿ ಪೊಲೀಸ್ ವಾಹನದಲ್ಲಿಯೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.  ಸ್ಥಿತಿ ಗಂಭೀರವಾಗಿದ್ದರೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆದಿದೆ. ಸಾವನಪ್ಪಿದ ಯುವಕನ ಹೆಸರು-ವಿಳಾಸ ಗೊತ್ತಾಗಿಲ್ಲ. ಗಾಯಾಳು ಸಹ ಮಾತನಾಡುವ ಸ್ಥಿತಿಯಲ್ಲಿಲ್ಲ. ವಾಹನ ಸಂಖ್ಯೆ ಆಧಾರದಲ್ಲಿ ಪೊಲೀಸರು ಕುಟುಂಬದವರನ್ನು ಸಂಪರ್ಕಿಸುತ್ತಿದ್ದಾರೆ.
- [ಮಗಳಿಗಾಗಿ ಅಮ್ಮನ ಹಿಂದೆ ಬಿದ್ದ ಗಣೇಶ!](https://mobiletime.in/2026/02/ganesha-fell-behind-his-mother-for-his-daughter/): ಹಳಿಯಾಳ ಕಾಳಗಿನಕೊಪ್ಪದ ಮಾದೇವಿ ಮೇತ್ರಿ ಅವರನ್ನು ಹುಕ್ಕೇರಿಯ ಗಣೇಶ ಹಳವಾರ್ ಅವರು ಹಿಂಬಾಲಿಸುತ್ತಿದ್ದು, `ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು’ ಎಂದು ದುಂಬಾಲು ಬಿದ್ದಿದ್ದಾರೆ. ಹಳಿಯಾಳದ ಕಾಳಗಿನಕೊಪ್ಪದಲ್ಲಿ ಮಾದೇವಿ ಮಂಜುನಾಥ ಮೇತ್ರಿ ಅವರು ವಾಸವಾಗಿದ್ದಾರೆ. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಹುಕ್ಕೇರಿ ಗುಡಿಕ್ಷೇತ್ರದ ಗಣೇಶ ಅರ್ಜುನ ಹಳವಾರ ಅವರು ಮಾದೇವಿ ಮೇತ್ರಿ ಅವರ ಮಗಳನ್ನು ಮದುವೆ ಆಗಲು ಬಯಸಿದ್ದು, ಇದನ್ನು ಮಾದೇವಿ ಮೇತ್ರಿ ಅವರು ಒಪ್ಪುತ್ತಿಲ್ಲ. ಈ ಹಿನ್ನಲೆ ಗಣೇಶ ಹಳವಾರ್ ಅವರು ಕಳೆದ ಆರು ತಿಂಗಳಿನಿAದ ಮಾದೇವಿ ಮೇತ್ರಿ ಅವರನ್ನು ಕಾಡಿಸುತ್ತಿದ್ದಾರೆ. `ನಿನ್ನ ಮಗಳನ್ನು ನನಗೆ ಕೊಡು’ ಎಂದು ಅವರು ಪದೇ ಪದೇ ಫೋನ್ ಮಾಡುತ್ತಿದ್ದಾರೆ. `ನಿನಗೆ ಮಾತ್ರ ಮಗಳನ್ನು ಕೊಡುವುದಿಲ್ಲ’ ಎಂದು ಮಾದೇವಿ ಮೇತ್ರಿ ಅವರು ಹೇಳಿದ್ದು, ಅದಾಗಿಯೂ ಗಣೇಶ ಹಳವಾರ್ ಫೋನ್ ಮಾಡುವುದನ್ನು ಬಿಟ್ಟಿಲ್ಲ. `ಪದೇ ಪದೇ ಫೋನ್ ಮಾಡಬೇಡ’ ಎಂದು ಸೂಚಿಸಿದರೂ ಆತನ ಕಾಟ ಕಡಿಮೆ ಆಗಿಲ್ಲ. ಫೆ 14ರ ರಾತ್ರಿ
- [ಅರಣ್ಯ ಹಕ್ಕು: ಮಹಜರು ಪ್ರಕ್ರಿಯೆಯಲ್ಲಿನ ಲೋಪ ಸರಿಪಡಿಸಲು ಆಗ್ರಹ](https://mobiletime.in/2026/02/forest-rights-demand-to-correct-loopholes-in-the-mahajaru-process/): `ಅರಣ್ಯ ಹಕ್ಕು ಸ್ಥಳ ಮಹಜರು ಪ್ರಕ್ರಿಯೆಯೂ ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಕೂಡಲೇ ಜಿಲ್ಲಾಡಳಿತ ಈ ಲೋಪದೋಷಗಳನ್ನು ಸರಿಪಡಿಸಬೇಕು’ ಎಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ. ಭಟ್ಕಳದಲ್ಲಿ ಅರಣ್ಯ ಭೂಮಿ ಅತೀಕ್ರಮಣದಾರರ ಸಭೆ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಸತತ ಪ್ರಯತ್ನ ಮತ್ತು ಸಚಿವ ಮಂಕಾಳ ವೈದ್ಯ ಹಾಗೂ ವಿವಿಧ ಶಾಸಕರ ಸಹಕಾರದಿಂದ ತಿರಸ್ಕರಿಸಿದ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಮರುಪರಿಶೀಲನೆ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ಅರಣ್ಯವಾಸಿಗಳಿಗೆ ಅವರ ಸಾಗುವಳಿ ಬಗೆಗಿನ ಪುರಾವೆ ಒದಗಿಸುವ ಉದ್ದೇಶದಿಂದ ರಾಜ್ಯ ಅರಣ್ಯ ಹಕ್ಕು ಮೇಲುಸ್ತುವಾರಿ ಸಮಿತಿಯ ಜಂಟಿ ಮಹಜರು ಪ್ರಕ್ರಿಯೆ ನಡೆಸಲು ಆದೇಶಿಸಿದೆ. ಜಿಲ್ಲಾಧಿಕಾರಿಗಳು ನೀಡಿದ ಆದೇಶದಂತೆ ಕಳೆದ ಒಂದು ವಾರದಿಂದ ಜಿಲ್ಲೆಯ ವಿವಧ ಕಡೆ ಸ್ಥಳ ಮಹಜರು ಪ್ರಕ್ರಿಯೆ ನಡೆದಿದ್ದು, ಮಹಜರು ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಸದೇ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಮಾಡಲಾಗುತ್ತಿದೆ’ ಎಂದು ದೂರಿದರು.
- [ಕಾಡು ಮಾಂಸಕ್ಕಾಗಿ 6 ತಾಸು ಕಾದ ಅಧಿಕಾರಿ!](https://mobiletime.in/2026/02/officer-waited-6-hours-for-wild-meat/): ಭಟ್ಕಳದ ಮನೆಯೊಂದರ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ ದಾಸ್ತಾನು ಮಾಡಿದ್ದ ಜಿಂಕೆ ಮಾಂಸವನ್ನು ಜಪ್ತು ಮಾಡಿದ್ದಾರೆ. ಭಟ್ಕಳದ ಹುರುಳಿಸಾಲದ ಮನೆಯಲ್ಲಿ 21 ಕೆಜಿ ಮಾಂಸ, ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್ ಸಿಕ್ಕಿದೆ. ಜಾಫರ್ ಬ್ರಹ್ಮಾವರ ಎಂಬಾತ ಕಾಡಿನಲ್ಲಿ ಪ್ರಾಣಿಯನ್ನು ಹತ್ಯೆ ಮಾಡಿ ಮಾಂಸವನ್ನು ಮನೆಯ ಪಕ್ಕದಲ್ಲಿ ಬೇರ್ಪಡಿಸುತ್ತಿದ್ದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕಿತು. ಪ್ರಾಣಿಯ ಅವಶೇಷಗಳನ್ನು ಮನೆಯ ಪಕ್ಕದಲ್ಲಿದ್ದ ಪಾಳುಬಿದ್ದ ಬಾವಿಗೆ ಎಸೆದಿರುವ ಬಗ್ಗೆಯೂ ದೂರು ಬಂದಿತ್ತು. ಈ ಹಿನ್ನಲೆ ದಾಳಿ ಮಾಡಿದ ಅಧಿಕಾರಿಗಳು ಮನೆಯಲ್ಲಿದ್ದ ಮಾಂಸದ ಜೊತೆ ಬಾವಿಯಲ್ಲಿದ್ದ ಅವಶೇಷಗಳನ್ನು ಹೊರ ತೆಗೆದಿದ್ದಾರೆ. ಮನೆ ಒಳಗೆ ಶೋಧಕ್ಕೆ ಮುಂದಾದ ಅಧಿಕಾರಿಗಳಿಗೆ ಮನೆಯವರು ಸಹಕಾರ ನೀಡಲಿಲ್ಲ. ಮನೆ ಬಾಗಿಲನ್ನು ಸಹ ತೆರೆಯಲಿಲ್ಲ. ಅದಾಗಿಯೂ, ಆರು ಗಂಟೆಗಳ ಕಾಲ ಅಧಿಕಾರಿಗಳು ಕಾದು ಬಾಗಿಲು ತೆರೆಸಿದರು. ನಂತರ ನಡೆದ ಪರಿಶೀಲನೆಯಲ್ಲಿ ಫ್ರಿಡ್ಜಿನ ಒಳಗೆ ಸಂಗ್ರಹಿಸಿದ್ದ 21 ಕೆಜಿ ಮಾಂಸ ಪತ್ತೆಯಾಯಿತು. ಜೊತೆಗೆ ಜಿಂಕೆ ಕೊಬ್ಬು ಹಾಗೂ ಎರಡು ಏರ್‌ಗನ್ ಸಹ
- [ಅನಂತಮೂರ್ತಿಗೆ ಒಲಿದ ಅದೃಷ್ಠ: ಆಗಿನ ಉಪಾಧ್ಯಕ್ಷನೇ ಈಗಿನ ಅಧ್ಯಕ್ಷ!](https://mobiletime.in/2026/02/ananthmurthys-misfortune-the-then-vice-president-is-the-current-president/): ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾಗಿದ್ದ ಅನಂತಮೂರ್ತಿ ಹೆಗಡೆ ಅವರನ್ನು ಇದೀಗ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸೊಪ್ಪಿನ ಬೆಟ್ಟದ ಸಮಸ್ಯೆ, ಬೆಳೆ ವಿಮೆ ಪರಿಹಾರ ಬಾರದಿರುವಿಕೆ, ಕೃಷಿ-ಮಾಧ್ಯಮಿಕ ಸಾಲ ಮಂಜೂರಾತಿ ವಿಷಯದಲ್ಲಿ ವಿಳಂಬ, ಪಹಣಿ ಪತ್ರಿಕೆ ದರ ದುಬಾರಿ ಸೇರಿ ರೈತರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಅನಂತಮೂರ್ತಿ ಹೆಗಡೆ ಅವರು ಧ್ವನಿ ಎತ್ತುವ ಸಾಧ್ಯತೆಗಳಿವೆ. ಈ ಹಿಂದೆ ಅನಂತಮೂರ್ತಿ ಹೆಗಡೆ ಅವರು ತಮ್ಮ ಸ್ವಂತ ಹಣದಲ್ಲಿ ಕೊನೆಗೌಡರಿಗೆ ವಿಮೆ ಮಾಡಿಸಿದ್ದರು. ಜೊತೆಗೆ ಸಂಕಷ್ಟಕ್ಕೆ ಒಳಗಾದ ರೈತರನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದರು. ಅದರೊಂದಿಗೆ ಬಿಜೆಪಿ ಸಂಘಟನೆಗೆ ಶ್ರಮಿಸಿದ್ದರು. ಅನಂತಮೂರ್ತಿ ಹೆಗಡೆ ಅವರು ಅಡಿಕೆ ಬೆಳೆಗಾರರಾಗಿದ್ದು, ರೈತರ ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ. ಈ ಎಲ್ಲಾ ಹಿನ್ನಲೆ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾಗಿದ್ದ ಅನಂತಮೂರ್ತಿ ಹೆಗಡೆ ಅವರನ್ನು ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಅವರು ಬಿಜೆಪಿಯ ಉತ್ತg ಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರ ನೇಮಕಾತಿ ಆದೇಶ ಹೊರಡಿಸಿದ್ದಾರೆ.
- [ಬೇನಾಮಿ ಹೆಸರಿನಲ್ಲಿ ದುಡ್ಡು ದೋಚಿದ ಇನ್ಸಪೆಕ್ಟರ್!](https://mobiletime.in/2026/02/inspector-who-robbed-money-in-an-anonymous-name/): ಶಿರಸಿ ಅಬಕಾರಿ ಇನ್ಸಪೆಕ್ಟರ್ ಮಂಜುಕುಮಾರ ನಾಯ್ಕ ಹಾಗೂ ದಾಂಡೇಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ವಿನೋದ ಶೆಟ್ಟಿ ಸೇರಿ ಸೆಕ್ಯುರಿಟಿ ಗಾರ್ಡ ಮಂಜುನಾಥ ಮಾದರ್ ಅವರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ. ಆ ಬ್ಯಾಂಕ್ ಖಾತೆ ಮೂಲಕ ಸಾಲಪಡೆದು ಅದನ್ನು ತೀರಿಸದೇ ವಂಚಿಸಿದ್ದಾರೆ. ದಾoಡೇಲಿಯ ಜಿ ಎನ್ ರಸ್ತೆಯ ಸಿಎಂಸಿ ಕ್ವಾಟರ್ಸಿನಲ್ಲಿ ಮಂಜುನಾಥ ರಾಜು ಮಾದರ್ ಅವರು ವಾಸವಾಗಿದ್ದಾರೆ. ಅಲ್ಲಿನ ಪೆಪರ್‌ಮಿಲ್ಲಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಸೆಕ್ಯುರಿಟಿ ಗಾರ್ಡ ಆಗಿರುವ ರಾಜು ಮಾದರ್ ಅವರಿಗೆ ಹೆಚ್ಚಿನ ಓದು-ಬರಹ ಗೊತ್ತಿಲ್ಲ. ಇದನ್ನು ಅರಿತ ಶಿರಸಿ ಅಬಕಾರಿ ಇನ್ಸಪೆಕ್ಟರ್ ಮಂಜುಕುಮಾರ ನಾಯ್ಕ ಹಾಗೂ ದಾಂಡೇಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ವಿನೋದ ಶೆಟ್ಟಿ ಜೊತೆ ಇಲಿಯಾಸ್ ಎಂಬಾತರು ಸೇರಿ ಮಂಜುನಾಥ ಮಾದರ್ ಅವರನ್ನು ವಂಚಿಸಿದ್ದಾರೆ. 2021ರಲ್ಲಿ ಮಂಜುನಾಥ ಮಾದರ್ ಅವರ ಬಳಿ ವಿವಿಧ ಕಾಗದಪತ್ರಗಳ ಮೇಲೆ ಈ ಮೂವರು ಸೇರಿ ಸಹಿ ಹಾಕಿಸಿದ್ದಾರೆ. ಅದಾದ ನಂತರ ಮಂಜುನಾಥ ಮಾದರ್ ಅವರ ಅರಿವಿಗೆ ಬಾರದ ಹಾಗೇ ಆಧಾರ್
- [ಅಪಘಾತ: ಒಂದು ಸಾವು!](https://mobiletime.in/2026/02/accident-one-death/): ಹಳಿಯಾಳ – ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಕೆಸರೊಳ್ಳಿಯ ಬಳಿ ಕ್ರೂಸರ್ ಮತ್ತು ಮಾರುತಿ ಎರ್ಟಿಗಾ ನಡುವೆ ಅಪಘಾತ ನಡೆದಿದೆ. ಸವದತ್ತಿಯಿಂದ ಹುಲವಿಗೆ ಹೋಗುತ್ತಿದ್ದ ಕ್ರೂಸರ್ ವಾಹನ ಹಾಗೂ ದಾಂಡೇಲಿಯಿAದ ಹಳಿಯಾಳಕ್ಕೆ ಹೋಗುತ್ತಿದ್ದ ಮಾರುತಿ ಎರ್ಟಿಗಾ ನಡುವೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಕ್ರೂಸರ್ ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಅಲ್ಲಿಯೇ ಸಾವನಪ್ಪಿದ್ದಾರೆ. ಅದೇ ವಾಹನದಲ್ಲಿದ್ದ 6 ಜನರಿಗೆ ಗಾಯವಾಗಿದೆ. ಗಾಯಗೊಂಡ ಎಲ್ಲರನ್ನು ತಕ್ಷಣ ಹಳಿಯಾಳ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಅವರಿಗೆ ಆರೈಕೆ ಮುಂದುವರೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
- [ಒಂಟಿ ಸಲಗದ ಉಗ್ರ ಪ್ರತಾಪ!](https://mobiletime.in/2026/02/the-fierce-power-of-a-single-warrior/): ದಾಂಡೇಲಿ ಬಳಿಯ ಭಾಗವತಿಯಲ್ಲಿ ಗುರುವಾರ ಮತ್ತೆ ಆನೆ ಕಾಣಿಸಿಕೊಂಡಿದ್ದು, ಆ ಆನೆ ಈ ದಿನ ವಾಹನ ಸವಾರರನ್ನು ಬೆನ್ನಟ್ಟಿದೆ. ಸರಿ ಸುಮಾರು ಅರ್ದ ತಾಸುಗಳ ಕಾಲ ಆನೆ ರಸ್ತೆ ಮೇಲೆ ಓಡಾಟ ನಡೆಸಿ ಭಯ ಹುಟ್ಟಿಸಿದೆ. ಗುರುವಾರ ಮಧ್ಯಾಹ್ನ 3 ಗಂಟೆ ಅವಧಿಗೆ ಒಂಟಿ ಸಲಗ ಮುಖ್ಯ ರಸ್ತೆಗೆ ಬಂದಿತು. ಈ ವೇಳೆ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲಾ ವಾಹನಗಳನ್ನು ಆನೆ ಅಡ್ಡಗಟ್ಟಿತು. ಅದಾಗಿಯೂ, ವಾಹನ ಸವಾರರು ಮುಂದೆ ಹೋಗಲು ಪ್ರಯತ್ನಿಸಿದರು. ಆಗ, ಆನೆ ಕಾರಿನ ಕಡೆ ಓಡಿ ಬಂದು ಬೆದರಿಸಿತು. ಆನೆ ನೋಡಿ ವಾಹನ ಸವಾರರು ಆತಂಕಕ್ಕೆ ಒಳಗಾದರು. ರಸ್ತೆ ಮಧ್ಯೆಯೇ ಓಡಾಡುತ್ತಿದ್ದ ಆನೆ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದು, ಆನೆ ಕಾಡಿಗೆ ಹೋಗುವವರೆಗೂ ಜನ ಕಾಯುತ್ತಿದ್ದರು. ಈ ವೇಳೆ ಕೆಲವರು ಆನೆಯ ಸಮೀಪ ಹೋಗಿದ್ದರು. ಅವರನ್ನು ಆನೆ ಬೆನ್ನತ್ತಿ ಬಂದಿದ್ದು, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾದರು. ಕೆಲವರು ವಾಹನ ಅಲ್ಲಿಯೇ ಬಿಟ್ಟು ರಕ್ಷಣೆಗಾಗಿ ರಸ್ತೆಯಲ್ಲಿ ದೂರ ಓಡಿದರು. ಈ ದೃಶ್ಯಾವಳಿಗಳನ್ನು
- [ಆಗ ಹೇಳಿದ್ದೇ ಒಂದು.. ಇದೀಗ ಮಾಡಿದ್ದೇ ಮತ್ತೊಂದು!](https://mobiletime.in/2026/02/what-you-said-then-is-one-thing-what-you-did-now-is-another/): ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ಒದಗಿಸುವ ವಿಷಯವಾಗಿ ಮಹಜರ್ ಮಾಡಲು ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಸಮಿತಿಯು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದು, ಆ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. `ನಿರ್ಧಿಷ್ಟ ದಾಖಲೆ ಕೊರತೆಯಿಂದ ದಾಖಲೆಗಾಗಿ ವಿವಿಧ ಅರಣ್ಯ ಭೂಮಿ ಹಕ್ಕು ಸಮಿತಿಯಲ್ಲಿ ತಿರಸ್ಕರಿಸಿದ ಅರ್ಜಿಗಳ ಕ್ಷೇತ್ರದ ಸಾಗುವಳಿ ದೃಢೀರಣಕ್ಕೆ ಉನ್ನತ ಮಟ್ಟದ ಸಮಿತಿಯಿಂದ ಮಹಜರ್ ಮಾಡಬೇಕು. ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಬೇಕು’ ಎಂದು ರಾಜ್ಯ ಉಸ್ತವಾರಿ ಸಮಿತಿಯು ಜಿಲ್ಲಾಧಿಕಾರಿಗೆ ಜನವರಿ 3ರಂದು ನಿರ್ದೇಶನ ನೀಡಿತ್ತು. ಆದರೆ, ನಿರ್ದೇಶನದ ಮೂಲ ಅಂಶವಾದ ಸಾಗುವಳಿ ಕುರುಹು ಮತ್ತು ಸಾಂದರ್ಭೀಕ ದಾಖಲೆಗಳನ್ನು ಮಹಜರು ವೇಳೆ ಅಧಿಕಾರಿಗಳು ಪರಿಗಣಿಸುತ್ತಲೇ ಇಲ್ಲ. ಅದರ ಬದಲು ಅರ್ಜಿದಾರನ ಅರ್ಜಿಗೆ ಸಂಬAಧಿಸಿ ಮೌಲ್ಯತೆಯನ್ನು ಮಾತ್ರ ಪರಿಶೀಲಿಸುತ್ತಿದ್ದು, ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಆಕ್ಷೇಪಿಸಿದ್ದಾರೆ. `ಕಾನೂನು ನೀತಿ-ನಿಯಮಗಳಿಗೆ ವಿರುದ್ಧವಾಗಿ ಹಾಗೂ ಸಾಗುವಳಿ
- [ವನ ದೇವತೆಯ ಪ್ರೀತಿ ನಿರಾಕರಿಸಿದ ಫಾರೆಸ್ಟ್ ಆಫೀಸರ್!](https://mobiletime.in/2026/02/forest-officer-who-rejected-the-love-of-the-forest-goddess/): ಶಿರಸಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿರುವ ಕಾರ್ತೀಕ ನಾರ್ವೇಕರ್ ಅವರಿಗೆ ಸಹದ್ಯೋಗಿಯೊಬ್ಬರು ಪ್ರೇಮ ಸಂದೇಶ ಕಳುಹಿಸಿದ್ದಾರೆ.  ಆ ಪ್ರೀತಿ ಒಪ್ಪದ ಕಾರ್ತೀಕ್ ನಾರ್ವೇಕರ್ ಅವರು ಆ ಸಹದ್ಯೋಗಿ ವಿರುದ್ಧವೇ ಸಿಡಿದೆದ್ದಿದ್ದಾರೆ! ಶಿರಸಿಯ ಚಿಪಗಿ ಫಾರೆಸ್ಟ್ ಕಾಲೋನಿಯಲ್ಲಿ ಕಾರ್ತೀಕ ನಾಗರಾಜ ನಾರ್ವೇಕರ್ (29) ಅವರು ವಾಸವಾಗಿದ್ದಾರೆ. 2020ರ ಅಕ್ಟೊಬರ್ ತಿಂಗಳಿನಿoದ ಶಿರಸಿ ಅರಣ್ಯಾಧಿಕಾರಿ ಕಚೇರಿಯಲ್ಲಿ ಅವರು ಉಪವಲಯ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ಅವರು ದಾಸನಕೊಪ್ಪ ಶಾಖೆಯಲ್ಲಿ ಸರ್ಕಾರಿ ಕೆಲಸ ನಿರ್ವಹಿಸಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದ ಬೀಟ್ ಫಾರೆಸ್ಟರ್ ವಿದ್ಯಾಶ್ರೀ ಪರಶುರಾಮ ಜಾದವ್ ಅವರು ಪರಿಚಯವಾಗಿದ್ದಾರೆ. ವಿದ್ಯಾಶ್ರೀ ಜಾದವ್ ಅವರು ಕಾರ್ತಿಕ್ ನಾರ್ವೇಕರ್ ಅವರನ್ನು ಪ್ರೀತಿಸುತ್ತಿದ್ದು, ಪ್ರೀತಿಯ ಸಂಕೇತವಾಗಿ ವಾಟ್ಸಪ್ ಸ್ಟೇಟಸ್ಸಿನಲ್ಲಿ ಕಾರ್ತೀಕ ನಾರ್ವೇಕರ್ ಅವರ ಫೋಟೋ ಹಾಕಿಕೊಳ್ಳುತ್ತಿದ್ದರು. ಅದರೊಂದಿಗೆ ಮೊಬೈಲ್ ಮೂಲಕ ಪದೇ ಪದೇ ಮೆಸೆಜ್ ಮಾಡಿ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದರು. ಆದರೆ, ಕಾರ್ತೀಕ ನಾರ್ವೇಕರ್ ಅವರು ಆ ಪ್ರೀತಿಯನ್ನು ಒಪ್ಪಿರಲಿಲ್ಲ. `ಜೀವನದಲ್ಲಿ ಏನಾದರೂ ಸಾಧಿಸಬೇಕು’ ಎಂಬ ನಿಟ್ಟಿನಲ್ಲಿ ಕಾರ್ತೀಕ ನಾರ್ವೇಕರ್ ಅವರು
- [ಮಾಜಿ ಅಧ್ಯಕ್ಷೆಯ ಫೋನ್ ನಂ ಬ್ಲಾಕ್ ಮಾಡಿದ ಪಿಡಿಓ: ದೂರು!](https://mobiletime.in/2026/02/pdo-blocks-former-presidents-phone-number-complaint/): ಕುಮಟಾದ ಹೊಲನಗದ್ದೆ ಗ್ರಾಮ ಪಂಚಾಯತ ಪಿಡಿಓ ಪ್ರಜ್ಞಾ ನಾಯ್ಕ ಅವರು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜಾ ಅವರ ಮೊಬೈಲ್ ನಂ ಬ್ಲಾಕ್ ಮಾಡಿದ್ದಾರೆ. ಊರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೂ ಸ್ಪಂದಿಸದೇ ಫೋನ್ ನಂ ಬ್ಲಾಕ್ ಮಾಡಿದ ಕಾರಣ ಪಿಡಿಓ ವಿರುದ್ಧ ಅನಿತಾ ಡಿಸೋಜಾ ಅವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ. `ಆರು ತಿಂಗಳ ಹಿಂದೆ ಕುಮಟಾ ಮಾಸೂರು ಕ್ರಾಸಿನಲ್ಲಿ ಮನೆ ಮನೆಗೂ ನಲ್ಲಿ ನೀರಿನ ಸಂಪರ್ಕ ಕೊಡಲಾಗಿದೆ. ಆದರೆ, ಜಲ ಜೀವನ ಮಿಶನ್ ಯೋಜನೆ ಅಡಿ ನೀರು ಒದಗಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದ ಕಾರಣ ಪಿಡಿಓ ಪ್ರಜ್ಞಾ ನಾಯ್ಕ ಅವರು ಫೋನ್ ನಂ ಬ್ಲಾಕ್ ಮಾಡಿದ್ದಾರೆ’ ಎಂದು ಅನಿತಾ ಡಿಸೋಜಾ ಅವರು ಆಕ್ರೋಶವ್ಯಕ್ತಪಡಿಸಿದರು. `ಗ್ರಾಮ ಪಂಚಾಯತದ ಫೋನ್ ನಂ ಕೆಲಸ ಮಾಡುತ್ತಿಲ್ಲ. ಪಿಡಿಓ ಫೋನಿಗೆ ಸಿಗುತ್ತಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಹಾಗೇ ಇದ್ದು, ಮೇಲಧಿಕಾರಿಗಳಿಗೂ ಸಹ ಪಿಡಿಓ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರಿದರು. `ಸದ್ಯ ತಾನು ಭಟ್ಕಳದ
- [ದೇಶಿ ಹಸುವಿನ ಮೇಲೆ ದುಷ್ಟರ ಕಣ್ಣು!](https://mobiletime.in/2026/02/evil-eyes-on-the-local-cow/): ದೇಶಿಯ ಹಸುಗಳ ಬಗ್ಗೆ ಅಪಾರ ಕಾಳಜಿಹೊಂದಿದ್ದ ಹೊನ್ನಾವರದ ವಕೀಲ ಶ್ರೀಧರ ಹೆಗಡೆ ಅವರು ಮಲೆನಾಡು ಗಿಡ್ಡ ತಳಿಯ ಆಕಳು ಸಾಕಿದ್ದು, ಆ ಆಕಳನ್ನು ಕಳ್ಳರು ಕದ್ದಿದ್ದಾರೆ. ಹೊನ್ನಾವರದ ವಂದೂರು ಬಳಿಯ ದುಗ್ಗೂರಿನಲ್ಲಿ ಶ್ರೀಧರ ಗೋವಿಂದ ಹೆಗಡೆ ಅವರು ವಾಸವಾಗಿದ್ದಾರೆ. ವಕೀಲ ವೃತ್ತಿಯ ಜೊತೆ ಅವರು ಕೃಷಿ ಕಾಯಕದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಕು ಪ್ರಾಣಿಗಳ ಬಗ್ಗೆ ಶ್ರೀಧರ ಹೆಗಡೆ ಅವರಿಗೆ ಎಲ್ಲಿಲ್ಲದ ಅಕ್ಕರೆ. ಅದರಲ್ಲಿಯೂ ದೇಶಿಯ ಹಸುಗಳು ಎಂದರೆ ಅವರಿಗೆ ಅಚ್ಚುಮೆಚ್ಚು. ಹೀಗಾಗಿ ಅವರು ತಮ್ಮ ಕೊಟ್ಟಿಗೆಯಲ್ಲಿ ಮಲೆನಾಡು ಗಿಡ್ಡ ತಳಿಯ ಹಸು ಸಾಕಿದ್ದರು. ವಕೀಲರ ಒಡೆತನದಲ್ಲಿರುವ ಮಲೆನಾಡು ಗಿಡ್ಡ ಹಸುವಿನ ಮೇಲೆ ದುಷ್ಟರು ಕಣ್ಣು ಹಾಕಿದ್ದು, ಹಗಲಿನ ಅವಧಿಯಲ್ಲಿಯೇ ಆ ಹಸುವನ್ನು ಕಣ್ಮರೆ ಮಾಡಿದರು. ಫೆಬ್ರವರಿ 11ರ ಬೆಳಗ್ಗೆ 8 ಗಂಟೆಯವರೆಗೆ ಕೊಟ್ಟಿಗೆಯಲ್ಲಿದ್ದ ಹಸು ಸಂಜೆ 5 ಗಂಟೆಯ ವೇಳೆಗೆ ಅಲ್ಲಿರಲಿಲ್ಲ. ಹಸು ಮೇವಿಗೆ ಹೋಗಿರಬಹುದು ಎಂದು ಅಂದಾಜಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಆ ಬೆಟ್ಟದಲ್ಲಿ ಹಸುವಿನ ಸಗಣಿಯೂ ಕಾಣಲಿಲ್ಲ.
- [ನಿಯಂತ್ರಣ ತಪ್ಪಿದ ನ್ಯಾನೋ ಕಾರು!](https://mobiletime.in/2026/02/nano-car-out-of-control/): ಸಿದ್ದಾಪುರ ರವೀಂದ್ರ ನಗರದ ಹೀರೋ ಶೋರೂಮಿನ ಬಳಿ ನ್ಯಾನ್ಯೋ ಕಾರು ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿ ನಿಂತಿದ್ದ ಮತ್ತೊಂದು ಕಾರಿಗೆ ನ್ಯಾನೋ ಕಾರು ಗುದ್ದಿದೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ. ಶಿರಸಿ ಟಿಎಸ್‌ಎಸ್ ರಸ್ತೆಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಪ್ರಶಾಂತ ಗ್ರೆಗೋರಿ ಫರ್ನಾಂಡೀಸ್ ಅವರು ಫೆಬ್ರವರಿ 18ರಂದು ನ್ಯಾನೋ ಕಾರು ಓಡಿಸಿಕೊಂಡು ಹೊರಟಿದ್ದರು. ಸಿದ್ದಾಪುರ ರವೀಂದ್ರ ನಗರದ ಹೀರೋ ಶೋ ರೂಮಿನ ಬಳಿಯ ಕಚ್ಚಾ ರಸ್ತೆಯಲ್ಲಿ ಬಿಳಿ ಬಣ್ಣದ ಮಾರುತಿ ಸುಜುಕಿ ಬ್ರಿಝಾ ಕಾರು ನಿಂತಿರುವುದನ್ನು ಅವರು ನೋಡಿದ್ದರು. ಅದಾಗಿಯೂ, ಅವರ ವೇಗವಾದ ಕಾರು ಚಾಲನೆ ಅಪಾಯ ಆಹ್ವಾನಿಸಿದ್ದು, ರಸ್ತೆ ಬದಿ ನಿಂತಿದ್ದ ಕಾರಿಗೆ ಪ್ರಶಾಂತ ಫರ್ನಾಂಡೀಸ್ ಅವರು ತಮ್ಮ ಕಾರು ಗುದ್ದಿದರು. ಪರಿಣಾಮ ನ್ಯಾನೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅತೋನಿ ಡಯಾಗೋ ಬೆರಿಟೋ (75 ವರ್ಷ), ಫಾತಿಮಾ ಅಂಥೋನಿ ಬೆರಿಟೋ (70 ವರ್ಷ), ಅಂಥೋನಿ ಅಗಸ್ತಿನ್ ಫರ್ನಾಂಡೀಸ್ (70 ವರ್ಷ) ಮತ್ತು ಅಂಜಲಿ ಎಡವರ್ಡ್ ಫರ್ನಾಂಡೀಸ್ (60
- [ಸರಣಿ ಅಪಘಾತ: 24 ಜನರಿಗೆ ಆಘಾತ!](https://mobiletime.in/2026/02/serial-accident-24-people-in-shock/): ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಸುಂಕಸಾಳದಲ್ಲಿ ಗುರುವಾರ ನಸುಕಿನಲ್ಲಿ ಸರಣಿ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ 24 ಜನ ಗಾಯಗೊಂಡಿದ್ದಾರೆ. ಆ ಪೈಕಿ 8 ಜನರ ಸ್ಥಿತಿ ಗಂಭೀರವಾಗಿದೆ. ಅಪಘಾತ ನಡೆದ ನಂತರ ಬಸ್ಸಿನ ಒಳಗಿನಿಂದ ದೊಡ್ಡ ಆಕ್ರಂದನ ಕೇಳಿಸಿದ್ದು, ಸುತ್ತಲಿನ ಜನ ಸಹಾಯಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರು ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದು ಅದರ ಒಳಗಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. 12 ಮಂದಿ ವಿದೇಶಿಗರು ಬಸ್ಸಿನಲ್ಲಿದ್ದು, ಗಾಯಗೊಂಡ ಅವರಿಗೆ ಸುಂಕಸಾಳದ ಜನ ಉಪಚಾರ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಕಾರವಾರದ ಕಿಮ್ಸ್’ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಬೇರೆ ಬೇರೆ ಕಡೆ ದಾಖಲಿಸಲಾಗಿದೆ. ಇಲ್ಲಿ ಹುಬ್ಬಳ್ಳಿಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್ಸಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅದಾದ ನಂತರ ಆ ಲಾರಿ ಬಳ್ಳಾರಿಯಿಂದ ಪಣಜಿಗೆ ಸಂಚರಿಸುತ್ತಿದ್ದ ಬಸ್ಸಿಗೂ ಗುದ್ದಿದೆ. ಅಪಘಾತದ ಪರಿಣಾಮ ಅರಬೈಲ್ ಘಟ್ಟದವರೆಗೂ ವಾಹನಗಳು ಸಾಲಿನಲ್ಲಿ ನಿಂತಿದ್ದು, ಸಂಚಾರ ದಟ್ಟಣೆ ಸರಿಪಡಿಸಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಯಲ್ಲಾಪುರ ಜಾತ್ರೆ ಮುಗಿಸಿ
- [ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದ ಸ್ನೇಹಿತ!](https://mobiletime.in/2026/02/help-a-friend-in-trouble/): ಅಂಕೋಲಾದ ರಾಘು ನಾಯ್ಕ ಅವರು ತಮಗೆ ಸ್ನೇಹಿತರಾಗಿದ್ದ ಬೇಲಿಕೇರಿಯ ಅಮರನಾಥ ಭಾನಾವಳಿಕರ್ ಅವರಿಗೆ ಆರ್ಥಿಕ ನೆರವು ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಷ್ಟ ಕಾಲದಲ್ಲಿ ಸಹಾಯ ಮಾಡಿದ ರಾಘು ನಾಯ್ಕ ಅವರಿಗೆ ಆ ಹಣ ಮರಳಿಸುವ ಬದಲು ಅವರ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. `ಖಾಲಿ ಚೆಕ್ ಹಿಡಿದು ಕಡ್ಡಿ ಆಡಿಸಿದ ಎಜೆಂಟ’ ವರದಿ ಕುರಿತಾಗಿ ರಾಘು ನಾಯ್ಕ ಕಡೆಯವರು ಸ್ಪಷ್ಠನೆ ನೀಡಿದ್ದು, ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ. `ಬೇಲಿಕೇರಿಯ ಅಮರನಾಥ ಭಾನಾವಳಿಕರ್ ಹಾಗೂ ಕೇಣಿ ಕಸಬಾದ ರಾಘು ನಾಯ್ಕ ಅವರು 10 ವರ್ಷ ಹಿಂದಿನ ಸ್ನೇಹಿತರಾಗಿದ್ದರು. ಅಮರನಾಥ ಭಾನಾವಳಿಕರ್ ಅವರು ಸಮಸ್ಯೆಗೆ ಸಿಲುಕಿದ ಕಾರಣ ರಾಘು ನಾಯ್ಕ ಅವರಲ್ಲಿ ಸಹಾಯ ಕೇಳಿದ್ದರು. 15 ಲಕ್ಷ ರೂ ನೆರವು ನೀಡುವಂತೆ ಅಮರನಾಥ ಭಾನಾವಳಿಕರ್ ಅವರು ಕೇಳಿದ್ದು, ರಾಘು ನಾಯ್ಕ ಅವರು ಒಂದೇ ಸಲ ಅಷ್ಟೊಂದು ಹಣ ಕೊಡಲು ಆಗಿರಲಿಲ್ಲ. ಹೀಗಾಗಿ ಹಂತ ಹಂತವಾಗಿ ರಾಘು ನಾಯ್ಕ ಅವರು ಅಮರನಾಥ ಭಾನಾವಳಿಕರ್ ಅವರಿಗೆ
- [ಪ್ರಗತಿ ಪರಿಶೀಲನೆ: ಸಿ ಎಸ್ ಆರ್ ಅಡಿ ಹೊನ್ನಾವರಕ್ಕೆ ಅಧಿಕ ಅನುದಾನ!](https://mobiletime.in/2026/02/progress-review-more-funding-for-honnavar-under-csr/): `ಸರ್ಕಾರ ಸೂಚಿಸಿದ ಎಲ್ಲಾ ಕಾಮಗಾರಿಗಳನ್ನು ಮಾರ್ಚ 15ರ ಒಳಗೆ ಮುಗಿಸುವುದರೊಂದಿಗೆ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನುದಾನ ಮರಳದಂತೆ ಎಚ್ಚರಿಕೆವಹಿಸಬೇಕು’ ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್ ವೈದ್ಯ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಬುಧವಾರ ಹೊನ್ನಾವರ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, `ಆರೋಗ್ಯ ಇಲಾಖೆಯಿಂದ ಯಾವುದೇ ಔಷಧವನ್ನು ಹೊರಗಿನ ಮೆಡಿಕಲ್‌ನಿಂದ ತರುವಂತೆ ಚೀಟಿ ಬರೆದುಕೊಡಬಾರದು, ಜನರು ಔಷಧಕ್ಕಾಗಿ ಅಲೆದಾಡುವಂತಾಗಬಾರದು. ಅಂತಹ ಪ್ರಕರಣಗಳು ಕಂಡುಬoದಲ್ಲಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಸಿದರು. `ಮಾರ್ಚ 18 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದು, ತಾಲೂಕಿನಲ್ಲಿ ಈ ಬಾರಿ ಶೇ 100ರಷ್ಟ್ಟು ಫಲಿತಾಂಶ ಬರಬೇಕು’ ಎಂದು ಸೂಚಿಸಿದರು. `ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗೆ ಬರುವ ವಿಧ್ಯಾರ್ಥಿಗಳಿಗೆ ಉಚಿತ ಹಾಗೂ ವಿಶೇಷÀ ಬಸ್ ವ್ಯವಸ್ಥೆ ಕಲ್ಪಿಸಿ’
- [ಮದುವೆಗಾಗಿ ದೇವರ ಮೊರೆ!](https://mobiletime.in/2026/02/pray-to-god-for-marriage/): ಗೋಕರ್ಣದಲ್ಲಿ ಅದ್ಧೂರಿ ಶಿವರಾತ್ರಿ ಮಹೋತ್ಸವ ನಡೆದಿದ್ದು, ಬುಧವಾರ ನಡೆದ ಮಹಾರಥೋತ್ಸವದಲ್ಲಿ ಅನೇಕರು ಬಾಳೆಹಣ್ಣು ಹಾಗೂ ಕಡಲೆಯನ್ನು ದೇವರಿಗೆ ಸಲ್ಲಿಸಿದ್ದಾರೆ. ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವದ ಮಹಾರಥೋತ್ಸವ ಬುಧವಾರ ಸಂಜೆ ನಡೆದಿದ್ದು, ಆಕರ್ಷಕವಾಗಿ ಅಲಂಕರಿಸಿದ ರಥಕ್ಕೆ ಭಕ್ತರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ. ಸಾವಿರಾರು ಜನ ಬಾಳೆ ಹಣ್ಣುಗಳ ಮೇಲೆ ಬೇಡಿಕೆ ಬರೆದು ಅದನ್ನು ರಥಕ್ಕೆ ಎಸೆದಿದ್ದಾರೆ. `ಈ ವರ್ಷವಾದರೂ ಮದುವೆ ಮಾಡಿಸಿಕೊಡು’ ಎನ್ನುವ ಬೇಡಿಕೆಯೂ ರಥಕ್ಕೆ ಸಲ್ಲಿಕೆಯಾಗಿದೆ. ಇದರೊಂದಿಗೆ ಕ್ರಿಕೆಟಿನಲ್ಲಿ ನೆಚ್ಚಿನ ತಂಡ ಗೆಲ್ಲಲಿ’ ಎಂಬುದನ್ನು ಸೇರಿ ಅನೇಕ ಬಗೆಯ ಬೇಡಿಕೆಗಳನ್ನು ಭಕ್ತರು ದೇವರಲ್ಲಿ ಕೇಳಿಕೊಂಡಿದ್ದಾರೆ. ಉತ್ಸವದ ಅಂಗವಾಗಿ ಮುಂಜಾನೆ ದೇವಾಲಯದಲ್ಲಿ ಶಾಂತಿಘಟಾದ್ಯಭಿಷೇಕ ದಂಡಬಲಿ, ಭೂತಬಲಿ ಸೇರಿದಂತೆ ವಿವಿಧ ದೈವಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯರ ಜೊತೆ ಪ್ರವಾಸಿಗರು ಸೇರಿ ಹರ ಹರ ಶಂಕರ ಎಂಬ ಘೋಷಣೆ ಮೊಳಗಿಸಿದರು. 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಯಾಗಿದ್ದು, ರಥ ಎಳೆಯುವ ಸಮಯದಲ್ಲಿ 20 ಸಾವಿರಕ್ಕೂ ಅಧಿಕ ಜನ ಜಮಾಯಿಸಿದ್ದರು.
- [ಕೊರಳಿಗೆ ಕೈ ಹಾಕಿದ ಕಳ್ಳ!](https://mobiletime.in/2026/02/a-thief-who-put-his-hand-on-your-throat/): ಕಾರವಾರಕ್ಕೆ ಹೋಗಿದ್ದ ಮುಂಡಗೋಡದ ಪ್ರಿಯಾ ರಾಠೋಡ್ ಅವರು ಕೊರಳಿನಲ್ಲಿದ್ದ ಚಿನ್ನದ ಸರ ಕಳೆದುಕೊಂಡಿದ್ದಾರೆ. ಅಪರಿಚಿತ ಬೈಕ್ ಸವಾರನೊಬ್ಬ ಅವರ ಕತ್ತಿಗೆ ಕೈ ಹಾಕಿ ಚಿನ್ನ ಅಪಹರಿಸಿದ್ದಾರೆ. ಮುಂಡಗೋಡು ಕುಸೂರಿನ ಪ್ರಿಯಾ ರೂಪಸಿಂಗ್ ರಾಠೋಡ್ ಅವರು ಕಾರವಾರದ ಖುರ್ಸವಾಡದಲ್ಲಿ ವಾಸವಾಗಿದ್ದಾರೆ. ಅಲ್ಲಿ ಪ್ಯಾರಾಮೆಡಿಕಲ್ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಫೆಬ್ರವರಿ 16ರಂದು ಮುಂಡಗೋಡಿನಿoದ ಅವರು ಕಾರವಾರಕ್ಕೆ ಆಗಮಿಸಿದ್ದು, ಕೋರ್ಟ ಸರ್ಕಲ್ ಬಳಿ ಅವರು ನಡೆದು ಹೋಗುತ್ತಿದ್ದರು. ಮಧ್ಯಾಹ್ನ ರೂಮಿನ ಕಡೆ ಹೊರಟಿದ್ದ ಪ್ರಿಯಾ ರಾಠೋಡ್ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಹಿಂಬಾಲಿಸಿದರು. ಬೈಕಿನಲ್ಲಿದ್ದ ಆ ಅಪರಿಚಿತ ವ್ಯಕ್ತಿ ಹಿಂದೆ-ಮುAದೆ ಸುತ್ತಾಟ ನಡೆಸಿದರು. ತಹಶೀಲ್ದಾರ್ ಕಚೇರಿ ದಾಟಿ ಗಿಡ್ಡಾರೋಡಿನ ಮೂಲಕ ಖುರ್ಸೆವಾಡಕ್ಕೆ ಹೋಗುವ ಬಿಸಿಎಂ ಹಾಸ್ಟೇಲ್ ಬಳಿ ಪ್ರಿಯಾ ರಾಠೋಡ್ ಅವರನ್ನು ಅಡ್ಡಗಟ್ಟಿದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಆ ವ್ಯಕ್ತಿ ನೇರವಾಗಿ ಪ್ರಿಯಾ ರಾಠೋಡ್ ಅವರ ಕೊರಳಿಗೆ ಕೈ ಹಾಕಿದರು. ಪ್ರಿಯಾ ರಾಠೋಡ್ ಅವರ ಕೊರಳಿನಲ್ಲಿ 5 ಗ್ರಾಂ ತೂಕದ ಚಿನ್ನದ ಸರವಿತ್ತು. 70 ಸಾವಿರ ರೂ ಮೌಲ್ಯದ
- [50 ಲಕ್ಷಕ್ಕೆ ಅಂಗಲಾಚಿದ ಶಾಸಕ!](https://mobiletime.in/2026/02/mla-who-sold-his-arm-for-50-lakhs/): `50 ಲಕ್ಷ ಅನುದಾನ ಕೋರಿ ಮುಖ್ಯಮಂತ್ರಿಗೆ ಮನವಿ ಮಾಡಿದರೂ ಅದನ್ನು ಕೊಟ್ಟಿಲ್ಲ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಾಲ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ಸಾವಿರ ದಿನದ ಸಾಧನೆ’ ಎಂದು ವ್ಯಂಗ್ಯವಾಡಿದ್ದಾರೆ. `ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳಲ್ಲಿ ಸಾಲ ಮಾಡಿದೆಯೇ ವಿನ: ಅಭಿವೃದ್ಧಿ ಮಾಡಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. `ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳು ಪೂರೈಸಿದ ಸಂಭ್ರಮಾಚರಣೆ ಮಾಡುತ್ತಿದೆ. ಆದರೆ ಈ ಸಾವಿರ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಮಾಡಿಲ್ಲ. ಬರೀ ಗ್ಯಾರಂಟಿ ಯೋಜನೆ ಕೊಟ್ಟರೆ ಪ್ರಯೋಜನವಿಲ್ಲ. ಮೂಲ ಸೌಕರ್ಯಗಳ ಅಭಿವೃದ್ಧಿಗೂ ಅನುದಾನ ಬರುತ್ತಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದ್ದಾರೆ. `ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ. ನನ್ನ ಕ್ಷೇತ್ರಕ್ಕೆ 50 ಲಕ್ಷ ಕೊಡಿ ಎಂದು ಸಿಎಂ ಬಳಿ ಕೇಳಿದರೂ ಅನುದಾನ ದೊರೆತಿಲ್ಲ. ಕಾಂಗ್ರೆಸ್ ಮುಖಂಡರು 30 ಕೋಟಿ ಸರ್ಕಾರ ಕೊಟ್ಟಿದೆ ಎಂದು ಹೇಳುತ್ತಿದ್ದು, ಎರಡು ವರ್ಷದಲ್ಲಿ ಸರ್ಕಾರ ಕೊಟ್ಟ ಹಣ ಎಲ್ಲಿಯೂ
- [ಅನಾರೋಗ್ಯ: ಆತ್ಮಹತ್ಯೆಗೆ ಶರಣಾದ ಅಜ್ಜ!](https://mobiletime.in/2026/02/illness-grandfather-commits-suicide/): ಏಳು ದಶಕಗಳ ಕಾಲ ಆರೋಗ್ಯವಂತ ಜೀವನ ನಡೆಸಿದ ಮುಂಡಗೋಡ ನಂದಿಕಟ್ಟಾದ ಬಾಬಣ್ಣ ತಳವಾರ್ ಅವರು ಆರು ವರ್ಷದ ಅನಾರೋಗ್ಯಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡ ರಾಮಾಪುರ ನಂದಿಕಟ್ಟಾದ ಬಾಬಣ್ಣ ರಾಜಪ್ಪ ತಳವಾರ (72) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಕಳೆದ ಆರು ವರ್ಷಗಳ ಹಿಂದೆ ಅವರಿಗೆ ಅನಾರೋಗ್ಯ ಕಾಡಿತು. ಎಲ್ಲಡೆ ಚಿಕಿತ್ಸೆಪಡೆದರೂ ಅದು ವಾಸಿಯಾಗಲಿಲ್ಲ. ವಿವಿಧ ಆಸ್ಪತ್ರೆಗಳ ಓಡಾಟ ಮಾಡಿದ ಬಾಬಣ್ಣ ತಳವಾರ್ ಅವರು ಬಗೆ ಬಗೆಯ ಚಿಕಿತ್ಸೆಗೆ ಒಳಗಾದರು. ಆಸ್ಪತ್ರೆ ಓಡಾಟ ಹಾಗೂ ಔಷಧಿಗಾಗಿ ಹಣ ಖರ್ಚಾಯಿತೇ ವಿನ: ಆರೋಗ್ಯ ಸುಧಾರಿಸಲಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಫೆಬ್ರವರಿ 16ರ ರಾತ್ರಿ ಅವರು ನೇಣಿಗೆ ಶರಣಾದರು. ಅಜ್ಜನ ಸಾವಿನ ಬಗ್ಗೆ ಹಾವೇರಿ ಹಾನಗಲ್ಲಿನ ದೇವರಾಜ ಶಂಬಣ್ಣ ಮಕರವಳ್ಳಿ ಮಾಹಿತಿ ನೀಡಿದ್ದು, ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದರು. `ಆತ್ಮಹತ್ಯೆ ಅಪರಾಧ’
- [ಬ್ಯಾಂಕ್ ಅಧ್ಯಕ್ಷರ ವಿರುದ್ಧ ಬಿಜೆಪಿ ಅಧ್ಯಕ್ಷರ ಆಕ್ರೋಶ!](https://mobiletime.in/2026/02/bjp-presidents-anger-against-bank-president/): ಅಡಿಕೆ ಬೆಳೆ ವಿಮೆ ಪರಿಹಾರದ ವಿಷಯವಾಗಿ ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ಮಾತನಾಡಿದ್ದು, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅವರ ನಿಲುವು ಖಂಡಿಸಿದ್ದಾರೆ. `ಬೆಳೆ ವಿಮೆ ಪರಿಹಾರ ಏಕೆ ಬರುತ್ತಿಲ್ಲ ಎಂದು ನನಗೂ ಅರ್ಥವಾಗುತ್ತಿಲ್ಲ. ಪ್ರತಿ ವರ್ಷ ಮಳೆ ಮಾಪನ ಯಂತ್ರ ಹಾಳಾಗುವುದು ಹಾಗೂ ಪರಿಹಾರ ವಿಳಂಬವಾಗುತ್ತಿರುವುದು ನನಗೂ ಅಚ್ಚರಿ ತಂದಿದೆ’ ಎಂದು ಶಿವರಾಮ ಹೆಬ್ಬಾರ್ ಅವರು ಹೇಳಿದ್ದರು. `ಬೆಳೆ ವಿಮಾ ಪರಿಹಾರ ತಡೆಯುವವರು ಯಾರು? ಅದನ್ನು ಕೊಡಿಸುವವರು ಯಾರು? ಎಂಬುದು ಅರ್ಥವಾಗದ ಹಾಗಾಗಿದೆ. ತಡೆ ಹಿಡಿಯುವುದು ಹಾಗೂ ಕೊನೆಗೆ ಮಂಜೂರು ಮಾಡಿಸುವುದು ಯಕ್ಷಪ್ರಶ್ನೆಯಾಗಿದೆ. ಇಷ್ಟು ವರ್ಷ ಸರಿಯಾಗಿದ್ದ ವ್ಯವಸ್ಥೆ ಈಗ ಎರಡು ವರ್ಷದಲ್ಲಿ ಮಾತ್ರ ಹೀಗಾಗುವುದು ಆಶ್ಚರ್ಯ. ವಿಮಾ ಪರಿಹಾರ ತಡೆ ಹಿಡಿಯುವವರೇ ಅದನ್ನು ಮಂಜೂರಿ ಮಾಡಿಸಿದ್ದೇವೆ ಎನ್ನುವುದು ಯಾವ ಕಾರಣಕ್ಕೆ?’ ಎಂದು ಪ್ರಶ್ನಿಸಿದ್ದರು. ಶಿವರಾಮ ಹೆಬ್ಬಾರ್ ಅವರು ಆಡಿದ ಈ ಮಾತುಗಳಿಗೆ ಪ್ರಸಾದ ಹೆಗಡೆ ತಿರುಗೇಟು ನೀಡಿದ್ದಾರೆ. `ಬೆಳೆ ವಿಮೆ ಪರಿಹಾರದ ವಿಷಯವಾಗಿ
- [ಖಾಲಿ ಚೆಕ್‌ ಹಿಡಿದು ಕಡ್ಡಿ ಆಡಿಸಿದ ಎಜೆಂಟ!](https://mobiletime.in/2026/02/an-agent-who-received-a-blank-check-and-played-with-a-stick/): ಅoಕೋಲಾ ಬೇಲಿಕೇರಿಯ ಅಮರನಾಥ ಭಾನಾವಳಿಕರ್ ಹಾಗೂ ಭಾವಿಕೇರಿಯ ಧನಂಜಯ ನಾಯ್ಕ ಅವರ ನಡುವೆ ಭೂಮಿ ಮಾರಾಟದ ವ್ಯವಹಾರ ನಡೆದಿದ್ದು, ಈ ವ್ಯವಹಾರದ ಮಧ್ಯವರ್ತಿ ಕೇಣಿ ಕಸಬಾದ ರಾಘು ನಾಯ್ಕ ಅವರು ಭದ್ರತೆಗೆ ನೀಡಿದ ಚೆಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅoಕೋಲಾದದ ಬೇಲಿಕೇರಿಯಲ್ಲಿ ಅಮರನಾಥ ಗಣಪತಿ ಭಾನಾವಳಿಕರ್ ಅವರು ವಾಸವಾಗಿದ್ದಾರೆ. ಮೀನುಗಾರಿಕೆ ನಡೆಸಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಭಾವಿಕೇರಿಯ ಧನಂಜಯ ನಾಯ್ಕ ಅವರಿಂದ ಅಮರತನಾಥ ಭಾನಾವಳಿಕರ್ ಅವರು ಮೊದಲು 5 ಗುಂಟೆ ಭೂಮಿ ಖರೀದಿಸಿದ್ದರು. ಅದಾದ ನಂತರ 2018ರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 8 ಗುಂಟೆ ಭೂಮಿ ಖರೀದಿ ಮಾತುಕಥೆ ಮಾಡಿದ್ದರು. ಆ ಭೂಮಿ ಖರೀದಿಗಾಗಿ ಅವರು ಯುನಿಯನ್ ಬ್ಯಾಂಕಿಗೆ ಸಾಲ ಕೇಳಿದ್ದು, ಸಾಲವೂ ಮಂಜೂರಿಯಾಗಿತ್ತು. ಆದರೆ, ಧನಂಜಯ ನಾಯ್ಕ ಅವರಿಂದ ಸಕಾಲದಲ್ಲಿ ಇ-ಸ್ವತ್ತು ದಾಖಲೆ ಸಿಗದ ಕಾರಣ ಸಾಲ ಸಿಕ್ಕಿರಲಿಲ್ಲ. ಅದಾಗಿಯೂ 2018ರ ಅಗಸ್ಟ 1ರಂದು ಅಮರನಾಥ ಭಾನಾವಳಿಕರ್ ಅವರು ಆ ಭೂಮಿ ಖರೀದಿ ಮಾಡಿದ್ದರು. ಆ ವೇಳೆ ಪೂರ್ಣ ಪ್ರಮಾಣದ ಹಣವಿಲ್ಲದ ಕಾರಣ ನಾಲ್ಕು
- [ಬಸ್ಸು ಅಡ್ಡಗಟ್ಟಿದ ಆನೆ!](https://mobiletime.in/2026/02/an-elephant-blocked-a-bus/): ಯಲ್ಲಾಪುರ-ಹಳಿಯಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸನ್ನು ಆನೆ ಅಡ್ಡಗಟ್ಟಿದೆ. ಭಾಗವತಿ ಸಮೀಪ ರಸ್ತೆ ಮೇಲೆ ಸಂಚರಿಸಿದ ಒಂಟಿ ಸಲಗ ಆ ಮಾರ್ಗದ ಪ್ರಯಾಣಿಕರನ್ನು ಕಾಡಿಸಿದೆ. ಕೆಲ ಸಮಯದ ನಂತರ ಆನೆ ಕಾಡು ಸೇರಿದ್ದು, ಬಸ್ಸಿನ ಜೊತೆ ಇನ್ನಿತರ ವಾಹನಗಳಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ದಾಂಡೇಲಿ ಸಮೀಪದ ಕಾಡಿನಲ್ಲಿ ಈಚೆಗೆ ಒಂಟಿ ಸಲಗದ ಓಡಾಟ ಜಾಸ್ತಿಯಾಗಿದೆ. ಬುಧವಾರ ಬೆಳಗ್ಗೆ ಯಲ್ಲಾಪುರ-ಹಳಿಯಾಳ ರಸ್ತೆಯಲ್ಲಿ ಆನೆ ಕಾಣಿಸಿದ್ದು, ಪ್ರಯಾಣಿಕರ ಜೊತೆ ಪ್ರವಾಸಿಗರು ಸಹ ಆನೆಯ ಚಲನ-ವಲನವನ್ನು ಕಣ್ತುಂಬಿಕೊoಡಿದ್ದಾರೆ. ಈ ಆನೆ ರಸ್ತೆ ತಡೆ ನಡೆಸಿದ್ದು ಬಿಟ್ಟರೆ ಯಾರಿಗೂ ಉಪದ್ರವ ನೀಡಿಲ್ಲ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ನಿರಂತರವಾಗಿ ಆನೆ ಕಾಣಿಸಿಕೊಳ್ಳುತ್ತಿದೆ. ಭಾಗವತಿ ಹಾಗೂ ಸುತ್ತಲಿನ ಜನ ಆನೆ ಕಾಟದಿಂದ ಬೇಸತ್ತಿದ್ದಾರೆ. ವಾರದ ಹಿಂದೆ ಬೊಮ್ಮನಳ್ಳಿ-ಅಂಬಿಕಾ ನಗರದ ಬಳಿ ಆನೆ ವಾಹನವನ್ನು ಅಡ್ಡಗಟ್ಟಿತ್ತು. ಅಲ್ಲಿಯೂ ಒಂಟಿ ಸಲಗ ಓಡಾಡಿದ ದೃಶ್ಯಾವಳಿಗಳು ಸೆರೆಯಾಗಿದ್ದವು. ಕುಳಗಿ, ಬೊಮ್ಮನಹಳ್ಳಿ, ಕೇಗದಾಳ ಮತ್ತು ಭಾಗವತಿ ಗ್ರಾಮಗಳಲ್ಲಿ ಆನೆ ಓಡಾಟ ಸಹಜವಾಗಿದ್ದು, ಇಲ್ಲಿನ
- [ಮಹಿಳೆಗೆ ಗುದ್ದಿದ ಬೈಕು: ಪರಿಸ್ಥಿತಿ ಗಂಭೀರ!](https://mobiletime.in/2026/02/woman-hit-by-bike-situation-serious-2/): ಮುರುಡೇಶ್ವರದ ಸಮೀಪ ರಸ್ತೆ ಬದಿಯಿಂದ ನಡೆದು ಹೋಗುತ್ತಿದ್ದ ಮಹಿಳೆಗೆ ಬೈಕು ಡಿಕ್ಕಿಯಾಗಿದ್ದು, ಗಾಯಗೊಂಡ ಆ ಮಹಿಳೆ ಪರಿಸ್ಥಿತಿ ಗಂಭೀರವಾಗಿದೆ. ಭಟ್ಕಳದ ಹಾಲಿಬಡ್ರು ಕಮಟೆಕೇರೆ ನಿವಾಸಿ ಗೌರಿ ಶನಿಯಾರ ದೇವಡಿಗ (66) ಅವರು ಬೈಕ್ ಗುದ್ದಿದ್ದರಿಂದ ನೋವು ಅನುಭವಿಸುತ್ತಿದ್ದಾರೆ. ಫೆ 16ರಂದು ಉತ್ತರಕೊಪ್ಪ-ಬಸ್ತಿ ರಸ್ತೆಯಲ್ಲಿ ಅವರು ನಡೆದು ಹೋಗುತ್ತಿದ್ದರು. ಉತ್ತರಕೊಪ್ಪ ಕಡೆಯಿಂದ ಬಸ್ತಿ ಕಡೆಗೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಹೆಗಡೆಗದ್ದೆಯ ರವಿ ಮಾಸ್ತಿ ನಾಯ್ಕ ಅವರು ಗೌರಿ ದೇವಾಡಿಗ ಅವರಿಗೆ ಹಿಂದಿನಿAದ ಡಿಕ್ಕಿ ಹೊಡೆದರು. ಹಾಲಿಬಡ್ರು ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಹತ್ತಿರ ಈ ಅಪಘಾತ ನಡೆದಿದ್ದು, ನಿಧಾನವಾಗಿ ನಡೆದು ಹೋಗುತ್ತಿದ್ದ ಗೌರಿ ನಾಯ್ಕ ಅವರಿಗೆ ವೇಗವಾಗಿ ಬಂದ ಬೈಕ್ ಗುದ್ದಿತು. ಆ ಡಿಕ್ಕಿ ರಭಸಕ್ಕೆ ಗೌರಿ ನಾಯ್ಕ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು. ಈ ಅಪಘಾತದ ಪರಿಣಾಮ ಗೌರಿ ನಾಯ್ಕ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್ ಸವಾರನಾದ ಉತ್ತರಕೊಪ್ಪ ಹೆಗಡೆಗದ್ದೆ ನಿವಾಸಿ ರವಿ
- [ಐದು ವರ್ಷದ ಅಧಿಕಾರ ಅವಧಿ ಮುಕ್ತಾಯ: ಸೇವೆ ಸಲ್ಲಿಸಿದ ಸದಸ್ಯರಿಗೆ ಸನ್ಮಾನ](https://mobiletime.in/2026/02/five-year-term-ends-honors-to-members-who-have-served/): ಯಲ್ಲಾಪುರದ ಆನಗೋಡು ಗ್ರಾಮ ಪಂಚಾಯತ ಅವಧಿಯ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಐದು ವರ್ಷದ ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದವರಿಗೆ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ಸನ್ಮಾನಿಸಿದೆ. 2021ರಲ್ಲಿ ಆನಗೋಡು ಗ್ರಾಮ ಪಂಚಾಯತ ಚುನಾವಣೆ ನಡೆದಿದ್ದು, ತೀವೃ ಪೈಪೋಟಿಯಿಂದ ಜನಪ್ರತಿನಿಧಿಗಳು ಆಯ್ಕೆ ಆಗಿದ್ದರು. ಮೊದಲ ಅವಧಿಗೆ ಪರಮೇಶ್ವರ ಗಾಂವ್ಕರ್ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಎರಡುವರೆ ವರ್ಷದ ನಂತರದ ಎರಡನೇ ಅವಧಿಗೆ ಮೀನಾಕ್ಷಿ ಭಟ್ಟ ಅವರು ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಆಯ್ಕೆ ಆದರು. ಅವರ ಅಧ್ಯಕ್ಷ ಅವಧಿಯಲ್ಲಿ ಉಳಿದ ಸದಸ್ಯರು ಗ್ರಾಮ ಪಂಚಾಯತ ಅಭಿವೃದ್ಧಿಗೆ ಶ್ರಮಿಸಿದ್ದು, ಅದರ ಪರಿಣಾಮವಾಗಿ ಕೆರೆ ನಿರ್ಮಾಣ, ಅಲ್ಲಲ್ಲಿ ರಸ್ತೆ ದುರಸ್ಥಿ, ಕಾಲುವೆ ನಿರ್ಮಾಣ ಸೇರಿ ವಿವಿಧ ಕೆಲಸಗಳು ನಡೆದಿವೆ. ವೈಯಕ್ತಿಕ ಕೆಲಸಗಳಿಗೂ ಗ್ರಾಮ ಪಂಚಾಯತ ಸಹಕಾರ ನೀಡಿದೆ. 2026ರ ಫೆಬ್ರವರಿ 8ರಂದು ಆ ಎಲ್ಲಾ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಈ ಹಿನ್ನಲೆ ಅಧಿಕಾರ ಅವಧಿ ಪೂರ್ಣಗೊಳಿಸಿದ ಗ್ರಾ ಪಂ ಸದಸ್ಯರಿಗೆ ಕಚೇರಿ ಸಿಬ್ಬಂದಿ ಗೌರವಿಸಿದ್ದಾರೆ.
- [ಕೊಲೆ ಪಾತಕನಿಗೆ ಕಠಿಣ ಶಿಕ್ಷೆ!](https://mobiletime.in/2026/02/severe-punishment-for-the-murderer/): ಪುಡಿಗಾಸಿನ ಆಸೆಗಾಗಿ ಸಿದ್ದಾಪುರದ ಪಿಗ್ಮಿ ಕಲೆಕ್ಟರ್ ಗೀತಾ ಹುಂಡೇಕರ್ ಅವರ ಉಸಿರುಗಟ್ಟಿಸಿ ಕೊಲೆ ಮಾಡಿದ ಅಭಿಜಿತ್ ಮಡಿವಾಳ್ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 21 ಸಾವಿರದ ಆಸೆಗಾಗಿ ವೃದ್ಧೆಯನ್ನು ಕೊಂದಿರುವುದಕ್ಕಾಗಿ ಅಭಿಜಿತ್ ಮಡಿವಾಳ ಅವರು ಜೀವನಪೂರ್ತಿ ಜೈಲು ಶಿಕ್ಷೆ ಅನುಭವಿಸಬೇಕಿದ್ದು, ಕಾಸಿಗಾಗಿ ಕೊಲೆ ಮಾಡುವವರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ನ್ಯಾಯಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ. ಸಿದ್ದಾಪುರದ ಸೊರಬಾ ರಸ್ತೆಯ ಡಿ ಸಿಲ್ವಾ ವೈನ್ಪ ಬಳಿ ಗೀತಾ ಹುಂಡೆಕರ್ ಅವರು ಒಂಟಿಯಾಗಿ ವಾಸವಾಗಿದ್ದರು. ವಿನಾಯಕ ಸೌಹಾರ್ದ ಕ್ರೆಡಿಟ್ ಸೊಸೈಟಿಯ ಪರವಾಗಿ ಪಿಗ್ಮಿ ಸಂಗ್ರಹ ಮಾಡುತ್ತಿದ್ದರು. ಅಲ್ಲಿಂದ ಬರುವ ಆದಾಯದಿಂದಲೇ ಹೆಣ್ಣು ಮಕ್ಕಳಿಬ್ಬರ ಮದುವೆ ಮಾಡಿದ್ದರು. 75ನೇ ವಯಸ್ಸಿನಲ್ಲಿಯೂ ಸಹ ಸಿದ್ದಾಪುರ ಪಟ್ಟಣದ ಎಲ್ಲಡೆ ಓಡಾಡಿ ಪಿಗ್ಮಿ ಸಂಗ್ರಹಿಸಿ ಅದರಿಂದ ಬರುವ ಕಮಿಷನ್ ಹಣದಲ್ಲಿಯೇ ತಮ್ಮ ಜೀವನ ನಡೆಸುತ್ತಿದ್ದರು. ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ಗೀತಾ ಹುಂಡೇಕರ್ ಅವರ ಮೇಲೆ ಅಭಿಜಿತ್ ಗಣಪತಿ ಮಡಿವಾಳ ಅವರ ಕಣ್ಣು ಬಿದ್ದಿತ್ತು. ಗೀತಾ ಹುಂಡೇಕರ್ ಅವರ
- [80 ಸಾವಿರ ಕದ್ದವ 10 ತಾಸಿನಲ್ಲಿಯೇ ಸಿಕ್ಕಿಬಿದ್ದ!](https://mobiletime.in/2026/02/the-thief-who-stole-80-thousand-was-caught-in-10-hours/): ಮನೆಯ ಸದಸ್ಯರೆಲ್ಲರೂ ನಿದ್ರೆಗೆ ಜಾರಿದಾಗ ಉಪಾಯವಾಗಿ ಆ ಮನೆಯೊಳಗೆ ಪ್ರವೇಶಿಸಿ ಕಳ್ಳತನ ಮಾಡಿದ್ದ ಹೊಟೇಲ್ ಸಪ್ಲಾಯರ್’ನನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ಕುಮಟಾ ಬಸ್ತಿಪೇಟೆ ಬಳಿಯ ರಾಕೇಶ ಚಂದ್ರಶೇಖರ್ ಗುಡಿಗಾರ ಅವರ ಮನೆಯಲ್ಲಿ ಫೆಬ್ರವರಿ 15ರ ರಾತ್ರಿ ಕಳ್ಳತನ ನಡೆದಿತ್ತು. ಮನೆಯ ಜನರೆಲ್ಲರೂ ನಿದ್ದೆಗೆ ಜಾರಿದ ನಂತರ ಆಗಮಿಸಿದ ಸೊರಬದ ಬಸವರಾಜ ಗೌಡ ಅವರು ಮನೆಯ ಕಿಟಕಿಯ ಶೆಡ್‌ನೆಟ್ ತುಂಡು ಮಾಡಿದ್ದರು. ನಂತರ ಅಲ್ಲಿಂದ ಬಾಗಿಲಿನ ಚಿಲಕ ತೆಗೆದು ಮನೆಯೊಳಗೆ ಪ್ರವೇಶಿಸಿದ್ದರು. ಮನೆಯ ಮೂಲೆ ಮೂಲೆಯನ್ನು ಶೋಧಿಸಿದ ಬಸವರಾಜ ಗೌಡ ಅವರು ಅಲ್ಲಿದ್ದ 80 ಸಾವಿರ ರೂ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ವೇಳೆ ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇದ್ದು, ಕಳ್ಳತನ ನಡೆದಿರುವುದು ಅವರ ಅರಿವಿಗೆ ಬಂದಿರಲಿಲ್ಲ. ಈ ಬಗ್ಗೆ ರಾಕೇಶ ಗುಡಿಗಾರ ಅವರು ಕುಮಟಾ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಪಿಐ ಯೋಗೇಶ ಕೆ ಎಂ, ಪಿಸೈ ಮಯೂರ ಪಟ್ಟಣಶೆಟ್ಟಿ, ಸಿಬ್ಬಂದಿ
- [ರೋಜರಿ ಶಾಲೆ ಮಕ್ಕಳು ಇನ್ನಷ್ಟು ಸ್ಮಾರ್ಟ್](https://mobiletime.in/2026/02/rosary-school-children-are-even-smarter/): ಯಲ್ಲಾಪುರದ ಹೋಲಿ ರೋಜರಿ ಶಾಲೆಗೆ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ಅವರು ಸ್ಮಾರ್ಟ ಬೋರ್ಡ ನೀಡಿದ್ದಾರೆ. ತಮಗೆ ಲಭ್ಯವಿರುವ ಸರ್ಕಾರಿ ಅನುದಾನವನ್ನು ಅವರು ಶೈಕ್ಷಣಿಕ ಸೇವೆಗೆ ಕೊಟ್ಟಿದ್ದಾರೆ. ಸ್ಮಾರ್ಟ ಬೋರ್ಡ ಉದ್ಘಾಟನೆ ನಂತರ `ಆಧುನಿಕ ತಂತ್ರಜ್ಞಾನಗಳು ಮನುಷ್ಯನ ಬದುಕಿಗೆ ಪೂರಕವಾಗಿದೆ. ವಿದ್ಯಾರ್ಥಿಯ ಜೀವನ ಮಟ್ಟ ಹೆಚ್ಚಿಸುವಲ್ಲಿ ತಂತ್ರಜ್ಞಾನದ ಕೊಡುಗೆ ಅಪಾರ’ ಎಂದು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ಅವರು ಹೇಳಿದ್ದಾರೆ. `ಮಕ್ಕಳ ಹಾಗೂ ಶಿಕ್ಷಕರ ಕಲಿಕಾ ಪದ್ಧತಿಗೆ ಸ್ಮಾರ್ಟ ಬೋರ್ಡ ನೆರವಾಗಲಿದೆ. ಇದರಿಂದ ಉತ್ತಮ ಫಲಿತಾಂಶಪಡೆಯಲು ಸಾಧ್ಯವಿದೆ’ ಎಂದವರು ಹೇಳಿದ್ದಾರೆ. `ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು. ಸಂಸ್ಕಾರಯುತವಾದ ಜೀವನ ಕಟ್ಟಿಕೊಳ್ಳಬೇಕು’ ಎಂದವರು ಕರೆ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಅಜಯ್ ನಾಯಕ್, ತಾಲೂಕ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಎಸ್ ಎಸ್ ಸಿ ವಿಜ್ಞಾನ ಬಳಗದ ಜಿಲ್ಲಾ ಅಧ್ಯಕ್ಷರು ಹಾಗೂ ವಿಜ್ಞಾನ ಪರಿಷತ್ತಿನ ಸಂಚಾಲಕ ಎಂ

## Pages

- [Janamata](https://mobiletime.in/yellapur-assembly-constituency-who-is-our-leader-who-is-the-next-mla/)
- [Home](https://mobiletime.in/): [vc_row][vc_column][jnews_element_newsticker newsticker_title=”NEWSFLASH” number_post=”5″ post_offset=”0″][jnews_hero_13][jnews_element_ads ads_type=”image” ads_image_new_tab=”yes” ads_image=”95″ ads_image_link=”http://bit.ly/jnewsio” ads_image_alt=”JKreativ”][/jnews_element_ads][/vc_column][/vc_row][vc_row][vc_column width=”2/3″][jnews_block_7 header_type=”heading_8″ number_post=”6″ post_offset=”0″ excerpt_length=”20″ pagination_mode=”scrollload” pagination_number_post=”4″ pagination_scroll_limit=”0″ first_title=”THE” second_title=”LATEST”][/jnews_block_7][/vc_column][vc_column width=”1/3″ sticky_sidebar=”yes” set_as_sidebar=”yes”][jnews_block_19 header_type=”heading_8″ number_post=”5″ post_offset=”0″ sort_by=”popular_post” first_title=”MOST” second_title=”POPULAR”][jnews_element_ads ads_type=”image” ads_image_new_tab=”yes” ads_image=”94″ ads_image_link=”http://bit.ly/jnewsio”][/jnews_element_ads][/vc_column][/vc_row][vc_row][vc_column width=”2/3″][jnews_block_2 header_type=”heading_8″ number_post=”5″ post_offset=”0″ unique_content=”unique1″ excerpt_length=”20″ pagination_mode=”loadmore” pagination_number_post=”4″ first_title=”THE” second_title=”FEATURED”][/vc_column][vc_column width=”1/3″ sticky_sidebar=”yes” set_as_sidebar=”yes”][jnews_block_21 header_type=”heading_8″ number_post=”5″ post_offset=”0″ unique_content=”unique2″ first_title=”THE” second_title=”HOTTEST”][jnews_element_ads ads_type=”image” ads_image_new_tab=”yes” ads_image=”94″ ads_image_link=”http://bit.ly/jnewsio”][/jnews_element_ads][jnews_block_21 header_type=”heading_8″ number_post=”4″ post_offset=”0″ unique_content=”unique2″ sort_by=”popular_post_month” first_title=”THE” second_title=”RISING”][/vc_column][/vc_row][vc_row][vc_column][jnews_element_ads ads_type=”image” ads_image_new_tab=”yes” ads_image=”97″ ads_image_link=”http://bit.ly/jnewsio” ads_image_alt=”JKreativ”][/jnews_element_ads][/vc_column][/vc_row]

## Products

- [Happilo Premium Date Bites Cranberry Reusable Tins 200g](https://mobiletime.in/product/happilo-premium-date-bites-cranberry-reusable-tins-200g/): Happilo Premium Date Bites Cranberry Reusable Tins 200g
- [Happilo Essentials Raw Peanut 500g](https://mobiletime.in/product/happilo-essentials-raw-peanut-500g/): Happilo Essentials Raw Peanuts offer a pure and unprocessed snacking experience. With no additives or preservatives, these peanuts maintain their authentic flavor, providing a versatile and satisfying crunch for any snacking occasion. As a protein powerhouse, raw peanuts support muscle health and offer a delicious source of plant-based protein. Rich in healthy fats, they contribute to heart health and satiety, making them a guilt-free indulgence. Beyond taste, these peanuts are a natural source of essential nutrients, adding a wholesome boost to your daily diet. Choose Happilo Essentials for a snack that prioritizes purity and nutritional value in every bite.
- [Happilo Dry Fruit Celebrations Gift Box Dove 127g](https://mobiletime.in/product/happilo-dry-fruit-celebrations-gift-box-dove-127g/): Happilo’s Celebration Premium Dry Fruit Combo Gift Pack is a festive assortment of nuts, raisins, Date Bites, and savory snacks. Ideal for gifting or sharing, it includes favorites like almonds, cashews, green raisins, and party snacks. Each pack is sealed for freshness and thoughtfully presented in a premium festive box.
- [Happilo Dry Fruit Celebrations Gift Box Robin 252g](https://mobiletime.in/product/happilo-dry-fruit-celebrations-gift-box-robin-252g/): Celebrate with the Happilo Robin Gift Pack, a premium dry fruit collection featuring Californian Almonds, Whole Cashew Nuts, Date Bites, Panchmeva, Party Snack, and a Pista Dryfruit Sweet Bar. Perfect for festive gifting or healthy snacking, each pack is hygienically sealed to ensure freshness and taste.
- [Happilo Premium Plain Prasadam Makhana 200g](https://mobiletime.in/product/happilo-premium-plain-prasadam-makhana-200g/): Happilo Premium Plain Prasadam Makhana is a delightful and healthy snack made from high-quality fox nuts. Light, and delicious, this makhana is perfect for snacking, adding to recipes, or enjoying during fasting. Rich in protein, fiber, and essential nutrients, it offers a guilt-free snacking experience. Packed in a convenient resealable pouch, Happilo ensures that you get the freshest and best-tasting makhana every time.
- [Happilo Premium Super Soft Kimia Dates 500g](https://mobiletime.in/product/happilo-premium-super-soft-kimia-dates-500g/): Soft Kimia dates are medium to large in size and have a dark brown, almost black, color. They have a wrinkled appearance and a slightly glossy texture.
- [Happilo Premium Date Bites Tin 200g](https://mobiletime.in/product/happilo-premium-date-bites-tin-200g/): Celebrate moments of joy with the Happilo Celebration Date Bites Gift Box, a luxurious blend of premium dates, cashews, Californian almonds, pistachios, honey, and ghee. This wholesome and indulgent treat is perfect for gifting or savoring during special occasions.
- [Happilo Premium Californian Almonds Roasted & Salted 200g](https://mobiletime.in/product/happilo-premium-californian-almonds-roasted-salted-200g/): Happilo’s Premium Californian Almonds Roasted & Salted are expertly roasted to perfection and lightly salted to enhance their natural flavor. These crunchy, nutrient-rich almonds are sourced from the finest Californian farms and packed to ensure freshness. Ideal for snacking, they offer a delicious combination of taste and health in every bite, perfect for any time of the day.
- [Happilo 100% Natural Jumbo Californian Almonds 400g (Pack of 2)](https://mobiletime.in/product/happilo-100-natural-jumbo-californian-almonds-400g-pack-of-2/): Happilo 100% Natural Jumbo Californian Almonds (Pack of 2) 400g
- [Early Harvest Washed Process - Medium Roast Specialty Coffee - 250 g  - Whole Bean](https://mobiletime.in/product/early-harvest-washed-process-medium-roast-specialty-coffee-250-g-whole-bean/): With its berry, citrus and herbaceous notes, this coffee is for connoisseurs who like a light-bodied coffee with intense aromas. Medium Roast,Coarse Grind, Cherries, Green apples, Star Fruits, Lime Citrus and Honey, Best enjoyed hand-brewed with a Chemex, V60 or French Press. 6 months Shelf Life, 100% Arabica coffee beans
- [Happilo Soft Kimia Black Dates Tub 500g](https://mobiletime.in/product/happilo-soft-kimia-black-dates-tub-500g/): Happilo Soft Kimia Black Dates Tub 500g
- [Desi Utthana Organics Urad Dal 500GMS](https://mobiletime.in/product/desi-utthana-organics-urad-dal-500gms/): Urad Dal 500GMS
- [Desi Utthana Organic Almonds 50g](https://mobiletime.in/product/desi-utthana-organic-almonds-50g/): Packed with plant-based protein, healthy fats, fiber, and essential vitamins like Vitamin E and magnesium, they make for a powerhouse of nutrition. Perfect as a wholesome snack, for baking, blending into smoothies, or adding crunch to salads and breakfast bowls. Key Features: 100% certified organic, non-GMO, and chemical-free Premium A-grade almonds with natural crunch and flavor Rich source of protein, antioxidants, and healthy fats Ideal for snacking, cooking, and traditional sweets Packed hygienically to preserve freshness


[comment]: # (Generated by Hostinger Tools Plugin)

Document

llms-full.txt

Not stored for this site.